ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ: ಶಿವನಗೌಡ ನಾಯಕ
ಮುದಗಲ್: ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗಿನಿಂದಲೂ ಅಭಿವೃದ್ಧಿ ಕಾರ್ಯಗಳು ಏನೂ ನಡೆದಿಲ್ಲ. ಬಿಜೆಪಿ ಸರ್ಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಅಭ್ಯರ್ಥಿ ಶಿವನಗೌಡ ನಾಯಕ ಹೇಳಿದರು.
ಪಟ್ಟಣದಲ್ಲಿ ಭಾನುವಾರ ರೋಡ್ ಶೋ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಯಚೂರು ಲೋಕಸಭೆ ಕ್ಷೇತ್ರವನ್ನು ನಾಲ್ಕು ಬಾರಿ ಪ್ರತಿನಿಧಿಸಿದ್ದಂತ ಮಾಜಿ ಸಂಸದರು ಜನರಿಗೆ ಒಂದೂ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಅಭಿವೃದ್ಧಿ ಏನಿದ್ದರೂ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಹೇಳಿದರು.
ಗೆಲ್ಲುವ ವಿಶ್ವಾಸ: ದೇಶ, ರಾಜ್ಯದೆಲ್ಲೆಡೆ ಮೋದಿಯವರ ಅಲೆ, ಬಿಜೆಪಿ ಗಾಳಿ ಇದ್ದು ಈ ಬಾರಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ. ಮುದಗಲ್ ಭಾಗದಲ್ಲಿಯೂ ಬಿಜೆಪಿ ಅಲೆಯಿದ್ದು ಈ ಭಾಗದ ಜನರು ತಮ್ಮ ಮೇಲೆ ವಿಶ್ವಾಸವನ್ನು ಇಟ್ಟಿದ್ದಾರೆ. ತಮಗೆ ಮತ ಹಾಕಿ ಗೆಲ್ಲಿಸುವರು ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಮಾಜಿ ಸಚಿವ ರಾಜುಗೌಡ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಡಿಐಜಿ ಟಿ.ಆರ್. ನಾಯಕ, ಸಿದ್ದು ಬಂಡಿ, ಬಿಜೆಪಿ ತಾಲೂಕಾಧ್ಯಕ್ಷ ಸಿದ್ದನಗೌಡ ಪಾಟೀಲ್, ಮುದಗಲ್ ಬ್ಲಾಕ್ ಅಧ್ಯಕ್ಷ ಮುಬೀನ್ಸಾಬ್, ಗುರುಬಸಪ್ಪ ಸಜ್ಜನ್, ಸಿದ್ದಯ್ಯ ಹೊರಪೇಟೆ ಸೇರಿದಂತೆ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.
ರೋಡ್ ಶೋ ಅರ್ಧಕ್ಕೆ ಮೊಟಕು
ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ರೋಡ್ ಶೋ ಅರ್ಧಕ್ಕೆ ಮೊಟಕುಗೊಂಡ ಪ್ರಸಂಗ ಭಾನುವಾರ ಜರುಗಿತು. ರೋಡ್ ಶೋ ನಡೆಸಲು ಬೆಳಗ್ಗೆ 10.30ರಿಂದ 1 ಗಂಟೆವರೆಗೆ ಮಾತ್ರ ಚುನಾವನಾಧಿಕಾರಿಗಳು ಪರವಾನಗಿ ನೀಡಿದ್ದರು. ಆದರೆ ಗ್ರಾಮೀಣ ಭಾಗ ಸುತ್ತಿಕೊಂಡು ಮುದಗಲ್ಗೆ ಶಿವನಗೌಡ ನಾಯಕ ಮತ್ತು ಮಾಜಿ ಸಚಿವ ರಾಜುಗೌಡ ಬರುವಷ್ಟರಲ್ಲಿ 12.30 ಗಂಟೆಯಾಗಿತ್ತು. ಕೇವಲ ಅರ್ಧಗಂಟೆಯಲ್ಲಿ ರೋಡ್ ಶೋ ಮುಗಿಸಲು ಸಾಧ್ಯವಾಗಲಿಲ್ಲ. ಸರಿಯಾಗಿ ಒಂದು ಗಂಟೆಯಾಗುತ್ತಿದ್ದಂತೆ ಸ್ಥಳದಲ್ಲಿದ್ದ ಚುನಾವಣಾ ವಿಚಕ್ಷಣಾ ದಳದ ಅಧಿಕಾರಿಗಳು ರೋಡ್ ಶೋನಲ್ಲಿ ಬಳಸಲಾಗುತ್ತಿದ್ದ ಧ್ವನಿವರ್ಧಕ, ಭಾಜಾ ಭಜಂತ್ರಿಗಳನ್ನು ತಡೆದು ತಾಕೀತು ಮಾಡಿದ್ದರಿಂದ ಅಭ್ಯರ್ಥಿ ಶಿವನಗೌಡ ರೋಡ್ ಶೋ ಅರ್ಧಕ್ಕೆ ಮೊಟಕುಗೊಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

