ರಾಯಚೂರು

ಎಸ್ಸೆಸ್ಕೆ ಸಮಾಜದಿಂದ ಗಣೇಶ ವಿಸರ್ಜನೆ

Published On :

ಸಿಂಧನೂರು: ನಗರದ ಆದರ್ಶ ಕಾಲೋನಿಯಲ್ಲಿರುವ ಅಂಬಾಭವಾನಿ ದೇವಸ್ಥಾನದ ಪಕ್ಕದಲ್ಲಿ ಎಸ್‌ಎಸ್‌ಕೆ ಸಮಾಜದಿಂದ 9 ದಿನಗಳ ಕಾಲ ಪ್ರತಿಷ್ಠಾಪಿಸಿದ್ದ ತಿರುಪತಿ ಅಲಂಕಾರದ ಗಣೇಶ ಮೂರ್ತಿಯನ್ನು ಅದ್ಧೂರಿಯಾಗಿ ಬುಧವಾರ ರಾತ್ರಿ ವಿಸರ್ಜನೆ ಮಾಡಲಾಯಿತು.
ಸಮಾಜದ ಅಧ್ಯಕ್ಷ ಶಶಿಕುಮಾರ ದಾನಿ ಹಾಗೂ ತರುಣ ಸಂಘದ ಅಧ್ಯಕ್ಷ ರಾಜು ಬದಿ ಸಮ್ಮುಖದಲ್ಲಿ ಪೂಜೆ ನೆರವೇರಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಮಾಜದ ಹಿರಿಯ ಮುಖಂಡ ಡಾ. ಜೆ.ಎನ್.ಇರಕಲ್, ತರುಣ ಸಂಘದ ಅಧ್ಯಕ್ಷ ರಾಜು ಬದಿಮಾತನಾಡಿದರು. ಹಿರಿಯ ಮುಖಂಡ ಅಂಬಾಸಾ ಮೆಹರವಾಡೆ, ಡಾ.ನಾರಾಯಣ ಸಾ ಬಾಲಿ, ಸಮಾಜದ ಉಪಾಧ್ಯಕ್ಷ ಶ್ರೀನಿವಾಸ ಬಾಕಳೆ, ಗುರು ಬದಿ, ಶಂಕರ ಕಬಾಡಿ, ಕಿರಣ ಬಾಲಿ, ಜಯದುರ್ಗ ಮಹಿಳಾ ಮಂಡಳಿ ಅಧ್ಯಕ್ಷೆ ರಾಜೇಶ್ವರಿ ಇರಕಲ್ ಉಪಸ್ಥಿತರಿದ್ದರು.
ಗಣೇಶೋತ್ಸವ ನಿಮಿತ್ತ ಮಹಿಳೆಯರಿಗೆ ಏರ್ಪಡಿಸಿದ್ದ ವಿವಿಧ ಆಟೋಟಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಮಾಜದ ಅಧ್ಯಕ್ಷ ಶಶಿಕುಮಾರ ದಾನಿ  ಅಧ್ಯಕ್ಷತೆ ವಹಿಸಿದ್ದರು. ಭಾರತಿ ಮತ್ತು ರಾಧಾಬಾಯಿ ಪ್ರಾರ್ಥಿಸಿದರು. ನಾರಾಯಣ ಸಾ ಪವಾರ್ ನಿರೂಪಿಸಿ, ವಂದಿಸಿದರು. ನಂತರ ಹರಾಜು ಕಾರ್ಯಕ್ರಮ ಮತ್ತು ಲಕ್ಕಿ ಡ್ರಾ ಮಾಡಲಾಯಿತು. ಸಮಾಜದ ನೂರಾರು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.