ರಾಯಚೂರು

ಹೈ.ಕ. ಜನರ ಒಗ್ಗಟ್ಟಿನ ಸೂಚಕವೇ ವಿಮೋಚನಾ ದಿನ

Published On :

ಸಿಂಧನೂರು: ಹೈದ್ರಾಬಾದ್ ನಿಜಾಮ ಮತ್ತು ರಜಾಕಾರರ ವಿರುದ್ಧ ಸೆಟೆದು ನಿಂತು ಪಡೆದುಕೊಂಡ ಸ್ವಾತಂತ್ರ್ಯದ ಸ್ಮರಣಯೇ ವಿಮೋಚನಾ ದಿನ ಎಂದು ಬಸವಕೇಂದ್ರದ ಕುರುಕುಂದಿ ವೀರಭದ್ರಪ್ಪ ಅಭಿಪ್ರಾಯಪಟ್ಟರು.
ನಗರದ ಅನಿಕೇತನ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಹೈ.ಕ. ವಿಮೋಚನಾ ದಿನದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಹೈದ್ರಾಬಾದ್ ನಿಜಾಮನ ಆಳ್ವಿಕೆಯಲ್ಲಿ ಬಾಲ್ಕಿ ಪಟ್ಟದ ದೇವರು ಹೊರಗೆ ತೆಲುಗು ನಾಮಫಲಕ ಹಾಕಿ ಕನ್ನಡ ಕಲಿಸುತ್ತಿದ್ದರು. ಶಿಕ್ಷಣಕ್ಷೇತ್ರ ಸಂಪೂರ,  ಹಿಂದುಳಿದಿತ್ತು. ರಜಾಕಾರರು ಜನಸಾಮಾನ್ಯರ ಮೇಲೆ ದೌರ್ಜನ್ಯ ನಡೆಸುವುದು ಸಾಮಾನ್ಯವಾಗಿತ್ತು. ಇದರಿಂದ ಕಂಗೆಟ್ಟ ಜನತೆ ನಿಜಾಮನ ವಿರುದ್ಧ ಒಗ್ಗಟ್ಟಿನಿಂದ ಎದುರು ಬಿದ್ದಾಗ ಕೊನೆಗೆ ಈ ಭಾಗದ ಜನರಿಗೆ ವಿಮೋಚನೆ ದೊರೆಯಿತು. ಇದಕ್ಕಾಗಿ ನೂರಾರು ಜನ ವೀರರು ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ. ದೈಹಿಕ ಹಲ್ಲೆಗೊಳಗಾಗಿದ್ದಾರೆ ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ವೈ.ಎಚ್. ರಕ್ಕಸಗಿ, ಸಂಸ್ಥೆಯ ಅಧ್ಯಕ್ಷ ಡಿ.ಎಚ್. ಕಂಬಳಿ, ಉಪನ್ಯಾಸಕರು, ಸಿಬ್ಬಂದಿ ಇನ್ನಿತರರು ಇದ್ದರು. ವಿದ್ಯಾರ್ಥಿಗಳಾದ ಯಮನೂರಪ್ಪ, ಶ್ರೀಧರ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.