ಎರಡು ಶವ ಪತ್ತೆ
ಬೀದರ್: ಬೀದರ್ ರೇಲ್ವೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಂಗಳವಾರ ಎರಡು ಅಪರಿಚಿತ ಶವ ಪತ್ತೆಯಾಗಿವೆ.
ಬೀದರ್ ರೈಲು ನಿಲ್ದಾಣದ ಗೂಡ್ಸ್ ಯಾರ್ಡ್ನ ಹಳಿಗಳಲ್ಲಿ ಮಂಗಳವಾರ ಅಪರಿಚಿತ 25 ವರ್ಷದ ಯುವಕನ ಶವ ಪತ್ತೆಯಾಗಿದ್ದು, ಅದೇ ದಿನ ಭಾಲ್ಕಿ- ಹಲ್ಬರ್ಗ ರೈಲ್ವೆ ನಿಲ್ದಾಣದ ಮಧ್ಯೆ ಸುಮಾರು 65 ವರ್ಷದ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ ಎಂದು ರೇಲ್ವೆ ಪೊಲೀಸರು ತಿಳಿಸಿದ್ದಾರೆ. ವಾರಾಸುದಾರರಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.
ಶರಣರ ಸಿದ್ಧಾಂತ ಪಾಲಿಸಿದ್ರೆ ಮುಕ್ತಿ ಸಾಧ್ಯ
ಸಿಂಧನೂರು: ನಿತ್ಯದ ಜೀವನದಲ್ಲಿ ಶ್ರೇಷ್ಠ ಕಾಯಕ ಕೈಗೊಳ್ಳುವುದರಿಂದ ಮನಸ್ಸಿಗೆ ಸಂತೃಪ್ತಿ ಸಿಗುತ್ತದೆ. ಶರಣರ, ದಾರ್ಶನಿಕರ ತತ್ವ ಸಿದ್ಧಾಂತಗಳ ಪಾಲನೆಯಿಂದ ಜೀವನದಲ್ಲಿ ಮುಕ್ತಿ ಪಡೆಯಲು ಸಾಧ್ಯವಾಗುತ್ತದೆ ಎಂದು ಬಸವಕೇಂದ್ರದ ಗೌರವ ಸಲಹೆಗಾರ ಪಿ.ವೀರಭದ್ರಪ್ಪ ಕುರುಕುಂದಿ ಹೇಳಿದರು.
ನಗರದ ಬಸವ ಪ್ರಸಾದ ನಿಲಯದಲ್ಲಿ ಬಸವಕೇಂದ್ರ, ಯುವ ಬಸವಕೇಂದ್ರ ಹಾಗೂ ಮಹಿಳಾ ಬಸವಕೇಂದ್ರ ಸಂಯುಕ್ತಾಶ್ರಯದಲ್ಲಿ ನಡೆದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಚನಗಳ ತಿರುಳು ಅರ್ಥೈಸಿಕೊಂಡು ಬದುಕಿನಲ್ಲಿ ರೂಢಿಸಿಕೊಳ್ಳಬೇಕು. ಮೂಢನಂಬಿಕೆ, ಕಂದಾಚಾರ, ಆತ್ಮವಂಚನೆಯಿಂದ ದೂರವಿದ್ದು ಉತ್ತಮ ಜೀವನ ಸಾಗಿಸಬೇಕು ಎಂದರು.
ಬಸವ ಕೇಂದ್ರದ ಮುಖಂಡ ಶ್ರೀಶೈಲ ಪತ್ತಾರ ಮಾತನಾಡಿ, 12ನೇ ಶತಮಾನದ ಶಿವಶರಣರು ನಾಡಿಗೆ ಕೊಟ್ಟ ಕೊಡುಗೆ ಅಪಾರವಾಗಿದ್ದು ಬಸವಕೇಂದ್ರ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಮೂಲಕ ವಚನ ಸಾಹಿತ್ಯದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಬಸವಕೇಂದ್ರ ಅಧ್ಯಕ್ಷ ಗುಂಡಪ್ಪ ಬಳಿಗಾರ, ನಿವೃತ್ತ ಶಿಕ್ಷಕರಾದ ಮಲ್ಲಪ್ಪ, ಪಂಪಣ್ಣ ಹಳ್ಳಿ, ನಾಗಭೂಷಣ ನವಲಿ, ಗೌರಮ್ಮ ಬಳಿಗಾರ, ಮಲ್ಲನಗೌಡ ದೇವರಗುಡಿ, ವೀರಭದ್ರಪ್ಪ ಅಮರಾಪುರ, ಶಿವಲೀಲಾ ಮಲ್ಲಿಕಾರ್ಜುನ, ಬಿ.ವೀರೇಶ ಬಳಿಗಾರ, ರಾಜೇಶ್ವರಿ ವೀರೇಶ, ಯುವ ಬಸವಕೇಂದ್ರ ಅಧ್ಯಕ್ಷ ಚಂದ್ರಶೇಖರ ಯರದಿಹಾಳ, ಗೌರವಾಧ್ಯಕ್ಷ ಡಾ.ಶಂಬನಗೌಡ ನಿಡಿಗೋಳ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

