ರಾಯಚೂರು

ಭಾರತ ಧರ್ಮಗಳ ತವರೂರು: ಶಿವಾಚಾರ್ಯ

Published On :

ಅಫಜಲ್ಪುರ: ನಮ್ಮ ದೇಶ ಪುರಾತನ ಧರ್ಮಗಳ ನೆಲೆನಾಡಾಗಿದ್ದು, ಧರ್ಮಗಳ ತವರೂರಾಗಿದೆ ಎಂದು ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಹೇಳಿದರು.
ತಾಲೂಕಿನ ಹಿರೇ ಹವಳಗಾ ಗ್ರಾಮದಲ್ಲಿ ನಡೆದ ನೂತನ ರೇವಣಸಿದ್ದೇಶ್ವರ ಮಂದಿರದ ಉದ್ಘಾಟನಾ ಸಮಾರಂಭದ ನಿಮಿತ್ತ ಹಮ್ಮಿಕೊಂಡಿದ್ದ ಕಳಸಾರೋಹಣ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಲ್ಲಿ ಮಠ ಮಾನ್ಯಗಳಿಂದಲೇ ಇನ್ನೂ ಧರ್ಮ, ದೇವರು ಇದೆ. ಆಚಾರ, ವಿಚಾರಗಳು ಜೀವಂತವಾಗಿವೆ. ಯಾವುದೇ ಜಾತಿ ಜನಾಂಗದವನಾಗಿದ್ದರು ದೇವರ ಬಗ್ಗೆ ಆಸ್ತಿಕನಾಗಿ ತನ್ನ ಹೃದಯದಲ್ಲಿಟ್ಟುಕೊಂಡಿರುತ್ತಾನೆ. ದೇವಸ್ಥಾನ ಪರಿಪೂರ್ಣವಾಗಿ ಕಾಣಲು ಭವ್ಯ ಕಟ್ಟಡ, ಸುಂದರ ಮೂರ್ತಿ ಇದ್ದರೆ ಸಾಲದು ದೇವಸ್ಥಾನದ ಶಿಖರಕ್ಕೆ ಕಳಸ ಇದ್ದರೆ ಮಾತ್ರ ಅದು ಪರಿಪೂರ್ಣ ಎಂದು ಅವರು ನುಡಿದರು.
ಕಳಸಾರೋಹಣ: ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಶೈಲ ಪೀಠದವರೊಂದಿಗೆ ಬೆಳಗ್ಗೆ 11ಕ್ಕೆ ತೆರೆದ ವಾಹನದಲ್ಲಿ ಕುಂಭಮೇಳ, ಬಾಜಾ ಭಜಂತ್ರಿಯೊಂದಿಗೆ ಪುರ ಪ್ರವೇಶ ಮಾಡಿ ನೂತನ ಮಂದಿರಕ್ಕೆ ಕಳಸಾರೋಹಣ ನೆರವೇರಿಸಿದರು.
ಶ್ರೀಶೈಲ ಪೀಠಾಧೀಶ ಡಾ. ಚನ್ನಸಿದ್ದರಾಮ ಶಿವಾಚಾರ್ಯ ಮಾತನಾಡಿ, ದೇವಸ್ಥಾನಗಳು ಈ ದೇಶದ ಸಂಸ್ಕೃತಿಯನ್ನು ಎತ್ತಿಹಿಡಿಯುವ ಆಧ್ಯಾತ್ಮಿಕ ಕೇಂದ್ರಗಳಾಗಿವೆ ಎಂದು ನುಡಿದರು.
ಪಂಚಪೀಠಾಧೀಶ್ವರ ಶ್ರಮ: ಅಫಜಲ್ಪುರ ಸಂಸ್ಥಾನ ಹಿರೇಮಠದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಧರ್ಮಸಭೆಯ ಅಧ್ಯಕ್ಷತೆ ವಹಿಸಿ  ಮಾತನಾಡಿ, ಈ ನಾಡಿನಲ್ಲಿ ಧರ್ಮದ ಉಳಿವಿಗೆ ನಮ್ಮ ಸಂಸ್ಕೃತಿಯ ಉಳಿವಿಗಾಗಿ ಪಂಚಪೀಠಾಧೀಶ್ವರರು ಅವಿರತ ಶ್ರಮ ವಹಿಸುತ್ತಿದ್ದಾರೆ ಎಂದು ಹೇಳಿದರು.
ಸಭೆಯ ನಂತರ 10 ಜೋಡಿ ಸಾಮೂಹಿಕ ವಿವಾಹ ಜರುಗಿತು. ನವ ವಿವಾಹಿತರಿಗೆ ಜಗದ್ಗುರು ಹರಸಿದರು. ಸಿದ್ದರಾಮ ಶಿವಾಚಾರ್ಯರು ಚಿನ್ಮಯಗಿರಿ, ವಿರಭದ್ರ ಶಿವಾಚಾರ್ಯರು ಕಡಗಂಚಿ, ಶಿವಾನಂದ ಶಿವಾಚಾರ್ಯರು ಕುಮಸಗಿ, ರುದ್ರಮುನಿ ಶಿವಾಚಾರ್ಯರು ಬಸವಕಲ್ಯಾಣ ಶ್ರೀಗಳು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಆಲಮೇಲ, ಅತನೂರ, ಹಿರೇ ಜೇವರ್ಗಿ, ಮಾಗಣಗೇರಿ, ಹಿಂಚಗೇರಿ, ಕನ್ನೋಳಿ ಸೇರಿದಂತೆ ಹಲವಾರು ಹರಗುರು ಚರಮೂರ್ತಿಗಳು ಉಪಸ್ಥಿತರಿದ್ದರು. ಮಾಜಿ ಶಾಸಕ ಎಂ.ವೈ. ಪಾಟೀಲ್, ಜಿಪಂ ಸದಸ್ಯರಾದ ನಿತೀನ್ ಗುತ್ತೇದಾರ, ಸಿದ್ದಾರ್ಥ ಬಸರಿಗಿಡ, ಪಪಂ ಸದಸ್ಯ ಮಳೇಪ್ಪ ಡಾಂಗೆ, ಪಪಂ ಅಧ್ಯಕ್ಷ ಸಿದ್ರಾಮಪ್ಪ ಗಣಾಚಾರಿ, ಮಕ್ಬೂಲ್ ಪಟೇಲ್, ಕೋಳಿ ಸಮಾಜದ ತಾಲೂಕು ಅಧ್ಯಕ್ಷ ಶಂಕು ಮ್ಯಾಕೇರಿ, ಕರವೇ ಜಿಲ್ಲಾಧ್ಯಕ್ಷ ಶಿವುಕುಮಾರ ನಾಟೀಕಾರ ಸೇರಿದಂತೆ ಇತರರು ಇದ್ದರು. ಭಾರತಿ ಸಾಲಿಮಠ ನಿರೂಪಿಸಿದರು, ಶ್ವೇತಾ ಹಿರೇಮಠ ವಂದಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.