ಮಧ್ಯಸ್ಥಿಕೆದಾರರಿಗೆ ವಾಸ್ತವದ ಅರಿವಿರಲಿ
ಕನ್ನಡಪ್ರಭ ವಾರ್ತೆ, ರಾಯಚೂರು, ಸೆ.6
ಮಧ್ಯಸ್ಥಿಕೆದಾರರಿಗೆ ಕಾನೂನು ಜ್ಞಾನದ ಜತೆ ಜತೆಗೆ ಜನರ ಆಗುಹೋಗುಗಳ ಬಗ್ಗೆ ಅರಿವು ಹೊಂದಿರುವುದು ಅವಶ್ಯಕ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಪಿ.ಕೃಷ್ಣ ಭಟ್ ಹೇಳಿದರು.
ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಮಧ್ಯಸ್ಥಿಕೆದಾರರ ಎರಡು ದಿನಗಳ ಪುನಶ್ಚೇತನ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ, ನ್ಯಾಯ ಪಂಚಾಯಿತಿ ವ್ಯವಸ್ಥೆ ದೇಶದ ಜನತೆಗೆ ಹೊಸದೇನಲ್ಲ. ಹಿಂದಿನ ರಾಮಾಯಣ, ಮಹಾಭಾರತ ಕಾಲದಿಂದಲೂ ನ್ಯಾಯ ಪಂಚಾಯತಿಗಳ ಮೂಲಕ ಗ್ರಾಮಗಳಲ್ಲಿ ಅನೇಕ ವ್ಯಾಜ್ಯಗಳು ಪರಿಹಾರ ಕಂಡಿವೆ ಎಂದು ಹೇಳಿದರು.
ವಕೀಲರಿಗೆ ಬದ್ಧತೆಯಿರಲಿ: ಮಧ್ಯಸ್ಥಿಕೆದಾರರಾಗಿ ನ್ಯಾಯ ನಿರ್ಣಯಿಸುವಾಗ ರಾಗ ದ್ವೇಷಗಳು ಮರೆಯಾಗಿ ನ್ಯಾಯದ ಪರ ವಾಲುವ ಸಂಸ್ಕೃತಿ ನಮ್ಮ ಭಾರತ ದೇಶದ ಸಂಸ್ಕೃತಿ ಆಗಿದೆ ಎಂಬುದನ್ನು ಎಲ್ಲರೂ ಗಮನದಲ್ಲಿಟ್ಟುಕೊಳ್ಳುವುದು ಸೂಕ್ತ. ಕಾನೂನು ಮತ್ತು ಹಕ್ಕುಗಳ ಆಧಾರದಲ್ಲಿ ನ್ಯಾಯದ ನಿರ್ಣಯವಾಗಬೇಕೆಂದ ಅವರು, ಹಿರಿಯ ಹಾಗೂ ಉತ್ಸಾಹಿ ಯುವ ವಕೀಲರು ಬದ್ಧತೆಯಿಂದ ಕೆಲಸ ನಿರ್ವಹಿಸಲು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ರಾಜಾ ಪಾಂಡುರಂಗ ನಾಯಕ್ ಅವರು, ವಕೀಲರು ಸಹ ಎಲ್ಲರನ್ನೂ ಸಮಾನವಾಗಿ ಕಾಣುವ ಮೂಲಕ ನ್ಯಾಯ ದೊರಕಿಸಿ ಕೊಡುವಲ್ಲಿ ಪ್ರಯತ್ನಿಸಬೇಕೆಂದರು.
ಹಿರಿಯ ವ್ಯವಹಾರಿಕ ನ್ಯಾಯಾಧೀಶ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿಗಳಾದ ಮಹ್ಮದ್ ಮುಜಾಹಿದುಲ್ಲಾ, ನ್ಯಾಯಾಧೀಶರಾದ ಸೋಮಶೇಖರ, ಹನುಮಂತಪ್ಪ, ತರಬೇತಿದಾರರಾಗಿ ಎಸ್. ಎನ್. ಸುಧಾ, ಎಂ. ಜ್ಯೋತಿ, ಚಂದ್ರಮೋಹನ್ ಮತ್ತಿತರರಿದ್ದರು.
ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿರುವ 50ಕ್ಕೂ ಹೆಚ್ಚಿನ ಸಂಖ್ಯೆಯ ನ್ಯಾಯವಾದಿಗಳು ಪಾಲ್ಗೊಂಡಿದ್ದಾರೆ.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

