ರಾಯಚೂರು

ಇಂದು ತುಲಾಭಾರ

Published On :

ರಾಯಚೂರು: ತಾಲೂಕಿನ ಮಟಮಾರಿ ಗ್ರಾಮದಲ್ಲಿ ಸೆ.17ರಂದು ಪಂ.ಪುಟ್ಟರಾಜ ಗವಾಯಿಗಳ ಮೂರನೇ ಪುಣ್ಯತಿಥಿ ಕಾರ್ಯಕ್ರಮ ಹಾಗೂ ಗದಗಿನ ಶ್ರೀವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾದ ಶ್ರೀಕಲ್ಲಯ್ಯಜ್ಜ ಅವರಿಗೆ ತುಲಾಭಾರ ಕಾರ್ಯಕ್ರಮ ಆಯೋಜಿಸಲಾಗಿದೆ.ಸಮಾರಂಭದ ಸಾನಿಧ್ಯವನ್ನು ಬಿಚ್ಚಾಲಿ, ಮಟಮಾರಿ, ಗಬ್ಬೂರಿನ ಸಾವಿರ ದೇವರ ಸಂಸ್ಥಾನಮಠದ ವೀರಭದ್ರ ಶ್ರೀ, ಮಿಟ್ಟಿಮಲ್ಕಾಪೂರ ಗ್ರಾಮದ ನಿಜಾನಂದ ಸ್ವಾಮೀಜಿ ವಹಿಸುವರು. ಪುಣ್ಯತಿಥಿಯ ಅಂಗವಾಗಿ ಸೆ.17 ರಂದು ಸಂಜೆ 4ಕ್ಕೆ ಪಂ.ಪುಟ್ಟರಾಜ ಗವಾಯಿಗಳ ಭಾವಚಿತ್ರದ ಮೆರವಣಿಗೆ ನಡೆಯಲಿದೆ.ಗ್ರಾಮದ ಬಸ್ ನಿಲ್ದಾಣದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದ್ದು, ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಲ್ಲಯ್ಯಜ್ಜ ಸ್ವಾಮಿಗಳಿಗೆ ತುಲಾಭಾರ ಹಾಗೂ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಗಂಗಾಮತಸ್ಥ ಸಂಘಟನೆಗೆ ಸಲಹೆ
ದೇವದುರ್ಗ: ಸಮಾಜದ ಅಭಿವೃದ್ಧಿಗೆ ಸಂಘಟನೆ ಅವಶ್ಯ. ಸಮಾಜದ ಸಂಘಟನೆಗೆ ನೌಕರ ಬಾಂಧವರು ಒಗ್ಗೂಡಿ ಶ್ರಮಿಸಬೇಕೆಂದು ಗಂಗಾಮತಸ್ಥ ಸಮಾಜದ ತಾಲೂಕಾಧ್ಯಕ್ಷ ಜಂಬಣ್ಣ ನಿಲೋಗಲ್ ತಿಳಿಸಿದರು.ಪಟ್ಟಣದ ಎಪಿಎಂಸಿ ಆವರಣದಲ್ಲಿ ಇತ್ತೀಚೆಗೆ ನಡೆದ ಗಂಗಾಮತಸ್ಥ ನೌಕರರ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಸಮಾಜ ಪ್ರಗತಿ ಸಾಧಿಸಲು ಶಿಕ್ಷಣ ಅಗತ್ಯ. ಎಲ್ಲ ಸಮಾಜದೊಂದಿಗೆ ಬೆರೆತು ಸಮಾಜವನ್ನು ಗುರುತಿಸುವ ಮಟ್ಟದಲ್ಲಿ ಸಮಾಜ ಸಂಘಟಿಸುವಂತೆ ಸಲಹೆ ನೀಡಿದರು.ಈ ಸಂದರ್ಭದಲ್ಲಿ ತಾಲೂಕು ಘಟಕದ ನೂತನ ಗೌರವಾಧ್ಯಕ್ಷರಾಗಿ ಎನ್‌ಈಕೆಎಸ್ಸಾರ್ಟಿಸಿಯ ಸಿಬ್ಬಂದಿ ನೀಲಕಂಠರಾಯ, ಅಧ್ಯಕ್ಷರಾಗಿ ಸಿಆರ್ಪಿ ಬಿ.ಎಸ್. ಕೇಶಾಪೂರ, ಉಪಾಧ್ಯಕ್ಷರಾಗಿ ಜಾಲಹಳ್ಳಿ, ಪಿಡಿಒ ನರಸಪ್ಪ,  ವೆಂಕೋಬ ಕೋಲ್ಕರ್, ಪ್ರಧಾನ ಕಾರ್ಯದರ್ಶಿಯಾಗಿ ಶಿಕ್ಷಕ ಎ.ವಿ. ಬಸವರಾಜ, ಖಜಾಂಚಿಯಾಗಿ ಆರೋಗ್ಯ ಇಲಾಖೆ  ಪ್ರದೀಪ್ ಮಂಟೂರು ನೇಮಕಗೊಂಡರು.ಗಂಗಾಮತಸ್ಥ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ರಂಗನಾಥ ದೇಸಾಯಿ, ಜಿಲ್ಲಾ ಉಪಾಧ್ಯಕ್ಷ ಎ.ಕೆ.ಪ್ರಭು, ಪ್ರಧಾನ ಕಾರ್ಯದರ್ಶಿ ವಿಜಯ್‌ಕುಮಾರ್ ಮತ್ತು ಗಂಗಾಮತಸ್ಥ ಸಮಾಜದ ತಾಲೂಕು ಉಪಾಧ್ಯಕ್ಷ ಪರಮಾನಂದ ಸುಂಕೇಶ್ವರಾಳ, ಸಮಾಜದ ಮುಖಂಡರಾದ ಪ್ರಭಾಕರ, ವಿದ್ಯಾಸಾಗರ, ಶ್ರೀಶೈಲ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.