ಕ್ರಿಕೆಟ್; ಹುಬ್ಬಳ್ಳಿ ರೇಲ್ವೆ ತಂಡಕ್ಕೆ ರೋಚಕ ಜಯ
ಬೀದರ್: ಕೆಎಸ್ಸಿಎ ಸಹಯೋಗದಲ್ಲಿ ನಡೆಯುತ್ತಿರುವ ರಾಯಲ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೂರನೇ ದಿನದಾಟದಲ್ಲಿ ಜಯದ ತುದಿಗಾಲಲ್ಲಿ ನಿಂತಿದ್ದ ರಾಯಚೂರು ಸಿಟಿ ಎಲೆವನ್ ತಂಡವನ್ನು ಕೊನೆ ಘಳಿಗೆಯಲ್ಲಿ ಮಣಿಸಿದ ಹುಬ್ಬಳ್ಳಿ ದಕ್ಷಿಣ ಮಧ್ಯ ರೇಲ್ವೆ ತಂಡ ರೋಚಕ ಜಯ ದಾಖಲಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಹುಬ್ಬಳ್ಳಿ ತಂಡದ ಆರಂಭದ ಜೋಡಿ ನವೀನ್ ಮಟ್ಟಿ ಮತ್ತು ರಾಜದೇವ್ ಶುಕ್ಲಾ 71 ಎಸೆತಗಳಲ್ಲಿ 75 ರನ್ಗಳನ್ನು ಗಳಿಸಿ ತಂಡಕ್ಕೆ ಆಸರೆಯಾದರು. ನಂತರದ ವಿಕೆಟ್ಗಳು ಕ್ರೀಸ್ನಲ್ಲಿ ಹೆಚ್ಚು ಹೊತ್ತು ಉಳಿಯಲಿಲ್ಲ. 46.5 ಓವರ್ಗಳಲ್ಲಿ 245 ರನ್ಗಳನ್ನು ಮಾಡಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ರಾಯಚೂರಿನ ಮುರಳಿ ಕೃಷ , ಸಾಹಿಲ್ ಸಲೀಂ, ನರೇಶ ರೆಡ್ಡ ಮತ್ತು ರಾಘವೇಂದ್ರ ತಲಾ 2 ವಿಕೆಟ್ ಕಬಳಿಸಿದರು.
ರಾಯಚೂರು ತಂಡದ ಕನಸು ಭಗ್ನ: ನಂತರ ಬ್ಯಾಟಿಂಗ್ಗೆ ಇಳಿದ ರಾಯಚೂರು ಸಿಟಿ ಎಲೆವನ್ ತಂಡದ ಮುರಳಿಕೃಷ ಶಿವಾನಂದ ಬಿ ಅವರು ತಂಡವನ್ನು ಜಯದತ್ತ ಕೊಂಡೊಯ್ಯಲು ಯತ್ನಿಸಿದರಾದರೂ ಹುಬ್ಬಳ್ಳಿಯ ರಾಜದೇವ ಶುಕ್ಲಾ ಮಾರಕ ಬೌಲಿಂಗ್ಗೆ ತತ್ತರಿಸಿದ ತಂಡ 8 ವಿಕೆಟ್ ಕಳೆದುಕೊಂಡಿತು. ಕೊನೆಗೆ 30 ಎಸೆತಗಳಲ್ಲಿ ಕೇವಲ 3 ರನ್ ಬೇಕಿದ್ದರೂ ಹುಬ್ಬಳ್ಳಿ ತಂಡದ ಸೌನಕ್ ಅವರ ಬೌಲಿಂಗ್ ದಾಳಿ ರಾಯಚೂರು ತಂಡದ ಕನಸನ್ನು ಭಗ್ನಗೊಳಿಸಿತು.
ಕೊನೆಯ ವಿಕೆಟ್ ಜೊತೆಯಾಟದಲ್ಲಿ ಶರಬಣ ಮತ್ತು ಶಿವಾನಂದ ಜಯಮಾಲೆ ಹಾಕಿಕೊಳ್ಳುವ ತವಕದಲ್ಲಿದ್ದರಾದರೆ ಎದುರಾಳಿಗಳ ಕರಾರುವಾಕ್ ಬೌಲಿಂಗ್ಗೆ ವಿಚಲಿತರಾದಂತೆ ಕಂಡುಬಂದ ಶಿವಾನಂದ ಲಾಂಗ್ ಆನ್ನಲ್ಲಿ ಕೃಷ ಗೆ ಕ್ಯಾಚ್ ನೀಡಿ ನಿರಾಶೆ ಮೂಡಿಸಿದರು.
ರಾಯಚೂರು ಸಿಟಿ ಎಲೆವನ್ ತಂಡ 44 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 242 ರನ್ಗಳನ್ನು ಮಾತ್ರ ಪೇರಿಸುವಲ್ಲಿ ಸಫಲರಾದರು. ಹುಬ್ಬಳ್ಳಿಯ ರಾಜದೇವ ಶುಕ್ಲಾ 10 ಓವರ್ಗಳಲ್ಲಿ 2 ಮೇಡನ್ನೊಂದಿಗೆ 39 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ಸೌನಕ್ 6 ಓವರ್ಗಳಲ್ಲಿ 17 ರನ್ ನೀಡಿ 3 ವಿಕೆಟ್ ಪಡೆದರು.
ಶುಕ್ಲಾಗೆ ಪಂದ್ಯಶ್ರೇಷ್ಠ: ಅತ್ಯುತ್ತಮ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ನೀಡಿದ ಹುಬ್ಬಳ್ಳಿ ತಂಡದ ರಾಜದೇವ್ ಶುಕ್ಲಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಹಿರಿಯ ನ್ಯಾಯವಾದಿ ವಿಲಾಸರಾವ್ ಮೋರೆ ಮತ್ತು ರೋಟರಿಯ ಕಾಮಶೆಟ್ಟಿ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಿದರು. ಮಂಗಳವಾರದ ಪಂದ್ಯದಲ್ಲಿ ರಾಯಚೂರಿನ ಭೀಮಾಚಾರ್ಯ ಕೆ. ಹಾಗೂ ಬೀದರ್ನ ವಸಂತ ಕುಲಕರ ಿ ಅಂಪೈರ್ಗಳಾಗಿದ್ದರೆ ಸ್ಕೋರರ್ ಬಿಜಾಪುರ ಜಿಲ್ಲೆಯ ನಾಗೇಶ ಸುರಗಿಹಳ್ಳಿ, ವೀಕ್ಷಕ ವಿವರಣೆಗಾರರಾಗಿ ವಿನಾಯಕ ಕುಲಕರ ಿ ಮತ್ತು ಇದ್ರೀಸ್ ಕಾರ್ಯನಿರ್ವಹಿಸಿದರು. ಬುಧವಾರ ಬೆ.9ಕ್ಕೆ ನೆಹರು ಕ್ರೀಡಾಂಗಣದಲ್ಲಿ ಬೀದರ್ ರಾಯಲ್ ಕ್ರಿಕೆಟ್ ಕ್ಲಬ್ ಮತ್ತು ಬೀದರ್ ಎಲೆವನ್ (ಬಿ) ತಂಡದ ವಿರುದ್ಧ ಪಂದ್ಯ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

