ರಾಯಚೂರು

ದೇವದುರ್ಗ- ಸಿರವಾರ ರಸ್ತೆ ದುರವಸ್ಥೆ, ಸಂಚಾರ ವ್ಯತ್ಯಯ

Published On :

ದೇವದುರ್ಗ: ಪಟ್ಟಣದಿಂದ ಮಾನವಿ ತಾಲೂಕಿನ ಸಿರವಾರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ತೀರಾ ಹದಗೆಟ್ಟಿದ್ದು, ಹೇಮನೂರು ಬಳಿ ಗುರುವಾರ ರಾತ್ರಿಯಿಂದ ಲಾರಿ ರಸ್ತೆಯ ತಗ್ಗಿನಿಂದಾಗಿ ಸಿಕ್ಕು ಬಿದ್ದಿದ್ದರಿಂದ ಆರು ಗಂಟೆ ರಸ್ತೆ ಸಂಚಾರಕ್ಕೆ ತೊಂದರೆಯಾದ ಘಟನೆ ನಡೆದಿದೆ.
ದೇವದುರ್ಗದಿಂದ ಸಿರವಾರ ಮುಖ್ಯರಸ್ತೆ ಅಭಿವೃದ್ಧಿಗೊಳಿಸಿದ್ದು, ಮಳೆಯಿಂದಾಗಿ ಮತ್ತೆ ಯಥಾಸ್ಥಿತಿಗೆ ಬಂದು ತಲುಪಿದೆ. ರಸ್ತೆಯಲ್ಲಿ ಭಾರೀ ಪ್ರಮಾಣದ ತಗ್ಗುಗಳಾಗಿದ್ದು, ರಸ್ತೆಗೆ ಹಾಕಿದ್ದ ಡಾಂಬರು ಕಿತ್ತಿದೆ. ಅದರಿಂದಾಗಿ ಈ ಮಾರ್ಗದಲ್ಲಿ ದಿನವೂ ಸಂಚರಿಸುವ ಭಾರೀ ವಾಹನಗಳು ಸಿಕ್ಕಿಬಿದ್ದು ಸಂಚಾರಕ್ಕೆ ನಿರಂತರ ಸಮಸ್ಯೆ ತಂದೊಡ್ಡುವುದು ಸಾಮಾನ್ಯವಾಗಿದೆ.
ಕಿಮ್ಮತ್ತಿಲ್ಲ: ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಶಾಸಕ ವೆಂಕಟೇಶ ನಾಯಕ ಅವರು ಪಟ್ಟಣಕ್ಕೆ ಅರಕೇರಾದಿಂದ ಆಗಮಿಸುತ್ತಿದ್ದ ವೇಳೆ ಇದೇ ರಸ್ತೆಯ ಕೊತ್ತದೊಡ್ಡಿ- ಮಾನಸಗಲ್ ಮಧ್ಯೆ ಅವರಿದ್ದ ವಾಹನ ಸಿಕ್ಕು ಬಿದ್ದಿದ್ದರಿಂದ ತಹಸೀಲ್ದಾರ್ ಅವರು ತೆರಳಿ ಶಾಸಕರನ್ನು ಕರೆತಂದಿದ್ದರು. ಆಗಲೇ ಶಾಸಕರು ಅಧಿಕಾರಿಗಳಿಗೆ ಈ ರಸ್ತೆ ದುರಸ್ತಿಗೆ ಆದೇಶಿಸಿದ್ದರು. ಆದರೆ ಅಧಿಕಾರಿಗಳು ಮಾತ್ರ ಇದುವರೆಗೆ ಕ್ಯಾರೇ ಎಂದಿಲ್ಲ.
ಇಂಥ ಹದಗೆಟ್ಟ ಸ್ಥಿತಿಯಲ್ಲಿರುವ ರಸ್ತೆಯಲ್ಲಿ ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ರಸ್ತೆಯಲ್ಲಿ ಸಾಗುತ್ತಿದ್ದ ಲಾರಿ ಸಿಕ್ಕು ಹಾಕಿಕೊಂಡಿದ್ದರಿಂದ ಶುಕ್ರವಾರ ಮಧ್ಯಾಹ್ನ 2ರ ವರೆಗೆ ದೇವದುರ್ಗ- ಸಿರವಾರ ಮಧ್ಯೆ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡು ಜನತೆ ಪರದಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.