22ರಂದು ವಿಶ್ವಭೂಮಿ ದಿನ, ಜಾಗೃತಿ ಜಾಥಾ
ರಾಯಚೂರು: ಜಿಲ್ಲಾಡಳಿತ, ಜಿಪಂ, ಕ್ಯಾಷುಟೆಕ್, ಆರ್ಟಿಪಿಎಸ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ಏ. 22ರಂದು ವಿಶ್ವಭೂಮಿ ದಿನದ ಅಂಗವಾಗಿ ಜಾಗೃತಿ ಜಾಥಾ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 8.30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಾಥಾಕ್ಕೆ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಚಾಲನೆ ನೀಡಲಿದ್ದು, ಹಸಿರು ನಗರಗಳು ಎಂಬ ಪರಿಕಲ್ಪನೆಯಲ್ಲಿ ಜಾಗೃತಿ ಜಾಥಾ ಆಯೋಜಿಸಲಾಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.
ಲೋಕ ಅದಾಲತ್: 3,024 ಕೇಸ್ ಇತ್ಯರ್ಥ
ರಾಯಚೂರು: ಜಿಲ್ಲೆಯಲ್ಲಿ ಜ.6ರಿಂದ ಏ.11ರ ವರೆಗೆ ನಡೆದ ಮೆಗಾ ಲೋಕಅದಾಲತ್ನಲ್ಲಿ ಒಟ್ಟು 3,024 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯವು ಇದರಲ್ಲಿ 33 ಮೋಟಾರು ವಾಹನ ಪ್ರಕರಣಗಳು, 32 ಸಿವಿಲ್ ಕೇಸುಗಳು, 929 ಜನನ ಮರಣ ಪ್ರಕರಣಗಳು ಸೇರಿ ಒಟ್ಟು 3,024 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಗಿದೆ ಎಂದು ತಿಳಿಸಿದೆ.
ಭೀರಲಿಂಗೇಶ್ವರ ಜಾತ್ರಾ ಮಹೋತ್ಸವ
ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ಬಬಲಾದ ಗ್ರಾಮದ ಬೀರಲಿಂಗೇಶ್ವರ ಜಾತ್ರ ಮಹೋತ್ಸವು ಮಂಗಳವಾರ ರಂದು ಬೆಳಗ್ಗೆ 6.30ಕ್ಕೆ ಗಂಗಾಸ್ಥಾನ ಮಾಡಿಕೊಂಡು ಪಲ್ಲಿಕಿ ಮೆರವಣಿಗೆ ಅದ್ಧೂರಿಯಾಗಿ ಜರುಗಿತು. ಹಿಂದೂ ಮುಸ್ಲಿಂ ಯಾವುದೇ ಜಾತಿ ಅನ್ನದೇ ಎಲ್ಲರೂ ಒಂದು ಗೂಡಿ ಸಂಜೆ ಭೀರಲಿಂಗೇಶ್ವರ ರಥೋತ್ಸವನ್ನು ಅದ್ಧೂರಿಯಾಗಿ ನೆರವೇರಿಸಿದರು. ಈ ಸಂದರ್ಭದಲ್ಲಿ ಸಾಬಣ್ಣ ಪೂಜಾರಿ, ಮಸ್ತೆಪ್ಪ ಪೂಜಾರಿ, ರಾಯಪ್ಪ ಪೂಜಾರಿ, ಮಲ್ಲಪ್ಪ ಪೂಜಾರಿ, ಶರಣಪ್ಪ ಗೌಡ ಬಿರಾದಾರ ಮಾಲಿ ಪಾಟೀಲ, ಸಿದ್ದಣ್ಣ ಗೌಡ, ರಾಯಪ್ಪ, ಹಸನ ಪಟೇಲ ಪೊಲೀಸ್ ಪಾಟೀಲ್, ಮಲ್ಲಣ್ಣ ಗೌಡ ಮಾಪಾಟೀಲ್, ಮಲ್ಲು ಬಡಕಣ್ಣೋರ ಅದ್ಧೂರಿ ಜಾತ್ರೆಯಲ್ಲಿ ಭಾಗವಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

