ಹೊಲಗಳಿಗೆ ನೀರು ತಡೆ ಯತ್ನ ವಿಫಲ
ಕಾರಟಗಿ: ಕುಡಿಯುವ ನೀರಿನ ನೆಪವೊಡ್ಡಿ ಗಂಗಾವತಿ ತಾಲೂಕಿನ ಕೊನೆಭಾಗದ ರೈತರ ಹೊಲಗಳಿಗೆ ನೀರು ಹರಿಯುವುದನ್ನು ತಡೆಯುವ ನೀರಾವರಿ ಅಧಿಕಾರಿಗಳ ಯತ್ನವನ್ನು ಮಂಗಳವಾರ ರೈತರು ವಿಫಲಗೊಳಿಸಿದ್ದಾರೆ.
ಮಂಗಳವಾರ ಬೆಳಗ್ಗೆ ನೀರಾವರಿ ಇಲಾಖೆ ಅಧಿಕಾರಿಗಳು ಎಡದಂಡೆ ನಾಲೆಯೇ ವಿತರಣಾ ನಾಲೆಯ ತೂಬುಗಳನ್ನು ಮುಚ್ಚುತ್ತಿದ್ದ ವೇಳೆಯಲ್ಲಿಯೇ ಈ ಭಾಗದ ರೈತರು ಕಾಲುವೆ ಬಳಿ ಧರಣಿ ನಡೆಸಿ ಅಧಿಕಾರಿಗಳ ಪ್ರಯತ್ನ ವಿಫಲಗೊಳಿಸಿದರು. ಕಳೆದ ತಿಂಗಳಿಂದ ತುಂಗಭದ್ರಾ ಎಡದಂಡೆ ನಾಲೆ 31ನೇ ವಿತರಣಾ ನಾಲೆಯ ವ್ಯಾಪ್ತಿಯ ಗಂಗಾವತಿ ಮತ್ತು ರಾಯಚೂರು ಜಿಲ್ಲೆಯ ಸಿಂದೂನೂರು ತಾಲೂಕಿನ ಕೊನೆ ಭಾಗದ ರೈತರಿಗೆ ಅಧಿಕಾರಿಗಳು ಬೇಜವಾಬ್ದಾರಿ ಮತ್ತು ಚೆಲ್ಲಾಟದಿಂದ ಸಮರ್ಪಕ ನೀರು ವಿತರಣೆ ಆಗುತ್ತಿರಲಿಲ್ಲ. ಬತ್ತದ ಬೆಳೆಗೆ ನೀರಿಲ್ಲದ ರೈತರು ಪರಿತಪಿಸುತ್ತಿದ್ದರು. ಹೀಗಾಗಿ 31ನೇ ವಿತರಣಾ ನಾಲೆಯ ಬೂದಗುಂಪ, ತಿಮ್ಮಾಪುರ, ಹಾಲಸಮ್ಮುದ್ರ, ದೇವಿಕ್ಯಾಂಪ್, ಸಿಂಧನೂರು ತಾಲೂಕಿನ ಚಂದನಹಳ್ಳಿ, ಸಿದ್ರಾಮಪುರ, ಮಾವಿನಮಡಗು ಭಾಗಗಳಿಗೆ ನೀರಿನ ಸಮಸ್ಯೆ ತಾರಕಕ್ಕೆ ಏರಿತ್ತು. ಬತ್ತದ ಬೆಳೆಗೆ ನೀರಿನ ಅವಶ್ಯಕತೆ ಇದ್ದರೂ, ನೀರಿನ ಕಡಿತ ಉಂಟಾಗಿದ್ದರಿಂದ ರೈತರ ಹೋರಾಟ ಸಾಮಾನ್ಯವಾಗಿತ್ತು. ಜತೆಗೆ ಏ. 10ರವರೆಗೆ ನಮ್ಮ ಪಾಲಿನ ನೀರು ಬಿಡಲು ಒತ್ತಾಯಿಸಿ ಹೋರಾಟ ಮುಂದುವರಿದಿತ್ತು.
ತುಂಗಭದ್ರಾ ಎಡದಂಡೆ ನಾಲೆಯಲ್ಲಿ ಈಗ 1500 ಕ್ಯುಸೆಕ್ ನೀರು ಹರಿಯುತ್ತಿದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ತಾಲೂಕಿನ ಭಾಗಗಳಿಗೆ ಕುಡಿವ ನೀರಿಗಾಗಿ ಈ ತೂಬುಗಳನ್ನು ಮುಚ್ಚುತ್ತಿದ್ದೇವೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದರೂ ಅದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದರು.
'ನಮಗೂ ನೀರಿನ ಸಮಸ್ಯೆ ಇದೆ, ನಮ್ಮ ಪಾಲಿನ ನೀರು ಕೊಡಿ' ಎಂದು ಧರಣಿ ನಿರತ ರೈತರು ಪಟ್ಟು ಹಿಡಿದರು. ರೈತರ ಸಮಧಾನ ಪಡಿಸಲು ನೀರಾವರಿ ಅಧಿಕಾರಿ ಚಿಕ್ಕೊಪ್ಪ ಒಂದು ಹಂತದಲ್ಲಿ ವಿಫಲರಾದರು.
ಬೂದಗುಂಪಾ ಭಾಗದ ನೀರಾವರಿ ಬಳಕೆದಾರರ ಸಂಘದ ಅಧ್ಯಕ್ಷ ಸಂಗಮೇಶ ಗೌಡ, ಬಸಲಿಂಗಪ್ಪ ಕುಲಕರ್ಣಿ, ತುಂಗಭದ್ರಾ ಕಾಡಾ ಮುಖ್ಯ ಎಂಜಿನಿಯರ್ ಮಲ್ಲಿಕಾರ್ಜುನ ಗುಂಗೆ ಅವರನ್ನು ಸಂಪರ್ಕಿಸಿ, ಯಾವುದೇ ಸಂದರ್ಭದಲ್ಲಿ 31ನೇ ವಿತರಣಾ ನಾಲೆಯೇ ತೂಬು ಮುಚ್ಚುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದರು. 31ನೇ ವಿತರಣಾ ನಾಲೆಗೆ ನಿತ್ಯ 200 ಕ್ಯುಸೆಕ್ ನೀರು ಹರಿಯಬೇಕು. ನಮ್ಮ ಪಾಲಿನ ನೀರು ಬೇಕೆಂದು ಪಟ್ಟು ಹಿಡಿದರು.
ಒಂದು ಹಂತದಲ್ಲಿ ಅಧಿಕಾರಿಗಳು ಮತ್ತು ರೈತರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಏಪ್ರಿಲ್ ಮೊದಲ ವಾರದವರೆಗೂ ಸಂಪೂರ್ಣ ನೀರು ಕೊನೆ ಭಾಗದ ವರೆಗೆ ಮುಟ್ಟಬೇಕು ಎಂದು ರೈತರು ಪಟ್ಟಿಗೆ ಅಧಿಕಾರಿಗಳು ಮಣಿದಿದ್ದು, ಕಾಲುವೆ ಬಳಿ ಕಾವಲು ಕಾದರು. ಈ ಮಧ್ಯೆ ರೈತರ ಒತ್ತಡಕ್ಕೆ ಮಣಿದ ಅಧಿಕಾರಿಗಳು 31ನೇ ವಿತರಣಾ ನಾಲೆಯಲ್ಲಿ ಯಥಾಸ್ಥಿತಿ ನೀರು ಹರಿಯುತ್ತಿದೆ ಎಂದು ನೀರಾವರಿ ಬಳಕೆದಾರರ ಸಂಘದ ಅಧ್ಯಕ್ಷ ಸಂಗಮೇಶ ಗೌಡ “OÚ«ÚsÚ®ÚúڒOæQ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

