ಅನಿಯಂತ್ರಿತ ಪರಿಸರ ಬಳಕೆ ವಿನಾಶಕ್ಕೆ ನಾಂದಿ
ಕ.ಪ್ರ. ವಾರ್ತೆ ಸೇಡಂ ಏ.2
ಅಪರಿಮಿತವಾದ ಪರಿಸರ ನಾಶ ಹಾಗೂ ಅನಿಯಂತ್ರಿತ, ಬೇಕಾಬಿಟ್ಟಿ ಖನಿಜ ಬಳಕೆಯಿಂದಾಗಿ ಇಂದು ನಮ್ಮನ್ನು ನಾವೇ ವಿನಾಶದ ಅಂಚಿಗೆ ಕೊಂಡೊಯ್ಯುತ್ತಿದ್ದೇವೆ ಎಂದು ಭಾರತೀಯ ಖನಿಜ ಬ್ಯೂರೊದ ದಕ್ಷಿಣ ವಲಯ ನಿಯಂತ್ರಕ ಎಸ್.ಟಿ. ಯು ಕಳವಳ ವ್ಯಕ್ತಪಡಿಸಿದರು.
ಸೇಡಂ ತಾಲೂಕಿನ ಆದಿತ್ಯಬಿರ್ಲಾ ಸಮೂಹದ ರಾಜಶ್ರೀ ಸಿಮೆಂಟ್ನ ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ ಕಂಪನಿಯಲ್ಲಿ ಬೆಂಗಳೂರು ವಿಭಾಗದ ಗಣಿ ಪರಿಸರ ಹಾಗೂ ಖನಿಜ ಬಳಕೆದಾರರ ಸಂಘದ ವತಿಯಿಂದ ಏರ್ಪಡಿಸಿದ್ದ ಗಣಿ, ಪರಿಸರ ಹಾಗೂ ಖನಿಜ ಬಳಕೆ ಸಪ್ತಾಹದ ಅಂಗವಾಗಿ ಪುರಸ್ಕಾರ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಒಂದಾದರೂ ಮರ ಬೆಳೆಸಬೇಕು: ನಾವು ಪರಿಸರದಲ್ಲಿನ ತಾಪಮಾನ, ಏರಿಳಿತ ಹಾಗು ಅದರ ಮಿತಿಯಲ್ಲಿ ಬದುಕು ಸಾಗಿಸುತ್ತಿದ್ದೇವೆ. ಹಾಗಾಗಿ ಪರಿಸರ ರಕ್ಷಣೆಯಿಂದಾಗಿ ತಾಪಮಾನವನ್ನು ನಿಯಂತ್ರಣದಲ್ಲಿಡದೇ ಇದ್ದಲ್ಲಿ ನಮ್ಮ ಬದುಕು ಅಸಾಧ್ಯ ಎಂದರು. ನಿಯಮಬಾಹಿರ ಗಣಿಗಾರಿಕೆ ನಡೆಸದೇ ಶಿಸ್ತುಬದ್ಧ, ವೈಜ್ಞಾನಿಕ ಹಾಗೂ ನಿಯಮಿತವಾಗಿ ಖನಿಜದ ಬಳಕೆ ಮೂಲಕ ಅವಶ್ಯಕ ವಸ್ತುಗಳ ಉತ್ಪಾದನೆಯಾಗಬೇಕು. ಪ್ರತಿಯೊಬ್ಬ ನಾಗರಿಕರ ಜೀವನದಲ್ಲಿ ಕನಿಷ್ಟ ಒಂದಾದರೂ ಮರ ಬೆಳೆಸಬೇಕು ಎಂದರು.
ಅತ್ಯಾಧುನಿಕ ತಂತ್ರಜ್ಞಾನ:ಅಲ್ಟ್ರಾಟೆಕ್ ಸಿಮೆಂಟ್ ಲಿ., ಅಧ್ಯಕ್ಷ ಎಸ್.ಕೆ.ಗುಪ್ತಾ ಮಾತನಾಡಿ, ನಾವು ಕಂಪನಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿ ಧೂಳು ವಿಂಗಡಣೆ, ಮರಬಳಕೆ, ನಿಯಮಿತ ನೀರು ಸಿಂಪಡಣೆ ಮತ್ತು ಮಳೆ ನೀರು ಕೊಯ್ಲು ಮಾಡುತ್ತಿದ್ದು, ಪರ್ಯಾಯ ಇಂಧನ ಸಂಪನ್ಮೂಲವನ್ನು ಬಳಸುತ್ತಿರುವುದಾಗಿ ತಿಳಿಸಿದರು.
ಭಾರತೀಯ ಖನಿಜ ಬ್ಯೂರೋ ನಾಗಪುರದ ಪ್ರಭಾರಿ ಮುಖ್ಯ ನಿಯಂತ್ರಕ ಕೆ.ಥಾಮಸ್, ಬೆಂಗಳೂರು ವಿಭಾಗೀಯ ನಿಯಂತ್ರಕ ಬಿ. ರಾಮಮೋಹನ್, ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ ಗಣಿ ವಿಭಾಗದ ಉಪಾಧ್ಯಕ್ಷ ಸೌಮಿಕ ಚಕ್ರವರ್ತಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಗಣಿಗಾರಿಕೆ ಹಾಗೂ ಖನಿಜ ಬಳಕೆಯ ಹಲವಾರು ವಿಭಾಗಗಳಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಕಂಪನಿ ಹಾಗೂ ವ್ಯಕ್ತಿಗಳಿಗೆ ಬಹುಮಾನ ವಿತರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

