ರಾಜ್ಯದಲ್ಲಿರೋದು ಸಿದ್ದು ಅಲೆ ಮಾತ್ರ: ತಂಗಡಗಿ
ಕ.ಪ್ರ. ವಾರ್ತೆ ್ಣ ಸಿಂಧನೂರು ್ಣ ಏ.9
ರಾಜ್ಯದಲ್ಲಿ ಬಡವ, ದೀನ ದಲಿತರ ನಾಡಿಮಿಡಿತವನ್ನು ತಿಳಿದಿರುವ ಹಾಗೂ ಜನ ಮೆಚ್ಚುವಂತ ಕೆಲಸ ಮಾಡುತ್ತಾ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಲೆ ರಾಜ್ಯದಲ್ಲಿದೆ. ಬಿಜೆಪಿ ಪ್ರಧಾನ ಅಭ್ಯರ್ಥಿ ನರೇಂದ್ರ ಮೋದಿ ಅಲೆ ಇಲ್ಲ ಎಂದು ಸಣ್ಣ ನೀರಾವರಿ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ತಾಲೂಕಿನ ಬಳಗಾನೂರಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸಿ ಮಾತನಾಡಿ, ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕ ಹಕ್ಕಿಲ್ಲ. 5 ವರ್ಷದ ಬಿಜೆಪಿ ಸರ್ಕಾರದಲ್ಲಿನ ಭ್ರಷ್ಟಾಚಾರದಿಂದ ಜನ ರೋಸಿ ಹೋಗಿದ್ದಾರೆ. ಕಾರಣ ಅವರು ಮೋದಿಯನ್ನು ಪ್ರಧಾನ ಮಂತ್ರಿ ಮಾಡಬೇಕಿದೆ, ಮತ ಕೊಡಿರೆಂದು ಆತನ ಹೆಸರನ್ನು ಬಳಸಿ ಮತ ಕೇಳುತ್ತಿದೆ ಎಂದು ಟೀಕಿಸಿದರು.
ದಾರಿ ತಪ್ಪಿಸುತ್ತಿರುವ ಬಿಜೆಪಿ: ಮಾಡುವ ಕೆಲಸ ಸ್ವಲ್ಪ, ಪ್ರಚಾರ ಪಡೆಯುವಲ್ಲಿ ನರೇಂದ್ರ ಮೋದಿ ಹೆಚ್ಚು ಮುಂದಿದ್ದಾರೆ. ಮಾಧ್ಯಮದವರು ಸಹ ಅವರನ್ನು ಸುಖಾಸುಮ್ಮನೆ ವೈಭವೀಕರಿಸಿ ಬಿಂಬಿಸುತ್ತಿದ್ದಾರೆ. ದೇಶದಲ್ಲಿ ಮೋದಿ ಹವಾ ಇದೆ ಎಂದು ಬಿಜೆಪಿ ರಾಜ್ಯದ ಜನತೆಯನ್ನು ದಾರಿ ತಪ್ಪಿಸುತ್ತಿದೆ ಇದು ಸರಿಯಾದ ಕ್ರಮವಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಹಿಟ್ನಾಳ್, ಶಾಸಕರಾದ ಹಂಪನಗೌಡ ಬಾದರ್ಲಿ, ಶಾಸಕ ಪ್ರತಾಪಗೌಡ ಪಾಟೀಲ್, ಕಾಂಗ್ರೆಸ್ ಮುಖಂಡರಾದ ಬಸವಂತರಾಯ ಕುರಿ, ದಯಾನಂದರಡ್ಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಎಂ.ಕಾಳಿಂಗಪ್ಪ, ನಗರ ಬ್ಲಾಕ್ ಕಾಂಗ್ರೆಸ್ ಮಾಜಿ ಮಲ್ಲಿಕ್, ಜಿಪಂ ಮಾಜಿ ಸದಸ್ಯ ಹನಮಂತಪ್ಪ ಮುದ್ದಾಪೂರ, ಬಸನಗೌಡ ಮುದೇಗೌಡ್ರು, ಬಸವರಾಜ ಸ್ವಾಮಿ ಹಸಮಕಲ್, ವಿರುಪಣ್ಣ ಗುತ್ತೇದಾರ, ಡಾ. ಎಸ್.ಎಸ್. ಜಾಗೀರದಾರ, ಶಂಕ್ರಗೌಡ ಹುಲ್ಲೂರು, ಕಟ್ಟೆಪ್ಪ ಗುಂಜಳ್ಳಿ, ಎಂ.ಡಿ. ಆಲಂಸಾಬ, ಟಿ.ಅಮರೇಶ ನಾಯಕ, ಅಜೇಯಕುಮಾರ ನಾಡಗೌಡ, ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

