ಅನಧಿಕೃತ ಗುಡಿಸಲುಗಳ ತೆರವಿಗೆ ಒತ್ತಾಯ
ಸಿಂಧನೂರು: ತಾಲೂಕಿನ ರೌಡಕುಂದಾ ಗ್ರಾಮದಲ್ಲಿ ಬ್ರಾಹ್ಮಣ ಸಮಾಜದ ರುದ್ರಭೂಮಿಗೆ ಮೀಸಲಿರುವ ಜಮೀನಿನಲ್ಲಿ ಕೆಲವರು ಅನಧಿಕೃತವಾಗಿ ಗುಡಿಸಲುಗಳನ್ನು ಹಾಕಿಕೊಂಡಿದ್ದು ತಹಸೀಲ್ದಾರ್ ಕೂಡಲೇ ತೆರವುಗೊಳಿಸಬೇಕೆಂದು ತಾಲೂಕಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಮರಾವ್ ಕುಲಕರ್ಣಿ ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರೌಡಕುಂದಾ ಗ್ರಾಮದ ಜಮೀನ ಸರ್ವೆ ನಂ.2 ರಲ್ಲಿನ 15 ಎಕರೆ 15 ಗುಂಟೆ ಜಮೀನಿನ ಪೈಕಿ 9 ಗುಂಟೆ ಜಮೀನನ್ನು ಬ್ರಾಹ್ಮಣ ಸಮಾಜದ ರುದ್ರಭೂಮಿಗೆ ಮೀಸಲಿಡಲಾಗಿದೆ. ಆದರೆ ಅಲ್ಲಿ ಕೆಲವರು ಅನಧಿಕೃತವಾಗಿ ಜನತಾ ಮನೆ ಹೆಸರಿನಲ್ಲಿ ಗುಡಿಸಲುಗಳನ್ನು ಹಾಕಿಕೊಂಡಿದ್ದಾರೆ. ಈ ಕುರಿತು ಗ್ರಾಮದ ಮುಖಂಡ ರಾಘವೇಂದ್ರರಾವ್ ಕುಲಕರ್ಣಿ 16-03 -2013 ರಂದು ತಹಸೀಲ್ದಾರ್ಗೆ ಅರ್ಜಿ ಸಲ್ಲಿಸಿದ್ದರು. ಆಗ ತಹಸೀಲ್ದಾರ್ ಸ್ಥಳ ಪರಿಶೀಲನೆ ಮಾಡಿ ಏಳು ದಿನಗಳೊಳಗಾಗಿ ಗುಡಿಸಲುಗಳನ್ನು ತೆರವುಗೊಳಿಸದಿದ್ದರೆ ಕರ್ನಾಟಕ ಭೂ ಕಂದಾಯ ಕಾಯ್ದೆ 192 ಎ ಪ್ರಕಾರ ಕ್ರಮ ಜರುಗಿಸುವುದಾಗಿ 8-7-2013 ರಂದು ನೋಟಿಸ್ ನೀಡಿದ್ದರು. ಅದರ ಪ್ರತಿಯನ್ನು ಕಂದಾಯ ನಿರೀಕ್ಷಕರಿಗೆ ಸಲ್ಲಿಸಿದ್ದರು. ಆದರೆ ಇದುವರೆಗೂ ಕಂದಾಯ ನಿರೀಕ್ಷಕರು ಕ್ರಮ ತೆಗೆದುಕೊಂಡಿಲ್ಲ. ಕಂದಾಯ ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ ಬ್ರಾಹ್ಮಣ ಸಮಾಜದಿಂದ ಮುಂದಿನ ಹಂತದ ಹೋರಾಟಗಳನ್ನು ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಸಾಧಕರಿಗೆ ಜೆಸಿಐ ಪ್ರಶಸ್ತಿ ಪ್ರದಾನ
ರಾಯಚೂರು: ನಗರದಲ್ಲಿ ಜೆಸಿಐ ಸಪ್ತಾಹ ಅಂಗವಾಗಿ ಇತ್ತೀಚೆಗೆ ವೀರಶೈವ ಕಲ್ಯಾಣ ಮಂಟಪದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ನಗರದ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯ ಪಿಎಸ್ಸೈ ಬೇಬಿ ವಾಲಿಕಾರ್ ಅವರಿಗೆ ಜೆಸಿಐನಿಂದ ಟಿಒಬಿಐಪಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಜೆಸಿಐ ಸಮಾಜ ಸೇವೆಯ ಉದ್ದೇಶದಿಂದ ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ 10 ಜನ ಅತ್ಯುತ್ತಮ ಬಿಜಿನೆಸ್ ಮೆನ್, ಇಂಡಸ್ಟ್ರಿಯಲಿಸ್ಟ್ ಮತ್ತು ಪ್ರೊಫೆಷನಲಿಸ್ಟ್ಗಳಿಗೆ ಟಿಒಬಿಐಪಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜೆಸಿಐ ಸಂಸ್ಥೆ ಅಧ್ಯಕ್ಷ ರಮಾಕಾಂತ್ ಕಿಲೇಕರ್, ವಲಯಾಧ್ಯಕ್ಷ ಹೇಮಣ್ಣ ಉಣ್ಣಿ, ಗೌತಮ್, ಜಂಬಣ್ಣ ಯಕ್ಲಾಸಪುರ, ಸಿದ್ದನಗೌಡ, ವಿನೀತ್ ಬೊಹರಾ, ನವೀನ್, ಸತ್ಯನಾರಾಯಣ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

