ರಾಯಚೂರು

'ಶಿಕ್ಷಣ ವ್ಯಾಪಾರೀಕರಣಕ್ಕೆ ಅವಕಾಶ ನೀಡಬೇಡಿ'

Published On :

ಸಿಂಧನೂರು: ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಬಡವರಿಗೆ ಗಗನಕುಸುಮವಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸಿವೆ. ಶಿಕ್ಷಣ ವ್ಯಾಪಾರೀಕರಣವಾದರೆ ಸರ್ಕಾರದ ಸಮಬಾಳು- ಸಮಪಾಲು ಘೋಷಣೆ ಅರ್ಥಹೀನವಾಗುತ್ತದೆ. ಇದಕ್ಕೆ ಪ್ರಗತಿಪರ ಸಂಘಟನೆಗಳು ಅವಕಾಶ ಕೊಡಬಾರದು ಎಂದು ಸಾಹಿತಿ ಹಾಗೂ ಶಿಕ್ಷಕ ಕೈದಾಳ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ನಗರದ ಅನಿಕೇತನ ಕಾಲೇಜಿನಲ್ಲಿ ಲಂಕೇಶ ಬಳಗದಿಂದ ಸಮಾನ ಶಿಕ್ಷಣಕ್ಕಾಗಿ, ಕಾರ್ಯಕ್ರಮದ ಮೊದಲ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಲಂಕೇಶ ಬಳಗ ಸಮಾನ ಶಿಕ್ಷಣಕ್ಕಾಗಿ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಿರುವುದು ಸ್ವಾಗತಾರ್ಹ. ಬಡ ಬೋರೇಗೌಡನ ಮಗನಿಗೂ ಗುಣಮಟ್ಟದ ಶಿಕ್ಷಣ ದೊರಕಬೇಕಾಗಿದೆ. ಶಿಕ್ಷಣದಿಂದ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಹೇಳಿದರು.
ಗೋಷ್ಠಿ ಉದ್ದೇಶಿಸಿ ಮನುಜಮತ ಬಳಗದ ಅಧ್ಯಕ್ಷ ಡಿ.ಎಚ್.ಕಂಬಳಿ, ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ ಸಮಿತಿಯ ಸಂಚಾಲಕ ಉಮಾಶಂಕರ, ಹೋರಾಟಗಾರ ರಜಾಕ್ ಉಸ್ತಾದ್, ಸಾಹಿತಿ ತಾಯರಾಜ್ ಮರ್ಚಟಹಾಳ್, ಉಪನ್ಯಾಸಕ ರಾಮಣ್ಣ ಬೇರ್ಗಿ ಮಾತನಾಡಿದರು.
2ನೇ ಗೋಷ್ಠಿಯಲ್ಲಿ ಶಿಕ್ಷಣದ ವ್ಯಾಪಾರೀಕರಣದ ಇತಿಹಾಸದ ಬಗ್ಗೆ ವಿಕಾಸ್ ಮೌರ್ಯ, ಪತ್ರಕರ್ತ ಬಸವರಾಜ ಹಳ್ಳಿ, ಮನುಜಮತ ಬಳಗಳದ ಕಾರ್ಯದರ್ಶಿ ಬಸವರಾಜ ಬಾದರ್ಲಿ ಮಾತನಾಡಿದರು. ಬಳಗದ ಸದಸ್ಯರಾದ ಕೊಟ್ರೇಶ ಬಿ., ಪಂಪಾರೆಡ್ಡಿ ಅರಳಹಳ್ಳಿ, ಕುಮಾರ ಸಮತಳ, ಬಸವರಾಜ ಪೂಜಾರ್, ಹುಸೇನಪ್ಪ ಅಮರಾಪುರ, ಹುಡಸಪ್ಪ ಹುಡುಸೂರ್, ಇಮಾಮ ಹುಸೇನ ಎತ್ಮಾರಿ, ಸದಸ್ಯರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.