ಖಾತ್ರಿ ಯೋಜನೆಯಲ್ಲಿ ತಾರತಮ್ಯ: ಆರೋಪ
ಮುದಗಲ್: ಗ್ರಾಮ, ತಾಂಡಾ-ದೊಡ್ಡಿಗಳಲ್ಲಿ ಗ್ರಾಮಸಭೆಗಳನ್ನು ನಡೆಯಿಸಿ ಸೂಕ್ತ ಫಲಾನುಭವಿಗಳನ್ನು ಹಾಗೂ ಕಾಮಗಾರಿಗಳನ್ನು ಆಯ್ಕೆ ಮಾಡದೇ ಖಾತ್ರಿ ಯೋಜನೆಯ ಕ್ರಿಯಾ ಯೋಜನೆ ತಯಾರಿಸಲಾಗಿದೆ ಎಂದು ಗ್ರಾಪಂ ಸದಸ್ಯ ಶಂಕ್ರಪ್ಪ ಪಮ್ಮಾರ, ಹನುಮಂತ ಗೊಲ್ಲರ ಹಾಗೂ ಉಮವ್ವ ರಾಠೋಡ, ಮಂಗಮ್ಮ ಲಾಲಪ್ಪ ತಲೇಖಾನ ಗ್ರಾಪಂನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆರೋಪಿಸಿದರು.
ಗ್ರಾಮೀಣ ಅಭಿವೃದ್ಧಿ ಸಚಿವರು ಗ್ರಾಮಸಭೆಗಳ ಮೂಲಕ ಖಾತ್ರಿ ಯೋಜನೆಯಡಿ ವೈಯಕ್ತಿಕ ಫಲಾನುಭವಿಗಳಿಗೆ ಶೌಚಾಲಯ, ಭೂ ಅಭಿವೃದ್ಧಿ, ಕೃಷಿ ಹೊಂಡ, ಕುರಿ-ಮೇಕೆ ಶೆಡ್, ಜಾನುವಾರ ಶೆಡ್ ಸೇರಿದಂತೆಅನೇಕ ಕಾಮಗಾರಿಗಳನ್ನು ನೀಡಿ ಗ್ರಾಮೀಣ ಜನರ ಜೀವನ ಮಟ್ಟ ಸುಧಾರಣೆ ಮಾಡುವುದಲ್ಲದೇ ಗುಳೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ 2013-14ನೇ ಸಾಲಿನಲ್ಲಿ ಖಾತ್ರಿ ಯೋಜನೆಯಡಿ ಹೆಚ್ಚುವರಿ ಕ್ರಿಯಾ ಯೋಜನೆ ತಯಾರಿಸಲು ತಿಳಿಸಿದೆ.
ಗ್ರಾಮಸಭೆ ನಡೆಸಿಲ್ಲ: ಆದರೆ ಇಲ್ಲಿ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರೇ ಏಕ ಪಕ್ಷೀಯ ನಿರ್ಧಾರದಿಂದ ಕೆಲ ಗ್ರಾ.ಪಂ. ಸದಸ್ಯರ ಹೆಸರಿಗೆ, ಅವರ ಸಂಬಂಧಿಕರ ಹೆಸರಿನಲ್ಲಿ ಖಾತ್ರಿ ಕಾಮಗಾರಿ ನೀಡಲಾಗಿದೆ. ಇದರಿಂದ ಉಳಿದ ಹಡಗಲಿ ತಾಂಡಾ, ಸೊಂಪೂರ, ವೆಣ್ಯಪ್ಪನ ತಾಂಡಾ, ರಾಮಪ್ಪನ, ಲಿಂಬಪ್ಪನ ತಾಂಡಾಗಳಲ್ಲಿ ಗ್ರಾಮಸಭೆ ನಡೆಸಿಲ್ಲ. ಇಲ್ಲಿನ ಜನರಿಗೆ ವೈಯಕ್ತಿಕ ಕೆಲಸ ನೀಡಿಲ್ಲ ಎಂದು ದೂರಿದರು. ಒಂದು ವರ್ಷದಿಂದ ಖರ್ಚು-ವೆಚ್ಚದ ಮಾಹಿತಿ ನೀಡಿಲ್ಲ ಸಭೆಗೆ ಓದಿ ಹೇಳುವದರಿಂದ ಸಂಪೂರ್ಣ ಮಾಹಿತಿ ಸಿಗುವುದಿಲ್ಲ. ಲಿಖಿತವಾಗಿ ವಿವರ ನೀಡುವಂತೆ ಸದಸ್ಯರು ಒತ್ತಾಯಿಸಿದರು.
ಒಪ್ಪಿಗೆ: ಆಗ ಪಿಡಿಒ ನಾಗೇಶ ನೀಡುವದಾಗಿ ಭರವಸೆ ನೀಡಿ ಜಾರಿಕೊಂಡರು. ನಂತರ 2013-14ನೇ ಸಾಲಿನ 13ನೇ ಹಣಕಾಸು ಯೋಜನೆಯಡಿ ಬಂದ ರು. 9ಲಕ್ಷಗಳಿಗೆ ಪ್ರತಿ ಸದಸ್ಯರಿಗೆ 34 ಸಾವಿರದಂತೆ ಕಾಮಗಾರಿ ಪಡೆದು ಕ್ರಿಯಾ ಯೋಜನೆಗೆ ಒಪ್ಪಿಗೆ ಸೂಚಿಸಲಾಯಿತು. ಕುಡಿಯುವ ನೀರು, ಇಂದಿರಾ ಅವಾಜ್ ಮನೆ ಸೇರಿದಂತೆ ಇತರ ವಿಷಯಗಳ ಕುರಿತು ಚರ್ಚಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ. ಸದಸ್ಯ ಹನುಮಂತ ಪಾಪಣ್ಣ ವಹಿಸಿದ್ದರು, ಉಪಾಧ್ಯಕ್ಷೆ ಗೌರಮ್ಮ, ತಾ.ಪಂ.ಸದಸ್ಯ ತಿಮ್ಮಣ್ಣ ನಾಯಕ, ಕಾರ್ಯದರ್ಶಿ ಜೆ. ಮಲ್ಲಿಕಾರ್ಜುನ ಸೇರಿದಂತೆ ಗ್ರಾ.ಪಂ. ಸದಸ್ಯರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

