ರಾಯಚೂರು

ದಾರ್ಶನಿಕರಿಗೆ ಜನ್ಮ ನೀಡಿದ್ದು ಕರ್ನಾಟಕ

Published On :

ಸಿಂಧನೂರು: ಕರ್ನಾಟಕವು ನೂರಾರು ಜನ ದಾರ್ಶನಿಕರಿಗೆ ಜನ್ಮ ನೀಡುವ ಮೂಲಕ ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಹೆಮ್ಮೆ ಹೊಂದಿದೆಯೆಂದು ಲಯನ್ಸ್ ಕ್ಸಬ್ ಅಧ್ಯಕ್ಷ ಗೌತಮ ಮೆಹ್ತಾ ಅಭಿಪ್ರಾಯಪಟ್ಟರು.
ನಗರದ ಜೈನ ಧರ್ಮದ ಮಂದಿರದಲ್ಲಿ ಜೈನ ಯತಿಗಳಿಗೆ ಗೌರವಾತಿಥ್ಯ ನೀಡಿದ ವ್ಯಕ್ತಿಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
 ಸಹಧರ್ಮ ಸಹಿಷ್ಣುತೆಗೆ ಕರ್ನಾಟಕದಲ್ಲಿ ವಿಶೇಷ ಪರಂಪರೆಯಿದೆಯೆಂದ ಅವರು ತುಮಕೂರಿನ ಡಾ. ಶಿವಕುಮಾರ ಸ್ವಾಮಿಗಳು, ಪುಟ್ಟರಾಜ ಗವಾಯಿಗಳು ಸಾಕ್ಷಿಯಾಗಿದ್ದಾರೆ. ಜೈನಧರ್ಮದ ಗುರುಗಳ ಪ್ರವಾಸ ಮಾಡುವ ಸಮಯದಲ್ಲಿ ಅವರ ದರ್ಶನ ಪಡೆದು ವಿಶೇಷ ಸತ್ಕಾರ ಮಾಡಿದ ಪುಣ್ಯದಲ್ಲಿ ತಮಗೂ ಒಂದಷ್ಟು ಪಾಲು ಸಿಗಲಿಯೆನ್ನುವ ಉದ್ದೇಶದಿಂದ ಸನ್ಮಾನ ಮಾಡಿರುವುದಾಗಿ ಗೌತಮ ಮೆಹ್ತಾ ವಿವರಿಸಿದರು.
ಗೊರೇಬಾಳಕ್ಯಾಂಪ್, ಗೊರೇಬಾಳ, ಶ್ರೀಪುರಂಜಂಕ್ಷನ್, ಸಾಸಲಮರಿಕ್ಯಾಂಪ್, ಮಣ್ಣಿಕೇರಿಕ್ಯಾಂಪ್, ಪೋತ್ನಾಳ, ಜವಳಗೇರಾ, ಮುಳ್ಳೂರುಕ್ಯಾಂಪ್, ಅಮರೇಶ್ವರಕ್ಯಾಂಪ್, 7 ಮೈಲ್‌ಕ್ಯಾಂಪ್, ತುರ್ವಿಹಾಳ ಸೇರಿದಂತೆ 65 ನಾಗರಿಕರನ್ನು ಸನ್ಮಾನಿಸಲಾಯಿತು. ಜೈನ ಸಮಾಜದ ಸ್ಥಾನಿಕವಾಸಿ ಸಂಘದ ಅಧ್ಯಕ್ಷ ಜಬರಚಂದ್ ಬೂಂಬ್, ಜಯಚಂದ ಚಾಜೇಡ್, ಉಮೇದರಾಜ ಕಾಂಕರಿಯಾ, ರಾಜೇಶ ನಹಾರ, ಅಜಿತ್ ಓಸ್ತವಾಲ್, ಸೋಹನ್ ಲಾಲ ಬೊಹರಾ, ಸುಭಾಶ್ ಕಲೇಚಾ, ಸುರೇಶ ನಹಾರ್, ಕವರ್ಲಾಲ ನಹರಾ, ರಮೇಶಲಾಲ, ಗೌತಮಚಂದ್ ಇತರರಿದ್ದರು.
ವಸಂತ ಮುನಿಗಳ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಜರುಗಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.