ರಾಯಚೂರು

ಹೆಡಗಿನಹಾಳ:ಮರಳು ಸಾಗಣೆಗೆ ತಡೆಗೆ ಮನವಿ

Published On :

ಕನ್ನಡಪ್ರಭ ವಾರ್ತೆ, ಸಿಂಧನೂರು, ಸೆ.6
ತಾಲೂಕಿನ ಹೆಡಗಿನಾಳ ಗ್ರಾಮದಿಂದ ಬೆಂಗಳೂರಿಗೆ ಅಕ್ರಮ ಮರಳು ಸಾಗಣೆ ಮಾಡುತ್ತಿರುವುದನ್ನು ತಡೆಯಲು ಸಿರುಗುಪ್ಪ ತಾಲೂಕು ಅಖಿಲ ಭಾರತ ಮಾನವ ಹಕ್ಕುಗಳ ಸಂಘದಿಂದ ತಹಸೀಲ್ದಾರ್ ವೆಂಕನಗೌಡ ಆರ್.ಪಾಟೀಲರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ನಂತರ ಮಾತನಾಡಿದ ಸಂಘದ ಅಧ್ಯಕ್ಷ ಬಿ.ವಿ.ಶಂಕರ್ ಮಾತನಾಡಿ, ತಾಲೂಕು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಂದ ಸಾಧಾರಣ ಮರಳು ಸಾಗಣೆಗೆ ತಾಲೂಕಿನ ಬಸವರಾಜ ಎಂಬವರು ಲಾರಿ ಮೂಲಕ 7 ಕ್ಯೂಬಿಕ್ ಮರಳು ಸಾಕಾಣಿಕೆ ಪರವಾನಗಿ ಹೊಂದಿದ್ದಾರೆ. ಆದರೆ ಸುಮಾರು 50 ಟನ್ ಲೋಡ್ ಮಾಡುವ ಮೂಲಕ ಪ್ರತಿನಿತ್ಯ ಸುಮಾರು 10- 12 ಲಾರಿಗಳಿಂದ ರಾತ್ರಿ ಸಿರುಗುಪ್ಪ ಮಾರ್ಗವಾಗಿ ಬೆಂಗಳೂರಿಗೆ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದಾರೆ.
ಕಾರಣ ತಾವುಗಳು ಈ ಕೂಡಲೇ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿ ಲಾರಿಗಳು ಹೊಂದಿರುವ ಪರವಾನಗಿಗಳನ್ನು ಪರಿಶೀಲನೆ ಮಾಡಿ ಅಕ್ರಮ ಮರಳು ಸಾಗಣೆಗೆ ನಿರ್ಬಂಧ ಹಾಕಬೇಕು. ನಿರ್ಲಕ್ಷ್ಯವಹಿಸಿದರೆ ತಮ್ಮ ಕಚೇರಿ ಮುಂದೆ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಮುಖಂಡರಾದ ಎಸ್.ಜಯಪ್ರಕಾಶ, ಎಚ್.ಇ.  ಚಂದ್ರಶೇಖರ, ಪ್ರವೀಣಕುಮಾರ, ರಘು ಸೇರಿದಂತೆ ಅನೇಕರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.