ರಾಯಚೂರು

ದಲಿತರ ಮೇಲಿನ ದೌರ್ಜನ್ಯಗಳಿಗೆ ಕಡಿವಾಣ ಹಾಕಲು ದಸಂಸ ಒತ್ತಾಯ

Published On :

ಸಿಂಧನೂರು: ಶಹಾಪುರ ತಾಲೂನ ಕನ್ಯಾಕೋ ಳೂರು ಗ್ರಾಮದ ದಲಿತ ವ್ಯಕ್ತಿಯ ಕೊಲೆ ಸೇರಿದಂತೆ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ದಲಿತರ ಮೇಲಾಗುತ್ತಿರುವ ಹಲ್ಲೆ, ಕೊಲೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ದಲಿತ ದೌರ್ಜನ್ಯಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ತಹಶೀಲ್ದಾರ್ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಿ ತಹಶೀಲ್ದಾರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಕನ್ಯಾಕೋಳೂರಿನ ದಲಿತ ದೇವೇಂದ್ರಪ್ಪನ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು. ಅಪರಾಧಿ ಗಳಿಗೆ ಮರಣದಂಡನೆ ವಿಧಿಸಿ ಮೃತನ ಕುಟುಂಬಕ್ಕೆ ರು. 50 ಲಕ್ಷ ಪರಿಹಾರ ನೀಡಬೇಕು. ನಗರದ ಮಹೆಬೂಬ ಕಾಲೊನಿಯ ಹನುಮಂತಪ್ಪ ಎನ್ನುವವರ ಪುತ್ರಿಯ ಅತ್ಯಾಚಾರ-ಕೊಲೆ ಪ್ರಕರಣ ವನ್ನು ಕೂಲಂಕುಷ ತನಿಖೆ ನಡೆಸಿ ಆರೋಪಿ ಕಪಟ ಸನ್ಯಾಸಿಗೆ ಗಲ್ಲು ಶಿಕ್ಷಣೆಗೆ ಗುರಿಪಡಿಸಬೇಕು. ಮೃತಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ತಾಲೂಕಿನ ದೀನಸಮುದ್ರ ಗ್ರಾಮದ ನ್ಯಾಯಬೆಲೆ ಅಂಗಡಿ ಸಂಚಾಲಕ ಹುಲಗಪ್ಪನ ಕುಟುಂಬಕ್ಕೆ ವಿನಾಕಾರಣ ಕಿರುಕುಳ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೆಂಗಲ್ ಗ್ರಾಮದ ಸರ್ವೇ ನಂ. 80ರಲ್ಲಿ ವಾಸಿಸುತ್ತಿರುವ ದಲಿತ ಜನಾಂಗದವರಿಗೆ ಕಿರುಕುಳ ನೀಡುತ್ತಿರುವ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು. ತುರ್ವಿಹಾಳ ಗ್ರಾಮದ 7ನೇ ವಾರ್ಡ್ ಹಾಗೂ ಸಿಂಧನೂರಿನ ಪಿಡಬ್ಲ್ಯೂಡಿ ಕ್ಯಾಂಪ್‌ನ ಸರ್ಕಾರಿ ಜಾಗಗಳಲ್ಲಿ ಹತ್ತಾರು ವರ್ಷಗಳಿಂದ ನೆಲೆಸಿರುವ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿ ಮನೆ ಕಟ್ಟಿಸಿಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ಅಶೋಕ ನಂಜಲದಿನ್ನಿ, ಸಂಘ ಟನಾ ಕಾರ್ಯದಶರ್ ತಿಮ್ಮಣ್ಣ ಅಲಬ ನೂರು, ತಾಲೂಕು ಕಾರ್ಯದರ್ಶಿಗಳಾದ ಮೌನೇಶ ರಾಗಲಪವರ್,  ಬಸವರಾಜ ಬುಕ್ಕನಹಟ್ಟಿ, ಸಾಸಲಮರಿ ಗ್ರಾಮ ಘಟಕದ ಅಧ್ಯಕ್ಷ ನಾಗರಾಜ ಸಾಸಲಮರಿ, ಗೌರವಾಧ್ಯಕ್ಷ ಸಿದ್ದಪ್ಪ ಮಲ್ಕಾಪುರ, ಕಾರ್ಯಾಧ್ಯಕ್ಷ ಗೋವಿಂದಪ್ಪ ಹೆಡಗಿನಾಳ, ನಾಗಪ್ಪ ಉದ್ಬಾಳ, ಯಲ್ಲಮ್ಮ, ಮುಖಂಡರಾದ ಮಹದೇವಪ್ಪ, ಹನುಮಂತ ಕೆಂಗಲ್, ರಮೇಶ ಬಸಾಪುರ, ಅಮರೇಶ ದೀನ ಸಮುದ್ರ, ಶಿವು ಬಸಾಪುರ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.