ರಾಯಚೂರು

ಜಿಲ್ಲಾ ಶಿಕ್ಷಕ ರತ್ನ ಪ್ರಶಸ್ತಿಗೆ ಆಯ್ಕೆ

Published On :

ರಾಯಚೂರು: ಜಿಲ್ಲೆಯ ಪ್ರತಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಶಿಫಾರ್ಸಿನ ಮೇರೆಗೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಆಯ್ಕೆಯಂತೆ ಶಿಕ್ಷಕರ ದಿನಾಚರಣೆ ಅಂಗವಾಗಿ ಕಳಸ ಪ್ರತಿಷ್ಠಾನ ರಾಯಚೂರು ವತಿಯಿಂದ ಶ್ರೀಮತಿ ಶಿವಮ್ಮ ಶಿವಶರಣಪ್ಪ ಕಳಸ ಸ್ಮರಣಾರ್ಥ ಶಿಕ್ಷಕರಿಗೆ ರಾಯಚೂರು ಜಿಲ್ಲಾ ಶಿಕ್ಷಕ ರತ್ನ-2013 ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದೆಂದು ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ಕಳಸ ತಿಳಿಸಿದ್ದಾರೆ.
ದೇಶದ ಮಾಜಿ ರಾಷ್ಟ್ರಪತಿ ಹಾಗೂ ಶಿಕ್ಷಣ ಪ್ರೇಮಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನೋತ್ಸವ ನಿಮಿತ್ತ ಸೆ. 5ರಂದು ಬೆಳಗ್ಗೆ 11 ಗಂಟೆಗೆ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲ್ಪಡುವ ಕಾರ್ಯಕ್ರಮದಲ್ಲಿ ಜಿಲ್ಲೆಯ ಲಿಂಗಸ್ಗೂರು ತಾಲೂಕಿನ ಹಟ್ಟಿ ಚಿನ್ನದಗಣಿಯ ಸರ್ಕಾರಿ ಪಪೂ ಕಾಲೇಜು ಪ್ರೌಢ ಶಾಲಾ ವಿಭಾಗದ ಚಿತ್ರಬಾಯಿ, ಸ.ಹಿ.ಪ್ರಾ.ಶಾಲೆ ಛತ್ತರ ಮುಖ್ಯಗುರು ಶ್ಯಾಮಸುಂದರ, ದೇವದುರ್ಗ ತಾಲೂಕಿನ ಸ.ಪ್ರೌ.ಶಾಲೆ ಗಲಗ ಸಂತೋಷ, ಸ.ಮಾ.ಬಾ.ಹಿ.ಪ್ರಾ.ಶಾಲೆ ಗಬ್ಬೂರ ಚಂದ್ರಕಲಾದೇವಿ,  ಮಾನವಿ ಬಾ.ಸ.ಪ್ರೌ.ಶಾಲೆ ಮುಖ್ಯಗುರು ನಾಗಮ್ಮ, ಸ.ಹಿ.ಪ್ರಾ. ಶಾಲೆ ಬಸಾಪುರ ಎಸ್.ಎಸ್. ರವೀಶ್, ರಾಯಚೂರು ತಾಲೂಕಿನ ಕುವೆಂಪು ಮಾ.ಹಿ.ಪ್ರಾ.ಶಾಲೆ ಮರ್ಚೇಡ್‌ನ ಸವಿತಾ, ಸ.ಪ್ರೌ.ಶಾಲೆ ಗಾಜಗಾರಪೇಟೆ ಸಿದ್ರಾಮರೆಡ್ಡಿ, ಸಿಂಧನೂರು ತಾಲೂಕಿನ ವಳಬಳ್ಳಾರಿ ಚನ್ನಬಸವೇಶ್ವರ ಪ್ರೌಢಶಾಲೆ ಗುಡದೂರು ಮುಖ್ಯಗುರು ಪಂಪಾಪತೆಪ್ಪ, ಕಸ್ತೂರಿಗಾಂಧಿ ಬಾಲಕಿಯರ ವಿದ್ಯಾಲಯ ವಸತಿ ಶಾಲೆ ವಲ್ಕಂದಿನ್ನಿ ಮುಖ್ಯಗುರು ವನಜಾಕ್ಷಿ ಇವರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕಳಸ ಪ್ರತಿಷ್ಠಾನ ರಾಯಚೂರು ವತಿಯಿಂದ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.