ರಾಯಚೂರು

ತರಬೇತಿ ಶಿಬಿರ

Published On :

ಗುಲ್ಬರ್ಗ: ರಂಗಭೂಮಿಯ ನುರಿತ ನಿರ್ದೇಶಕ ಡಾ. ಶ್ರೀಪಾದ ಭಟ್ಟ ನೇತೃತ್ವದಲ್ಲಿ ಸಮುದಾಯ ರಾಜ್ಯ ಸಮಿತಿಯು 5 ದಿನಗಳ ಸನಿವಾಸ ರಂಗ ತರಬೇತಿ ಶಿಬಿರವು ಮೇ 13ರಿಂದ 17 ರವರೆಗೆ ಹಾವೇರಿ ಜಿಲ್ಲೆಯ ಶೇಷಗಿರಿಯಲ್ಲಿರುವ ರಂಗ ಮಂದಿರದಲ್ಲಿ ಹಮ್ಮಿಕೊಂಡಿದೆ. ಶಿಬಿರದಲ್ಲಿ ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು. 40 ಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು, ರಂಗಭೂಮಿ ಕನಿಷ್ಠ ಅನುಭವ ಹೊಂದಿರಬೇಕು, ರಂಗಭೂಮಿಯಲ್ಲಿ ಕಾರ್ಯನಿರ್ವಹಿಸುವ ಆಸಕ್ತಿಯಿರಬೇಕು, ಹಾಗೂ ತರಬೇತಿ ಶಿಬಿರದ ನಂತರ ಆಯ್ಕೆಯಾದಲ್ಲಿ ಮುಂದಿನ ಎರಡು ಮೂರು ವರ್ಷಗಳವರೆಗೆ  ರಂಗಭೂಮಿಯಲ್ಲಿ ತೊಡಗಿಕೊಳ್ಳಲು ಆಸಕ್ತರಾಗಿರುವವರು ಮಾತ್ರ ಆಯ್ಕೆಗೆ ಅರ್ಹರಾಗಿರುತ್ತಾರೆ. ರಂಗಾಸಕ್ತರು ತಮ್ಮ ಸ್ವ ವಿವರ, ಹೆಸರು, ಅಂಚೆ ವಿಳಾಸ, ಇ-ಮೇಲ್, ಮೊಬೈಲ್ ನಂಬರ್, ಶಿಕ್ಷಣ, ಉದ್ಯೋಗ, ರಂಗಭೂಮಿಯ ಅನುಭವ, ಆಸಕ್ತಿಯ ಕ್ಷೇತ್ರಗಳು ಮುಂತಾದ ಮಾಹಿತಿಯೊಂದಿಗೆ ಏ.30 ರೊಳಗೆ ಅಂಚೆ ಚೀಟಿ ಲಗತ್ತಿಸಿದ ಸ್ವ ವಿಳಾಸವು ಲಕೋಟೆಯೊಂದಿಗೆ ಸಲ್ಲಿಸಬೇಕೆಂದು ಸಮುದಾಯ ಕಾರ್ಯದರ್ಶಿ ಡಾ. ಶರಣಪ್ಪ ಸೈದಾಪುರ ತಿಳಿಸಿದ್ದಾರೆ. ಶಿಬಿರದಲ್ಲಿ ಪ್ರವೇಶ, ವಸತಿ, ಊಟ ಹಾಗೂ ಉಪಹಾರ ಉಚಿತವಾಗಿರುತ್ತದೆ. ಮಾಹಿತಿಗೆ 9880773023, 9902520130 ಗೆ ಸಂಪರ್ಕಿಸಿ.
ಅಂಬೇಡ್ಕರ್ ಹಬ್ಬ
ಗುಲ್ಬರ್ಗ: ಭೀಮಶಕ್ತಿ ಯುವಕ ಸಂಘ ಮತ್ತು ಸಮಸ್ತ ಬಡಾವಣೆ ನಾಗರಿಕರ ಸಹಯೋಗದಲ್ಲಿ ಏ.27, ಏ.28 ರಂದು ಡಾ. ಅಂಬೇಡ್ಕರ್ ಜಯಂತ್ಯುತ್ಸವ ಅಂಗವಾಗಿ ಸಾಂಚಿ ನಗರದ ಪ್ರಬದ್ಧ ಬುದ್ಧ ವಿಹಾರದಲ್ಲಿ ಅಂಬೇಡ್ಕರ್ ಹಬ್ಬ ಜರುಗಲಿದೆ.
ಮೈಸೂರು ಮಠ ಉರಿಲಿಂಗ ಪೆದ್ದಿ ಸಂಸ್ಥಾನದ ಡಾ. ಜ್ಞಾನಪ್ರಕಾಶ ಸ್ವಾಮೀಜಿ ಉದ್ಘಾಟನೆ ಮಾಡುವರು. ಬಡಾವಣೆ ಹಿರಿಯ ಮುಖಂಡ ಆಯು. ಸಾಯಬಣ್ಣ ಬಬಲಾದಕರ್ ಅಧ್ಯಕ್ಷತೆ ವಹಿಸುವರು. ಮೈಸೂರಿನ ಖ್ಯಾತ ಚಿಂತಕ ಡಾ. ಶಿವಕುಮಾರ ಮುಖ್ಯ ಭಾಷಣಕಾರರಾಗಿ ಆಗಮಿಸುವರು. ರಾಷ್ಟ್ರೀಯ ಉಪಾಧ್ಯಕ್ಷ ಡಾ. ಶಿವರಾಂ ಮೊಘಾಜೀ ವಿಶೇಷ ಸನ್ಮಾನಿತರಾಗಿ ಹಾಜರಿರುವರು. ಏ.28 ರಂದು ಸಂಜೆ 7ಕ್ಕೆ ಗುಲ್ಬರ್ಗ ಸರ್ಕಾರಿ ಮಹಾವಿದ್ಯಾಲಯ ಸಹಪ್ರಾಧ್ಯಾಪಕ ಡಾ. ಶಿವಪುತ್ರ ಸರ್ವೋದಯ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸುವರು. ಮೈಸೂರು ಪರಿವರ್ತನಾ ಕಲಾತಂಡದಿಂದ ಸಂಗೀತ ಹಾಗೂ ಆಯು. ಗುಂಡಣ್ಣ ಡಿಗ್ಗಿಯವರಿಂದ ಹಾಸ್ಯ ಕಾರ್ಯಕ್ರಮಗಳು ನಡೆಯುವವು.
ಜಾತ್ರೆ ಇಂದು
ಗುಲ್ಬರ್ಗ: ಚಿತ್ತಾಪುರ ತಾಲೂಕಿನ ಕಂದಗೂಳ ಗ್ರಾಮದಲ್ಲಿ ಏ. 25ರಂದು ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಡೆಯಲಿದೆ. ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ರವರೆಗೆ ಪಲ್ಲಕಿ ಮೆರವಣಿಗೆ ನಡೆಯುವುದು. ಏ. 26 ರಂದು ಬೆಳಗ್ಗೆ 6 ಗಂಟೆಗೆ ಅಗ್ನಿಪ್ರವೇಶ, ಮಧ್ಯಾಹ್ನ 3 ಗಂಟೆಗೆ ವಾದ್ಯಗಳೊಂದಿಗೆ ಕುಂಬ ಮೆರವಣಿಗೆ ದೇವಸ್ಥಾನಕ್ಕೆ ತಲುಪುವುದು. ಸಾಯಂಕಾಲ 7 ಗಂಟೆಗೆ ರಥೋತ್ಸವ, ರಾತ್ರಿ 8 ಗಂಟೆಯ ನಂತರ ಭಜನಾ ಮಂಡಳಿಯವರಿಂದ ಭಜನೆ ನಡೆಯುವುದು ಎಂದು ದೇವಸ್ಥಾನ ಸಮತಿಯ ಅಧ್ಯಕ್ಷ ಧರ್ಮರಾಯ ಎ. ಪಾಟೀಲ್ ಕಂದಗೂಳ ತಿಳಿಸಿದ್ದಾರೆ.
ಪ್ರತಿಕ್ರಿಯೆ ಆಹ್ವಾನ
ಗುಲ್ಬರ್ಗ: ನಗರದ ಶೇಖಖ್ರೋಜಾ ಬಡಾವಣೆಯಲ್ಲಿ ಧಾರ್ಮಿಕ ಕಟ್ಟಡವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಪ್ರಯುಕ್ತ ಶೇಖ್ ರೋಜಾ ಬಡಾವಣೆಯ ಸಿ.ಎ.ಸೈಟ್ ಸಂಖ್ಯೆ ಪಿಎಲ್-60 ಮತ್ತು ಪಿಎಲ್- 61, ಸ.ನಂ.49, 50/1, 53/2, 53/3, 54/4 ಮತ್ತು 54/5ರಲ್ಲಿ ಉದ್ದೇಶಿತ ಧಾರ್ಮಿಕ ಕಟ್ಟಡಕ್ಕೆ ಸಂಬಂಧಿಸಿದಂತೆ ಸಾರ್ವ್ವಜನಿಕರಿಂದ ಪ್ರತಿಕ್ರಿಯೆ ಆಹ್ವಾನಿಸಲಾಗಿದೆ. ಧಾರ್ಮಿಕ ಕಟ್ಟಡ ನಿರ್ಮಿಸಲು ತೊಂದರೆಗಳಿದ್ದಲ್ಲಿ 15 ದಿನದೊಳಗೆ ಗುಲ್ಬರ್ಗ ಮಹಾನಗರ ಪಾಲಿಕೆಯಲ್ಲಿ ಅರ್ಜಿ ಸಲ್ಲಿಸುವಂತೆ ಗುಲ್ಬರ್ಗ ಮಹಾನಗರ ಪಾಲಿಕೆಯ ಆಯುಕ್ತರು ಕೋರಿದ್ದಾರೆ.
ಅಭಿಪ್ರಾಯ ಸಂಗ್ರಹ
ಗುಲ್ಬರ್ಗ: ವಿದ್ಯುತ್ ಸರಬರಾಜು ಕಂಪನಿಯು ತನ್ನ ಆರ್ಥಿಕ ವರ್ಷ 2014-15ನೇ ಸಾಲಿಗೆ ವಿದ್ಯುತ್ ದರ ಪರಿಷ್ಕರಣೆಗಾಗಿ ಆಯೋಗದ ಮುಂದೆ ಅರ್ಜಿ ಸಲ್ಲಿಸಬೇಕಿದೆ. ಈ ಸಂಬಂಧ ಸಾರ್ವಜನಿಕ ವಿಚಾರಣೆಯನ್ನು ಏಪ್ರಿಲ್ 30 ರಂದು ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಭಿಪ್ರಾಯ ಸಂಗ್ರಹಣೆಗೆ ಸಾರ್ವಜನಿಕರನ್ನು ಆಹ್ವಾನಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.