ಜಲಮೂಲ ರಕ್ಷಣೆ ಮೊದಲಾದ್ಯತೆಯಾಗಲಿ
ಮಸ್ಕಿ(ಬಸವಪ್ಪಶಾಸ್ತ್ರಿ ವೇದಿಕೆ): ಜಲಮೂಲ ರಕ್ಷಣೆ ಎಲ್ಲರ ಮೊದಲಾದ್ಯತೆಯಾಗಲಿ. ಕೇವಲ ಮಾನವನಿಗಷ್ಟೇ ಅಲ್ಲ, ಎಲ್ಲ ಜೀವಸಂಕುಲಕ್ಕೂ ನೀರು ಲಭ್ಯವಾಗುವಂಥ ಕಾರ್ಯ ಮಾಡುವುದು ಹೆಚ್ಚು ಅವಶ್ಯ ಎಂದು ಬೆಂಗಳೂರಿನ ಪ್ರೊ. ಎಂ.ಆರ್. ನಾಗರಾಜ್ ಕರೆ ನೀಡಿದರು.
ಮಸ್ಕಿಯ ಬಸವಪ್ಪಶಾಸ್ತ್ರಿ ವೇದಿಕೆಯಲ್ಲಿ ರಾಯಚೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಜೀವಸೆಲೆಗಳು ಎಂಬ ವಿಚಾರಗೋಷ್ಠಿಯಲ್ಲಿ ಜೀವಜಲ ಕುರಿತು ಮಾತನಾಡಿ, ಭೂಮಿಯ ಮೇಲ್ಮೈಯಲ್ಲಿ ನೀರಿನ ಸಂರಕ್ಷಣೆ ಕ್ರಮಗಳನ್ನು ಎಲ್ಲರೂ ಕೈಗೊಳ್ಳುವುದು ತೀರಾ ಅವಶ್ಯ. ಆಗ ಮಾತ್ರ ಅಂತರ್ಜಲಮಟ್ಟ ಕಾಯ್ದುಕೊಂಡು ಮುಂದಿನ ಪೀಳಿಗೆಗೆ ಶುದ್ಧ ನೀರು ದೊರಕಿಸಲು ಸಾಧ್ಯವಾಗುತ್ತದೆ ಎಂದರು.
ನದಿ ನೀರು ವ್ಯರ್ಥವಾಗಿ ಸಮುದ್ರಕ್ಕೆ: ಸದ್ಯ ಲಭ್ಯವಿರುವ ಶುದ್ಧ ನೀರನ್ನು ಕಲುಷಿತಗೊಳಿಸುವ ಕಾರ್ಯಕ್ಕೆ ಮೊದಲು ಕಡಿವಾಣ ಹಾಕುವು ಕಾರ್ಯ ಆಗಬೇಕು. ಹಾಗೆಯೇ ಲಭ್ಯ ನೀರಿನ ಸಮರ್ಪಕ ಮತ್ತು ಅವಶ್ಯಕತೆಗೆ ತಕ್ಕಂತೆ ಬಳಕೆ ಮಾಡುವುದು ಪೋಲಾಗದಂತೆ ತಡೆಯುವುದು ಎಲ್ಲರ ಆದ್ಯತೆಯಾಗಬೇಕೆಂದು ಸಲಹೆ ನೀಡಿದರು.
ನದಿ ನೀರಿನ ಬಳಕೆಯಲ್ಲಿ ನಾವು ಇಂದು ಸೋತಿದ್ದೇವೆ. ನದಿ ನೀರಿನ ವಿಚಾರಕ್ಕೆ ರಾಜ್ಯ ರಾಜ್ಯಗಳ ಮಧ್ಯೆ ವಿವಾದಗಳಾಗುತ್ತಿವೆ. ಆದರೆ ಎರಡೂ ರಾಜ್ಯಗಳವರು ನದಿ ನೀರು ವ್ಯರ್ಥವಾಗಿ ಸಮುದ್ರ ಸೇರುವ ಬಗ್ಗೆ ಆಲೋಚಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ನಿಟ್ಟಿನಲ್ಲಿ ಸಾಹಿತ್ಯ ಸಹ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸೌರಶಕ್ತಿ ಉತ್ಪಾದನೆ ಕೈಗೆಟುಕುವಂಥ ದರದಲ್ಲಿ: ಸೌರಶಕ್ತಿಯ ಕುರಿತು ಮಾತನಾಡಿದ ಪುಣೆಯ ಮಾಲತೇಶ ಕುಲಕರ ಿ, ಸೌರಶಕ್ತಿ ಉತ್ಪಾದನೆಗೆ ಬಂಡವಾಳ ಹೂಡಿಕೆಯ ಪ್ರಮಾಣ ಹೆಚ್ಚಾಗಿತ್ತು. ಆದರೆ ಈಚಿನ ದಿನಗಳಲ್ಲಿ ಸೌರಶಕ್ತಿಯ ಉತ್ಪಾದನೆ ಕೈಗೆಟುಕುವಂಥ ದರದಲ್ಲಿ ಲಭ್ಯವಾಗುತ್ತಿರುವುದು ಸೌಲಭ್ಯದ ಲಾಭ ದೊರೆಯುವಂತೆ ಮಾಡಿದೆ. ಅದರಲ್ಲೂ ದೇಶದಲ್ಲಿ ಗಂಟೆಗೆ 100 ಬಿಲಿಯನ್ ಮೆ.ವ್ಯಾ. ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ದೇಶದಲ್ಲಿದೆ. ಆದರೆ ಅದರ ಬಳಕೆಗೆ ಎಲ್ಲರೂ ಮುಂದಾಗಬೇಕಿದೆ ಎಂದರು.
ಸಾಹಿತ್ಯ ಸಮ್ಮೇಳನದಲ್ಲಿ ಸೌರಶಕ್ತಿಯ ಪ್ರಯೋಜನ ಎಲ್ಲರಿಗೆ ದೊರೆಯುವಂತೆ ಸರ್ಕಾರದ ಮೇಲೆ ಒತ್ತಡ ಹೇರುವಲ್ಲಿ ನಿರ ಯ ಅಂಗೀಕರಿಸಬೇಕೆಂದು ಅವರು ಆಗ್ರಹಿಸಿದರು. ಗೋಷ್ಠಿಯಲ್ಲಿ ನಿವೃತ್ತ ಶಿಕ್ಷಣ ನಿರ್ದೇಶಕ ಡಾ. ಸಿ.ವಿ. ಪಾಟೀಲ್ ಅಧ್ಯಕ್ಷತೆ ನುಡಿಗಳನ್ನಾಡಿದರು. ದೇವದುರ್ಗ ತಾಲೂಕು ಕಸಾಪ ಅಧ್ಯಕ್ಷ ನರಸಿಂಗರಾವ್ ಸರ್ಕಿಲ್ ಇದ್ದರು.
ಗೈರು ದರ್ಬಾರು!
ಮಸ್ಕಿ: ಪಟ್ಟಣದಲ್ಲಿ ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಂಭ್ರಮದಲ್ಲಿತ್ತು. ಆದರೆ ಜಿಲ್ಲಾಡಳಿತ ಮಾತ್ರ ಇಂಥ ಸಂಭ್ರಮದಿಂದ ದೂರವೇ ಇತ್ತು. ಜಿಲ್ಲಾಡಳಿತದ ಒಬ್ಬ ಅಧಿಕಾರಿ ಮಾತ್ರ ಸಮಾರಂಭದಲ್ಲಿದ್ದರು. ಉಳಿದಂತೆ ಅಧಿಕಾರಿಗಳು ಕಾಣಸಿಗಲೇ ಇಲ್ಲ. ರಾಯಚೂರು ಜಿಲ್ಲಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಂಗಳವಾರ ಕಂಡುಬಂದ ದೃಶ್ಯವಿದು. ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು, ಜಿಪಂ ಸಿಇಒ ವಿಜಯ ಜೋತ್ಸ್ನಾ ಅವರೂ ಸೇರಿದಂತೆ ಅನೇಕ ಅಧಿಕಾರಿಗಳ ಹೆಸರಿತ್ತು. ಆದರೆ ವೇದಿಕೆಯಲ್ಲಿ ಕಂಡುಬಂದಿದ್ದು ಮಾತ್ರ ಲಿಂಗಸ್ಗೂರು ಸಹಾಯಕ ಆಯುಕ್ತ ಯೋಗೀಶ್ ಮಾತ್ರ. ಕೆಲವೇ ಕೆಲ ಪೊಲೀಸ್ ಸಿಬ್ಬಂದಿ ಬಿಟ್ಟರೆ ಅಲ್ಲಿ ಜಿಲ್ಲಾಡಳಿತದ ಒಬ್ಬ ಹಿರಿಯ ಅಧಿಕಾರಿಯೂ ಕಂಡುಬರಲಿಲ್ಲ. ಇದು ಜಿಲ್ಲಾಡಳಿತ ಕನ್ನಡದ ಕಾರ್ಯಕ್ರಮದತ್ತ ತೋರಿದ ಕಾಳಜಿಯನ್ನು ಸ್ಪಷ್ಟ ಮಾಡಿತ್ತು.
ಮುಖ್ಯಾಂಶಗಳು
ಚ ಶಾಸಕರಾದ ಡಾ. ಶಿವರಾಜ್ ಪಾಟೀಲ್, ಹಂಪಯ್ಯ ನಾಯಕ, ತಿಪ್ಪರಾಜು ಹವಾಲ್ದಾರ್, ವೆಂಕಟೇಶ ನಾಯಕ ಗೈರು
ಚ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಶಿವರಾಜ್ ಪಾಟೀಲ್ ಗೈರು
ಚ ಕಸಾಪ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ ಸಹ ಗೈರು
ಚ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅನುಪಸ್ಥಿತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

