ರಾಯಚೂರು

ಬಸವಣ್ಣನ ವಚನಗಳಿಗೆ ಜೀವ ಕಾರುಣ್ಯವೇ ಮೂಲ ದ್ರವ್ಯ

Published On :

ಕನ್ನಡಪ್ರಭ ವಾರ್ತೆ ,  ಸಿಂಧನೂರು ,  ಸೆ.5
ಬಸವಣ್ಣನ ಪ್ರತಿಯೊಂದು ವಚನಗಳಿಗೆ ಜೀವ ಕಾರುಣ್ಯವೇ ಮೂಲ ದ್ರವ್ಯವಾಗಿದೆ. ಜೀವಕಾರುಣ್ಯವಿರುವ ಮನುಷ್ಯನ ಬದುಕಿನಲ್ಲಿ ದುಃಖವೇ ಇಲ್ಲವೆಂದು ಖ್ಯಾತ ಚಿಂತಕ ಹಾಗೂ ಸಾಹಿತಿ ರಂಜಾನ ದರ್ಗಾ ವ್ಯಾಖ್ಯಾನಿಸಿದರು.
ನಗರದ ಬಸವಕೇಂದ್ರ, ಯುವ ಬಸವಕೇಂದ್ರ, ಬಸವ ಚಾರಿಟಬಲ್ ಟ್ರಸ್ಟ್ ಮತ್ತು ಮಹಿಳಾ ಬಸವಕೇಂದ್ರದಿಂದ ಶ್ರಾವಣ ಮಾಸದ ಬಸವಜ್ಯೋತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
“¥Ú¾æß’ ಶಬ್ದವೇ ಬಸವ ಧರ್ಮದ ಆಧಾರ: ದಯೆ ಎಂಬ ಶಬ್ದವೇ ಬಸವ ಧರ್ಮದ ಆಧಾರ. ದಯೆ ಎನ್ನುವ ಶಬ್ದವೇ ಲಿಂಗಾಯತ ಧರ್ಮದ ಆಧಾರವಾಗಿದೆ. ಅರಿವು ಮತ್ತು ಆಚಾರವನ್ನು ದಯೆ ಎಂಬದು ಒರೆಗಲ್ಲಿಗೆ ಹಚ್ಚುವ ಮೂಲಕ ಮಾನವೀಯತೆಯನ್ನು ಮೆರೆದ ಶರಣರ ಆದರ್ಶಗಳು ಸಾರ್ವಕಾಲಿಕವಾಗಿದೆ. ಕಾರಣ ಬಸವಾಭಿಮಾನಿಗಳ ಮೇಲೆ ಸಮಾಜ ಸರ್ವಾಂಗ ಸುಂದರಗೊಳಿಸುವ ಬಹುದೊಡ್ಡ ಜವಾಬ್ದಾರಿಯಿದೆ ಎಂದರು.
ವಿವಿಧ ಸಮುದಾಯದ ಭಾಷೆ, ಸಂಸ್ಕೃತಿಯ ಜನತೆಯ ಆತ್ಮಗೌರವ ಹೆಚ್ಚಿಸಿದ ಮತ್ತು ಪ್ರಸ್ತುತ ಸಂವಿಧಾನ ಪ್ರಜಾಪ್ರಭುತ್ವದ ಆಶಯಗಳನ್ನು ಹೊಂದಿದ ಬಸವ ಧರ್ಮ ಅನುಷ್ಠಾನದಲ್ಲಿ ಸೋಲುಂಡರೆ ಜಗತ್ತೇ ನಾಶವಾಗುತ್ತದೆ. ಮನುಷ್ಯ ರಾಕ್ಷಸವಾಗುತ್ತ ಎಲ್ಲ ಧರ್ಮದ ತತ್ವಗಳು ದಯಾ ಸಾಗರವೆಂಬ ಬಸವ ಧರ್ಮದ ಹೃದಯದಲ್ಲಿವೆ. ಕಳಬೇಡ ಕೊಲಬೇಡ, ಹುಸಿಯ ನುಡಿಯಲುಬೇಡ ಇದಿರು ಹಳಿಯಲುಬೇಡ, ತನ್ನ ಬಣ್ಣಿಸಬೇಡ, ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ ಎನ್ನುವ ಸಪ್ತ ಶೀಲಗಳೇ ಬಸವಣ್ಣನ ವಿಶ್ವಧರ್ಮದ ರಹಸ್ಯವಾಗಿದೆ ಎಂದು ದರ್ಗಾ ತಿಳಿಸಿದರು.
ಬಂಧ ವಿಮೋಚನೆ: ಮನುಷ್ಯನನ್ನು ಎಲ್ಲ ಬಂಧನಗಳಿಂದ ವಿಮೋಚನೆಗೊಳಿಸಿ ನವ ಮನುಷ್ಯನನ್ನಾಗಿ ತಯಾರಿಸುವ ವಿಶಿಷ್ಟ ಧರ್ಮವಾಗಿದೆ. ದೇವರು ಮಾನವನ ಉಗಮಕ್ಕೆ ಕಾರಣವಾದರೆ ಶರಣರು ನವಮಾನವನ ಸೃಷ್ಟಿಗೆ ಶರಣರು ಶ್ರಮಿಸಿದ್ದಾರೆ.
ಶೇ.90ರಷ್ಟು ಶೂದ್ರರು 12ನೇ ಶತಮಾನದ ಶರಣರಲ್ಲಿ 90ರಷ್ಟು ಜನರು ಶೂದ್ರ ಸಮುದಾಯದವರೇ ಆಗಿದ್ದು ನಿರಕ್ಷರಿಗಳಿಗೆ ಅಕ್ಷರಜ್ಞಾನ ನೀಡಿದ ಶ್ರೇಯಸ್ಸು ಬಸವಣ್ಣನವರಿಗಿದೆ. ಕಾಯಕಕ್ಕೆ ವಿಶೇಷ ಮಹತ್ವವನ್ನು ನೀಡುವ ಮೂಲಕ ಎಲ್ಲರಲ್ಲೂ ಆತ್ಮಗೌರವ ಮೂಡುವಂತೆ ಮಾಡಿದ ಸಾಧನೆಯೂ ಅವರಿಗೇ ಸಲ್ಲಬೇಕಾಗಿದೆ ಎಂದರು.
ವಯಸ್ಕರ ಶಿಕ್ಷಣ 12ನೇ ಶತಮಾನದಲ್ಲೇ ಆರಂಭ: ಇಂಗ್ಲೆಂಡಿನಲ್ಲಿ ಮಹಿಳೆಯರಿಗೆ ಶಿಕ್ಷಣ ಪಡೆಯುವ ಅವಕಾಶ ಕೊಡುವ ಪೂರ್ವದಲ್ಲಿ ವಚನಕಾರರು ಸ್ತ್ರೀಸಮಾನತೆ ನೀಡಿದರು. ಇತಿಹಾಸದಲ್ಲಿ ಬ್ರೇಜಿಲ್‌ನಲ್ಲಿ ಪ್ರಥಮವಾಗಿ ವಯಸ್ಕರ ಶಿಕ್ಷಣ ಪ್ರಾರಂಭಿಸಲಾಗಿದೆ ಎಂದು ಹೇಳಲಾಗಿದೆ. ನಿಜಕ್ಕೂ ವಯಸ್ಕರ ಶಿಕ್ಷಣ 12ನೇ ಶತಮಾನದಲ್ಲಿ ಪ್ರಾರಂಭವಾಗಿದೆ ಎಂದು ರಂಜಾನ್ ದರ್ಗಾ ಪ್ರತಿಪಾದಿಸಿದರು.
ಶರಣರು ಜಂಗಮ ಲಿಂಗವೇ ದೇವರೆಂದು ತಿಳಿದಿದ್ದರು. ಸಮಾಜವನ್ನೇ ದೇವರೆಂದು ತಿಳಿದು ಸೇವೆ ಮಾಡುವರನ್ನು ಜಂಗಮರೆಂದು ಭಾವಿಸಿದ್ದರು ಎಂದು ಹೇಳಿದರು.
ಸ್ವರ್ಗ- ನರಕ ಇಲ್ಲ: ಬಸವ ಧರ್ಮದಲ್ಲಿ ಸ್ವರ್ಗ- ನರಕ, ಪಾಪ- ಪುಣ್ಯಗಳಿಲ್ಲ, ಮೋಕ್ಷ-ಪುನರ್ಜನ್ಮಗಳಿಲ್ಲ, ಪಾಪ-ಪುಣ್ಯಗಳಿಲ್ಲ. ಆಸೆಗಳಿಗೆ ಮುಕ್ತರಾಗುವುದನ್ನೇ ಲಿಂಗಾಯತ ಧರ್ಮದಲ್ಲಿ ಲಿಂಗೈಕ್ಯವೆನ್ನಲಾಗಿದೆ. ಬಸವಣ್ಣ ಆರ್ಥಿಕ ತಜ್ಞನಾಗಿ, ಸಮಾಜಶಾಸ್ತ್ರಜ್ಞನಾಗಿ, ಮನೋಜ್ಞಾನಿಯಾಗಿ, ಆಡಳಿತಗಾರನಾಗಿ, ಸಂವಿಧಾನ ತಜ್ಞನಾಗಿ ಸಾಮಾಜಿಕ ನಿಧಿಯನ್ನು ಸ್ಥಾಪಿಸಿ ಕಲ್ಯಾಣ ಸಾಮ್ರಾಜ್ಯ ಕಟ್ಟಿದ್ದಾನೆಂದು ದರ್ಗಾ ವಿವರಿಸಿದರು.
ಪ್ರಾಸ್ತಾವಿಕವಾಗಿ ಡಾ. ಶಿವರಾಜ ಮಾತನಾಡಿದರು. ಶಾಸಕ ಪ್ರತಾಪಗೌಡ ಪಾಟೀಲ್ ಸಮಾರಂಭವನ್ನು ಉದ್ಘಾಟಿಸಿದರು. ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ದರ್ಗಾ ಅವರು ರಚಿಸಿದ ಬಸವನಿಂದ ಬದುಕಿತೇ ಲೋಕ ಗ್ರಂಥ ಬಿಡುಗಡೆಗೊಳಿಸಿದರು. ಶಾಸಕ ಹಂಪನಗೌಡ ಬಾದರ್ಲಿ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ವೆಂಕಟರಾವ್ ನಾಡಗೌಡ, ರೈತ ಮುಖಂಡ ಹನುಮನಗೌಡ ಬೆಳಗುರ್ಕಿ, ವೀರಶೈವ ಸಮಾಜದ ಅಧ್ಯಕ್ಷ ಅಶೋಕಗೌಡ ಗದ್ರಟಗಿ, ಬಸವ ಕೇಂದ್ರದ ಅಧ್ಯಕ್ಷ ಗುಂಡಪ್ಪ ಬಳಿಗಾರ, ಯುವ ಬಸವಕೇಂದ್ರದ ಅಧ್ಯಕ್ಷ ಚಂದ್ರಶೇಖರ ಯರದಿಹಾಳ ಮತ್ತಿತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.