ಜಿಲ್ಲಾ ಸಾಹಿತ್ಯ ಸಮ್ಮೇಳನ; ಪದಾಧಿಕಾರಿಗಳ ಕಡೆಗಣನೆ
ಕ.ಪ್ರ. ವಾರ್ತೆ ಲಿಂಗಸ್ಗೂರು ಫೆ.4
ತಾಲೂಕಿನ ಮಸ್ಕಿ ಪಟ್ಟಣದಲ್ಲಿ ಫೆ.11 ಮತ್ತು 12ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಮ್ಮೇಳನ ನಡೆಸುವ ಕುರಿತು ತಾಲೂಕು ಸಮಿತಿ ಪದಾಧಿಕಾರಿಗಳಿಗೆ ಸಮರ್ಪಕ ಮಾಹಿತಿ ನೀಡದೆ ಕಡೆಗಣಿಸಲಾಗಿದೆ ಎಂದು ಕಸಾಪ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಸೋಮವಾರ ಕಸಾಪ ತಾಲೂಕು ಅಧ್ಯಕ್ಷ ಸಿ. ಶರಣಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಸ್ಕಿ ಪಟ್ಟಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಪ್ರಸ್ತಾಪಿಸುತ್ತಿದ್ದಂತೆ, ಸಮ್ಮೇಳನ ಇನ್ನು ಆರೇಳು ದಿನ ಮಾತ್ರ ಉಳಿದಿದೆ. ಆದರೆ ಜಿಲ್ಲಾ ಸಮಿತಿ ತಾಲೂಕು ಪದಾಧಿಕಾರಿಗಳಿಗೆ ಸಮ್ಮೇಳನದ ರೂಪುರೇಷ ಕುರಿತು ಸಮರ್ಪಕ ಮಾಹಿತಿ ನೀಡದೆ ಕಡೆಗಣಿಸಲಾಗಿದೆ. ತಾಲೂಕಿನ ಸಾಹಿತ್ಯಾಸಕ್ತರು ನಮಗೆ ದೂರವಾಣಿ ಮೂಲಕ ಸಂಪರ್ಕಿಸಿ ಸಮ್ಮೇಳನದ ಕುರಿತು ಕೇಳುತ್ತಿದ್ದರೆ ನಾವು ಏನೆಂದು ಉತ್ತರಿಸಬೇಕು. ಮಸ್ಕಿಯಲ್ಲಿ ಜರುಗುವ ಸಮ್ಮೇಳನ ಜಿಲ್ಲಾ ಸಮ್ಮೇಳನವೋ ಅಥವಾ ಮಸ್ಕಿ ವಿಧಾನಸಭಾ ವ್ಯಾಪ್ತಿಯ ಸಮ್ಮೇಳನವೋ ಎಂಬುದು ನಮಗೆ ತಿಳಿಯದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಅಧ್ಯಕ್ಷರು ಪ್ರತಿಕ್ರಿಯಿಸಿ, ಲಿಂಗಸ್ಗೂರು ತಾಲೂಕಿನಲ್ಲಿ ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ಇದಕ್ಕೆ ಯಾರೂ ಅಸಮಾಧಾನಗೊಳ್ಳದೆ ಎಲ್ಲರೂ ಒಗ್ಗಟ್ಟಿನಿಂದ ಸಹಕಾರ ನೀಡುವ ಮೂಲಕ ಸಮ್ಮೇಳನ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಆಗ ಕಸಾಪ ಸಮ್ಮೇಳನ ತಾಲೂಕಿನಲ್ಲಿ ಜರುಗುವ ಪ್ರಯುಕ್ತ ಕೇವಲ ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಲೆ-ಕಾಲೇಜುಗಳು ಹಾಗೂ ಸರ್ಕಾರಿ ನೌಕರರಿಗೆ ರಜೆ ಘೋಷಿಸದೇ ಇಡೀ ತಾಲೂಕಿಗೆ ರಜೆ ಘೋಷಿಸುವಂತೆ ಸೂಚಿಸಲು ಪದಾಧಿಕಾರಿಗಳು ಒತ್ತಾಯಪಡಿಸಿದರು.
ಸಭೆಯಲ್ಲಿ ಕಸಾಪ ಪದಾಧಿಕಾರಿಗಳಾದ ಜಿ.ವಿ. ಕೆಂಚನಗುಡ್ಡ, ಟಿ.ಎಸ್. ಕುಮಾರಸ್ವಾಮಿ, ಮಂಜುನಾಥ ಕಾಮಿನ್, ಅಹ್ಮದ್, ನೌಕರರ ಸಂಘದ ಅಧ್ಯಕ್ಷ ಭೀಮಪ್ಪ ನಾಯಕ, ಶಿಕ್ಷಕರ ಸಂಘದ ಅಧ್ಯಕ್ಷ ಶಿವಯೋಗಪ್ಪ, ಶಿಕ್ಷಕರಾದ ಅಯ್ಯಪ್ಪ ಕವಿತಾಳ, ಶ್ರೀನಿವಾಸ, ಶಿವಾನಂದ ನರಹಟ್ಟಿ, ಹುಸೇನಪ್ಪ ಮುಂಡರಗಿ, ಮಹಾಂತೇಶ, ಶರಣಗೌಡ, ಅಮರೇಶಸ್ವಾಮಿ ಬಲ್ಲಟಗಿ, ಶರಣಗೌಡ, ಶರಣಯ್ಯ ಸೊಪ್ಪಿಮಠ, ಎಂ. ಮಂಜುಳಾ, ಕಮಲಾಕ್ಷಿ, ಮಲ್ಲಪ್ಪ ಸರ್ಜಾಪುರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

