ಏತ ನೀರಾವರಿ ಯೋಜನೆಗಳ ಜಾರಿಗೆ ಒತ್ತಾಯಿಸಿ ಧರಣಿ
ಕ.ಪ್ರ. ವಾರ್ತೆ , ಲಿಂಗಸ್ಗೂರು , ಫೆ.7
ತಾಲೂಕಿನ ಪ್ರಮುಖ ಏತನೀರಾವರಿ ಯೋಜನೆಗಳಾದ ನಂದವಾಡಗಿ ಹಾಗೂ ಗೌಡೂರು ಏತನೀರಾವರಿ ಯೋಜನೆಗಳನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಶುಕ್ರವಾರ ಪ್ರತಿಭಟನಾ ಧರಣಿ ನಡೆಸಲಾಯಿತು.
ಸ್ಥಳೀಯ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಪ್ರತಿಭಟನಾ ಧರಣಿ ನಡೆಸಿದ ಕೆಪಿಆರ್ಎಸ್ ಕಾರ್ಯಕರ್ತರು, ಉದ್ಯೋಗ ಖಾತ್ರಿ ಯೋಜನೆಯಡಿ ಸಮರ್ಪಕ ಕೆಲಸ ಒದಗಿಸಬೇಕು. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು, ಶೌಚಾಲಯ, ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಹಟ್ಟಿ ಚಿನ್ನದ ಗಣಿಯಲ್ಲಿ ಭೂಮಿ ಕಳೆದುಕೊಂಡವರಿಗೆ ನೌಕರಿ ಕೊಡಬೇಕು. ನಿರುದ್ಯೋಗಿಗಳಿಗೆ ಉದ್ಯೋಗದಲ್ಲಿ ಆದ್ಯತೆ ಕೊಡಬೇಕು.
ಮಂಜೂರಿಗೆ ಆಗ್ರಹ: ನಾಗಲಾಪುರ ರುದ್ರಭೂಮಿ ತಕ್ಷಣ ಜಾರಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಬೇಕು. ಹಲ್ಕಾವಟಗಿ ಗ್ರಾಮಕ್ಕೆ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಬೇಕು. ನಾಗಲಾಪೂರ, ತಲೆಖಾನ್, ನಾಗರಹಾಳ, ಹಟ್ಟಿ, ಪೈದೊಡ್ಡಿ ಸೇರಿ ಕೆಲ ಗ್ರಾಪಂಗಳಲ್ಲಿ ಅರ್ಜಿ ಸಲ್ಲಿಸಿದವರಿಗೆ ತಕ್ಷಣ ಮನೆ ಮಂಜೂರು ಮಾಡಬೇಕು. ಉ.ಖಾ.ಯಲ್ಲಿ 200 ದಿನ ಕೆಲಸ ನೀಡಿ ರು. 300 ಕೂಲಿ ಕೊಡಬೇಕು. ಹಲ್ಕಾವಟಗಿ-ಅಂಕನಾಳ ರಸ್ತೆ ಡಾಂಬರೀಕರಣ ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ರೈತ ಸಂಘದ ಗುರುಪಾದ ನಾಯಿಕೊಡಿ, ಪರಶುರಾಮ, ಹನುಮಂತಪ್ಪ, ಶಿವಪ್ಪ, ಛತ್ರಗೌಡ, ಯಮನೂರ, ಕಂಠೆಪ್ಪ, ನಾಗಮ್ಮ, ಗಂಗಮ್ಮ, ಯಲ್ಲಮ್ಮ, ಆಂಜನೇಯ, ಆದಪ್ಪ, ಹುಸೇನಪ್ಪ, ಎಸ್ಎಫ್ಐ ರಂಗನಾಥ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

