ರಾಯಚೂರು

50 ನಾಗರಿಕರಿಗೆ ಉಚಿತ ನೇತ್ರ ಶಸ್ತ್ರ ಚಿಕಿತ್ಸೆ

Published On :

ಗುಲ್ಬರ್ಗ: ಜಿಲ್ಲೆಯ ಆಳಂದ ತಾಲೂಕಿನ ಕಮಲನಗರದಲ್ಲಿ ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ 380 ಜನರ ಕಣ್ಣುಗಳನ್ನು ಪರೀಕ್ಷಿಸಿ, ಚಿಕಿತ್ಸೆ ನೀಡಲಾಯಿತು. ಆಳಂದ ಮತ್ತು ಸುತ್ತಮುತ್ತಲಿನ ಗ್ರಾಮದ 22 ಪುರುಷರು, 28 ಮಹಿಳೆಯರು ಸೇರಿ ಒಟ್ಟು 50 ಬಡ ಹಿರಿಯ ನಾಗರಿಕರ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯನ್ನು ಬಸವೇಶ್ವರ ಆಸ್ಪತ್ರೆಯಲ್ಲಿ ನೆರವೇರಿಸಿ ಕೃತ್ರಿಮ ಮಸೂರ ಅಳವಡಿಸಲಾಯಿತು.
ಹೈ-ಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಶೀಲ್ ನಮೋಶಿ ಅವರ ಆಸಕ್ತಿ ಮತ್ತು ಪ್ರೋತ್ಸಾಹದ ಮೇರೆಗೆ ಜರ್ಮನಿಯ ಹಮಾರ ಬಂಧನ ಸ್ವಯಂ ಸೇವಾ ಸಂಸ್ಥೆ ಹಾಗೂ ಹೈ-ಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಮತ್ತು ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ 17ನೇ ಅಭಿಯಾನವಾಗಿ ಈ ಉಚಿತ ನೇತ್ರ ಚಿಕಿತ್ಸಾ ಶಿಬಿರ ಆಯೋಜಿಸಲಾಗಿತ್ತು.
60 ವರ್ಷಗಳಿಗೆ ಮೇಲ್ಪಟ್ಟ ಬಡಹಿರಿಯ ನಾಗರಿಕರಲ್ಲಿ ಬಹುತೇಕ ಫಲಾನುಭವಿಗಳು ಅನೇಕ ವರ್ಷಗಳಿಂದ ದೃಷ್ಟಿದೋಷದ ತೊಂದರೆ ಅನುಭವಿಸುತ್ತಿದ್ದರು. ಅದರಲ್ಲೂ ವಿಶೇಷವಾಗಿ 7 ಫಲಾನುಭವಿಗಳು ಈಗಾಗಲೇ ಕಾಯಂ ದೃಷ್ಟಿ ಕಳೆದುಕೊಂಡಿದ್ದು, ಇವರೆಲ್ಲರನ್ನು ಮನವೊಲಿಸಿ, ಶಸ್ತ್ರಚಿಕಿತ್ಸೆಯ ಎಲ್ಲ ಸಾರ್ವತ್ರಿಕ ಕಾಳಜಿಗಳನ್ನು ತೆಗೆದುಕೊಂಡು ಮುತುವರ್ಜಿಯಿಂದ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಯಿತು.
ಕ್ಯಾಟರ್ಯಾಕ್ಟ್‌ಗೆ ಒಳಪಟ್ಟ 50 ಫಲಾನುಭವಿಗಳಿಗೆ ಬಿಡುಗಡೆಯ ದಿನ ಹೈ-ಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಎಸ್.ಆರ್. ಹರವಾಳ ಮತ್ತು ಎಂ.ಆರ್. ಮೆಡಿಕಲ್ ಕಾಲೇಜಿನ ಡೀನ್ ಡಾ. ಬಿ.ಮಲ್ಲಿಕಾರ್ಜು ಪ್ರತಿ ರೋಗಿಯನ್ನು ಭೇಟಿ ಮಾಡಿ ಅವರ ಯೋಗಕ್ಷೇವುವನ್ನು ವಿಚಾರಿಸಿದರು. ರೋಗಿಗಳಿಗೆ ಉಚಿತವಾಗಿ ಕನ್ನಡಕ ಮತ್ತು ಕಣ್ಣಿನ ಔಷಧವನ್ನು ವಿತರಿಸಿದರು.
ನೇತ್ರ ಚಿಕಿತ್ಸಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಂ.ಆರ್. ಪೂಜಾರಿ ಅವರ ನೇತೃತ್ವದಲ್ಲಿ ನೇತ್ರ ತಜ್ಞರಾದ ಡಾ. ವಿಶ್ವನಾಥ ರೆಡ್ಡಿ, ಡಾ. ರಾಜಶ್ರೀ ರೆಡ್ಡಿ, ಡಾ. ಸಂತೋಷ ಪಾಟೀಲ, ಡಾ. ಮಂಜುಳಾ ಮಂಗಾಣಿ, ಡಾ. ಕವಿತಾ ಸಲಗರ, ಡಾ. ಸುಮಿತ್ ದೇಶಪಾಂಡೆ ಮತ್ತು ಡಾ. ಪ್ರಜ್ವಲ್‌ರೆಡ್ಡಿ ಚಿಕಿತ್ಸೆ ನೀಡಿದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.