ಅಮೆರಿಕ ವಿವಿ ಸ್ನಾತಕೋತ್ತರಕ್ಕೆ ಆಯ್ಕೆ
ಸಿಂಧನೂರು: ಅಮೆರಿಕದ ಪ್ರತಿಷ್ಠಿತ ಬೂಸ್ಟಾನ್ ವಿಶ್ವವಿದ್ಯಾಲಯದ ಮಕ್ಕಳ ಪೌಷ್ಟಿಕತೆ ಸ್ನಾತಕೋತ್ತರ ಪದವಿಗೆ ಸಿಂಧನೂರಿನ ಮಕ್ಕಳ ತಜ್ಞ ಡಾ.ಕೆ. ಶಿವರಾಜ ಆಯ್ಕೆಯಾಗಿದ್ದಾರೆ. ದಕ್ಷಿಣ ಭಾರತದಿಂದ 25 ಮಕ್ಕಳ ತಜ್ಞರನ್ನು ಆಯ್ಕೆ ಮಾಡಿದ್ದು, ಹೈದ್ರಾಬಾದ್ ಕರ್ನಾಟಕ ಗ್ರಾಮೀಣ ಪ್ರದೇಶದಿಂದ ಆಯ್ಕೆಯಾದ ಏಕೈಕ ವ್ಯಕ್ತಿಯಾಗಿದ್ದಾರೆ. ಇದು ಒಂದು ವರ್ಷದ ಅಧ್ಯಯನವಾಗಿದ್ದು, ಹೈ-ಕ ಭಾಗದ ಮಾನಸಿಕ ಮತ್ತು ದೈಹಿಕ ಅಸಮತೋಲನ ಬೆಳವಣಿಗೆ ಹೋಗಲಾಡಿಸಲು ಅಧ್ಯಯನ ಅನುಕೂಲವಾಗಲಿದೆ ಎಂದು ವೈದ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.
ಗೂಳಿ ಬಸವೇಶ್ವರ ಜಾತ್ರೆ
ಶಹಾಪುರ: ಮದ್ರಿಕಿ ಗ್ರಾಮದಲ್ಲಿ ಗಚ್ಚಿನ ಮಠದ ಶ್ರೀಗಳ ಸನ್ನಿಧಾನದಲ್ಲಿ ಗೂಳಿಬಸವೇಶ್ವರ ಜಾತ್ರಾ ಮಹೋತ್ಸವ ನಡೆದಿದ್ದು ಮಠದಲ್ಲಿ ಹತ್ತು ಹಲವು ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ದೇಶಿಯ ಪರಂಪರೆ, ಗ್ರಾಮೀಣ ಕಲೆಯ ಬಿಂಬಿಸುವ ಕುಸ್ತಿ ಪಂದ್ಯಾಟಗಳು ಅದ್ಧೂರಿಯಿಂದ ಜರುಗಿದವು.

ನ್ಯಾಯಬೆಲೆ ಅಂಗಡಿ: ಆರೋಪ ಸತ್ಯಕ್ಕೆ ದೂರ
ಲಿಂಗಸ್ಗೂರು: ತಾಲೂಕಿನ ಉಳಿಮೇಶ್ವರ ಗ್ರಾಮದ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ಕೆಲವರು ಮಾಡಿದ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಗ್ರಾಮಸ್ಥರು ತಹಸೀಲ್ದಾರರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಗ್ರಾಮದ ನ್ಯಾಯಬೆಲೆ ಅಂಗಡಿ ಮಾಲೀಕರು ದಲಿತ ಮಹಿಳೆ ಮೇಲೆ ದೌರ್ಜನ್ಯ ಮಾಡಿಲ್ಲ. ಪ್ರತಿ ತಿಂಗಳು ಸರಿಯಾಗಿ ಗೋದಿ, ಅಕ್ಕಿ, ಸಕ್ಕರೆ ಸೇರಿದಂತೆ ಪಡಿತರ ಹಾಗೂ ಸೀಮೆಎಣ್ಣೆ ವಿತರಣೆ ಮಾಡಲಾಗುತ್ತದೆ. ಗ್ರಾಮದ ಕೆಲವರು ತಮ್ಮ ವೈಯಕ್ತಿಕ ವಿಚಾರಗಳನ್ನು ನ್ಯಾಯಬೆಲೆ ಅಂಗಡಿ ಮೇಲೆ ವಿನಾಕಾರಣ ಆರೋಪಿಸುತ್ತಿದ್ದಾರೆ.
ಪಡಿತರ ಚೀಟಿ ಇಲ್ಲದವರು ಅಂಗಡಿ ಮಾಲೀಕರ ವಿರುದ್ಧ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈಯುತ್ತಾರೆ ಹಾಗೂ ಅಂಗಡಿ ಮುಂದೆ ಕಲ್ಲು ಮತ್ತು ಕಟ್ಟಿಗೆ ತೂರಾಡುತ್ತಾರೆ. ಕಾರಣ ಸದರಿ ನ್ಯಾಯಬೆಲೆ ಅಂಗಡಿಯನ್ನು ನಿರಂತರವಾಗಿ ಇಲ್ಲಿಯೇ ಮುಂದುವರಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಗ್ರಾಮದ ಶ್ರೀನಿವಾಸ ಕನ್ನಾಳ, ಕರಿಯಮ್ಮ ಭೇರಗಿ, ಗೋವಿಂದಪ್ಪ ಬನ್ನಿಗೋಳ, ಹುಲ್ಲಪ್ಪ ಚಿತ್ರನಾಳ, ಮಲ್ಲಪ್ಪ ಮುಗಳಿ, ಯಂಕಪ್ಪ ಬನ್ನಿಗೋಳ, ಮೈಲಾರಪ್ಪ ಮೇಟಿ, ರೇಣುಕಾ, ಲಚಮಪ್ಪ, ಅಡಿವೆಪ್ಪ, ದ್ಯಾವಣ್ಣ, ಗೋಗೆಪ್ಪ, ಹನುಮಪ್ಪ, ಶ್ರೀನಿವಾಸಪ್ಪ, ಭೀಮಮ್ಮ, ರುದ್ರಮ್ಮ, ಈರಮ್ಮ, ವೆಂಕನಗೌಡ, ಯಂಕೋಬ, ಬಾಲಪ್ಪ, ಯಮನಪ್ಪ, ಸಿದ್ದಪ್ಪ ಇದ್ದರು.
ವಾರ್ಷಿಕೋತ್ಸವ ಇಂದು
ರಾಯಚೂರು: ನಗರದ ಎಸ್ಎಸ್ಎಂ ಸ್ಮಾರಕ ಮಹಾವಿದ್ಯಾಲಯದ ವಿದ್ಯಾರ್ಥಿ ಅಭಿವೃದ್ಧಿ ಮಂಡಳಿಯ ವಾರ್ಷಿಕೋತ್ಸವ ಸಮಾರಂಭ ವನ್ನು ಏ.26ರಂದು ಆಯೋಜಿಸಲಾಗಿದೆ. ಸಂಜೆ 6.30ಕ್ಕೆ ನಗರದ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಟಾಗೋರ ಸ್ಮಾರಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎ. ಪಾಪಾರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗುಲ್ಬರ್ಗ ವಿವಿ ಕುಲಸಚಿವ ಡಾ. ಚಂದ್ರಕಾಂತ್ ಯಾತನೂರು, ಕಾಲೇಜು ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ದರೂರು ಬಸವರಾಜ್ ಪಾಟೀಲ್, ಕಾರ್ಯದರ್ಶಿ ಅಶೋಕಕುಮಾರ್ ಭೋಜರಾಜ್ ಪಾಲ್ಗೊಳ್ಳಲಿದ್ದಾರೆಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
ಅಹವಾಲು ಸ್ವೀಕಾರ
ಯಾದಗಿರಿ: ಇಂದಿನಿಂದ ಏ. 29ರವರೆಗೆ ಯಾದಗಿರಿ ಜಿಲ್ಲೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಅರ್ಜಿ ಅಹವಾಲು ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯಾದಗಿರಿ ಲೋಕಾಯುಕ್ತ ಘಟಕದ ಅಧಿಕಾರಿಗಳು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಾರ್ವಜನಿಕರು ಖುದ್ದು ಹಾಜರಾಗಿ ತಮ್ಮ ಕುಂದುಕೊರತೆಗಳ ಬಗ್ಗೆ ಅರ್ಜಿಗಳನ್ನು ಸಲ್ಲಿಸಬಹುದು ಹಾಗೂ ಸ್ಥಳದಲ್ಲಿ ಫಾರ್ಮ್ ನಂ. 1 ಮತ್ತು ಫಾರ್ಮ್ ನಂ. 2 ಒದುಗಿಸಲಾಗುವುದು. ಇದೇ ಶನಿವಾರ ಗುರುಮಠಕಲ್ ಪಟ್ಟಣ ಪಂಚಾಯತ ಕಚೇರಿಯ ಆವರಣ, ಏ. 28ರಂದು ಶಹಾಪೂರ ತಹಶೀಲ್ ಕಚೇರಿ ಆವರಣದಲ್ಲಿ ಏ. 26ರಂದು ಸುರಪುರ ನಗರದ ಪುರಸಭೆ ಕಚೇರಿ ಆವರಣದಲ್ಲಿ ಜಿ. ಹನುಮೇಶ್ ಎಸ್.ಪಿ, ಆರ್.ಹೆಚ್. ನಾಯಕ್, ಡಿಎಸ್.ಪಿ. ಮತ್ತು ಬಿ.ಬಿ. ಪಟೇಲ್, ಪಿ.ಐ ಹಾಗೂ ಬಿ. ಅಮರೇಶ್ ಪಿ.ಐ ಇವರು ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಲು ಲೋಕಾಯುಕ್ತ ಪೋಲಿಸ್ ಅಧೀಕ್ಷಕರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.