ರಾಯಚೂರು

ಪ್ರವಾಸಿ ತಾಣ ಅಭಿವೃದ್ಧಿ ಕಾಮಗಾರಿಗೆ ಚಾಲನೆ

Published On :

ದೇವದುರ್ಗ: ನಿಜಾಮರ ಆಡಳಿತದಲ್ಲಿ ನಿರ್ಮಾಣವಾದ ಆಲಂಖಾನ ಕೆರೆಯನ್ನು ಪ್ರವಾಸಿ ತಾಣವಾಗಿ ಮಾಡಲಾಗುವುದೆಂದು ಆರ್‌ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಎ. ರಾಜಶೇಖರ ನಾಯಕ ತಿಳಿಸಿದರು.
ತಾಲೂಕಿನ ಕೆ. ಇರಬಗೇರಾ ಗ್ರಾಪಂ ವ್ಯಾಪ್ತಿಯ ಕರಿಮರಡಿ ತಾಂಡಾ (ಆಲಂಖಾನ ತಾಂಡ) ಸೇರಿ 7 ತಾಂಡಾಗಳಿಗೆ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆ ಅಡಿ 31 ಲಕ್ಷ ಅನುದಾನದಲ್ಲಿ ಕಾಮಗಾರಿ ಹಾಗೂ ಆಲಂಖಾನ ಕೆರೆ ಅಭಿವೃದ್ಧಿಗೆ 67 ಲಕ್ಷ ಅನುದಾನದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ತಾಲೂಕಿನ ಕರಿಮರಡಿ ಗ್ರಾಮದ ಹತ್ತಿರದಲ್ಲಿರುವ ಆಲಂಖಾನ್ ಕೆರೆಯಿಂದ ಸುಮಾರು 500 ಎಕರೆ ಭೂಮಿ ಈಗಾಗಲೇ ನೀರಾವರಿಯಾಗಿದೆ. ಕೆರೆಯಲ್ಲಿ ನೀರು ಸಂಗ್ರಹವಾಗುವುದರಿಂದ ರೈತರ ಭೂಮಿಗಳಿಗೆ ಇನ್ನೂ  ಹೆಚ್ಚಿನ ನೀರಿನ ಸೌಲಭ್ಯ ದೊರೆಯಲಿದೆ. ಕೆರೆ ಪ್ರದೇಶವನ್ನು ಪ್ರವಾಸಿ ತಾಣವಾಗಿಸುವ ಆಲೋಚನೆಯಿದೆ ಎಂದು ಹೇಳಿದರು. ಶಾಸಕ ವೆಂಕಟೇಶ ನಾಯಕ ಅವರು ಈಗಾಗಲೇ ಕೆರೆಯಲ್ಲಿ ಬೋಟ್ ಸೌಲಭ್ಯ, ಪ್ರವಾಸಿಗರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕ್ರಿಯಾ ಯೋಜನೆ ಸಿದ್ಧಗೊಳಿಸಲು ಆದೇಶಿಸಿದ್ದಾರೆಂದರು.
ಅರಕೇರಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸ್ಸಯ್ಯ ಶಾಖೆ, ಗಂಗಪ್ಪಯ್ಯ ಪೂಜಾರಿ, ಭೀಮರಾಯ ದೊರೆ, ಶಂಕ್ರಪ್ಪ ಚವ್ಹಾಣ, ಜೀವಣ್ಣ ರಾಠೋಡ, ಶಿವಪ್ಪ ಕಂಪಿ, ಗ್ರಾಪಂ ಸದಸ್ಯರಾದ ಮಾನಶೆಯ್ಯ, ತಿರುಮಲಯ್ಯ, ಶಿವಪ್ಪ ಬಲ್ಲಿದವ್ ಕೋತಿಗುಡ್ಡ, ಡಾ. ವೆಂಕಟೇಶ ನಾಯಕ, ನರಸಣ್ಣ ನಾಯಕ, ಭೂತಪ್ಪ ಹೇರುಂಡಿ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.