ರಾಯಚೂರು

ಶಾಸ್ತ್ರೀಯ ಸ್ಥಾನ'ಮಾನ'ಕ್ಕೆ ಅನುದಾನ ತಾರತಮ್ಯ

Published On :

(ಬಸವಪ್ಪಶಾಸ್ತ್ರಿ ವೇದಿಕೆ)
ಕ.ಪ್ರ. ವಾರ್ತೆ      ಮಸ್ಕಿ      ಫೆ.11
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತರೂ ಕೇಂದ್ರದಿಂದ ಅನುದಾನದ ತಾರತಮ್ಯಕ್ಕೆ ಅಸಮಾಧಾನ. ರೈತರ ದುಡಿಮೆಗೆ ಪ್ರತಿಫಲ ದೊರೆಯಲೆಂಬ ಆಶಯ. 371(ಜೆ)ನೇ ಕಲಂ ಅಡಿ ದೊರೆತ ವಿಶೇಷ ಸ್ಥಾನಮಾನದ ಲಾಭವನ್ನು ರೈತರು, ಕೃಷಿ ಕೂಲಿಕಾರರಿಗೂ ದೊರಕಿಸುವ ಚಿಂತನೆಗೆ ಸಲಹೆ. ಯಾಂತ್ರೀಕರಣ, ಜಾಗತೀಕರಣ, ಉದಾರೀಕರಣ ನೀತಿಗಳಿಂದಾಗಿ ಗ್ರಾಮೀಣರ ಬದುಕಿನಿಂದ ಮರೆಯಾಗುತ್ತಿರುವ ಕಲೆಗಳ ಬಗ್ಗೆ ಆತಂಕ.
- ಮಸ್ಕಿಯಲ್ಲಿ ಮಂಗಳವಾರ ಆರಂಭಗೊಂಡ ರಾಯಚೂರು ಜಿಲ್ಲಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಡಾ. ಸ್ವಾಮಿರಾವ್ ಕುಲಕರ    ಿ ಅವರ ಸಮ್ಮೇಳನಾಧ್ಯಕ್ಷ ಸ್ಥಾನದ ನುಡಿಯ ಮುಖ್ಯಾಂಶಗಳಿವು.
ಒಂದು ಕಣ    ಿಗೆ ಸುಣ    , ಇನ್ನೊಂದಕ್ಕೆ ಬೆಣ    ೆ: ಕೇಂದ್ರ ಸರ್ಕಾರ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಿ ವರ್ಷಗಳೇ ಗತಿಸಿವೆ. ಆದರೆ ನೆರೆಯ ತಮಿಳುನಾಡಿಗೆ ತೋರಿದಂಥ ಔದಾರ್ಯ ಕನ್ನಡ ಭಾಷೆಗೆ ತೋರಲಿಲ್ಲ. ತಮಿಳಿಗೆ 100 ಕೋಟಿ ಒದಗಿಸಿದ ಕೇಂದ್ರವು ಕನ್ನಡ ಭಾಷೆಗೆ ಕೊಟ್ಟಿದ್ದು ಕೇವಲ 25 ಕೋಟಿ. ಇಂಥ ತಾರತಮ್ಯ ನೀತಿ ತೊಲಗಿದಾಗ ಮಾತ್ರ ಶಾಸ್ತ್ರೀಯ ಸ್ಥಾನಮಾನ ನಿಜವಾಗಿಯೂ ನೀಡಿದಂತಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ 371(ಜೆ)ನೇ ಕಲಂ ಅಡಿ ವಿಶೇಷ ಸ್ಥಾನಮಾನ ನೀಡಿದ್ದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಭಿನಂದನೆಗೆ ಅರ್ಹ. ಹಾಗೆಯೇ ಯಾವುದೇ ಸೌಲಭ್ಯ ದೊರೆತರೂ ರಾಜಕೀಯ ವ್ಯಕ್ತಿಗಳು, ಜನರ ಮನೋಭಾವಗಳು ಬದಲಾಗದಿದ್ದರೆ ಸೌಲಭ್ಯಗಳು ಅನುಷ್ಠಾನಗೊಳ್ಳುವುದು ಅನುಮಾನ ಎಂದು ಕಳವಳ ವ್ಯಕ್ತಪಡಿಸಿದರು.
ಬಡತನ ಶಾಶ್ವತ ನಿವಾರಣೆಗೆ ಚಿಂತಿಸಿ: ಹೈ.ಕ. ಪ್ರಾದೇಶಿಕಾಭಿವೃದ್ಧಿ ಮಂಡಳಿ ಕ್ರಿಯಾಶೀಲವಾಗಬೇಕು. ಡಾ. ನಂಜುಂಡಪ್ಪ ವರದಿ ಶಿಫಾರಸಿನಂತೆ ಅನುದಾನ ದೊರೆಯಬೇಕು. ಹೈ.ಕ. ಭಾಗದಲ್ಲಿ ಬದುಕನ್ನರಸಿ ದುಡಿಯಲು ಗುಳೆ ಹೋಗುವವರ ಸಂಖ್ಯೆಗೇನೂ ಕಮ್ಮಿಯಿಲ್ಲ. ಅಂಥವರಿಗೆ ಹೈ.ಕ.ಕ್ಕೆ ದೊರೆತ ವಿಶೇಷ ಸ್ಥಾನಮಾನದಿಂದ ಯಾವುದೇ ಪ್ರಯೋಜನವಾಗಲಿಕ್ಕಿಲ್ಲ ಎಂಬ ಆತಂಕವಿದೆ. ಈ ನಿಟ್ಟಿನಲ್ಲಿ ಅವರಿಗೆ ವಿಶೇಷ ಸ್ಥಾನಮಾನದ ಸೌಲಭ್ಯ ಹೇಗೆ ದೊರಕಿಸಬಹುದೆಂಬ ಬಗ್ಗೆ ತಜ್ಞರ ಚಿಂತನೆ ಅಗತ್ಯ ಎಂದು ಹೇಳಿದರು.
ಜಿಲ್ಲೆಯು ಕೃಷ    ೆ, ತುಂಗಭದ್ರಾ ನದಿಯಿಂದ ನೀರಾವರಿಯಾಗಿದ್ದರೂ ರೈತರಿಗೆ ಸುಖ, ನೆಮ್ಮದಿಯೆಂಬುದಿಲ್ಲ. ಹೊಲದಿಂದ ಬೆಳೆ ಮಾರುಕಟ್ಟೆಗೆ ಬರುವ ವೇಳೆಗೆ ಕುಸಿಯುತ್ತಿರುವ ದರ ರೈತರನ್ನು ಆರ್ಥಿಕ ಸಂಕಷ್ಟದಲ್ಲಿರಿಸಿದೆ. ರೈತ ದೇಶದ ಬೆನ್ನೆಲುಬು, ಹಳ್ಳಿಗಳ ಅಭಿವೃದ್ಧಿಯೇ ನಾಡಿನ ಅಭಿವೃದ್ಧಿ ಎಂದೆಲ್ಲ ಹೇಳುತ್ತಲೇ ರೈತರನ್ನು ಚಿಂತಾಜನಕ ಸ್ಥಿತಿಗೆ ನೂಕುವ ಕಾರ್ಯ ನಡೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಜನಪರ ಸಾಹಿತ್ಯ ಕಣ್ಮರೆ: ವಿದ್ಯುನ್ಮಾನ ಮಾಧ್ಯಮ, ಯಾಂತ್ರೀಕರಣದ ಪ್ರಭಾವದಿಂದಾಗಿ ಜನಪರವಾದ ಜನಪದ ಕಲೆಗಳು, ಜನಪದ ಸಾಹಿತ್ಯ ಕಣ್ಮರೆಯಾಗುತ್ತಿದೆ. ಬದುಕಿಗೆ ಬಲ ನೀಡುವ, ಕಲೆ, ಸಾಹಿತ್ಯ, ಸಿರಿವಂತಿಕೆಯ ಅವಸಾನ ಮನಸ್ಸಿಗೆ ನೋವು ತರುವ ಸಂಗತಿಯಾಗಿದೆ ಎಂದರು.
ಇಂದಿನ ಆಧುನಿಕ ಯುಗದಲ್ಲಿ ಸಾಹಿತ್ಯಕ್ಕೆ ಓದುಗರ ಕೊರತೆಯಿದೆ ಎಂಬ ಕೊರಗಿನ ಮಧ್ಯೆಯೂ ಓದುಗರ ಅಭಿರುಚಿಗೆ ತಕ್ಕಂತೆ ಸಾಹಿತ್ಯದ ರೂಪದಲ್ಲಿ ಬದಲಾವಣೆಗಳಾಗುತ್ತಿವೆ. ಮೊಬೈಲ್, ಅಂತರ್ಜಾಲ, ಲ್ಯಾಪ್‌ಟಾಪ್, ಬ್ಲಾಗ್‌ಗಳು, ಫೇಸ್‌ಬುಕ್ ಮತ್ತಿತರೆ ರೂಪದಲ್ಲಿ ಸಾಹಿತ್ಯದ ಓದುಗರು ಸೃಷ್ಟಿಯಾಗಿದ್ದಾರೆಂದು ಸಂತಸ ವ್ಯಕ್ತಪಡಿಸಿದರು.
ದುರಾಸೆ ತೊರೆಯಿರಿ: ರಾಜಕೀಯ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಭ್ರಷ್ಟಾಚಾರ ಸಮಾಜದಲ್ಲಿ ಆಳವಾಗಿ ಬೇರೂರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಅನಾಚಾರ, ಅತ್ಯಾಚಾರ ಮತ್ತು ಭ್ರಷ್ಟಾಚಾರಗಳು ನಮ್ಮನ್ನು ಆಳುವಂಥ ಸ್ಥಿತಿಯಿದೆ. ಇದೆಲ್ಲದಕ್ಕೆ ನಮ್ಮಲ್ಲಿರುವ ದುರಾಸೆಯೇ ಕಾರಣ ಎಂದು ಅವರು ಎಚ್ಚರಿಸಿದರು.
ಅಣ    ಾ ಹಜಾರೆಯಂಥ ಸಮಾಜ ಪರಿವರ್ತಕರು ನಮಗೆ ಇಂದು ಹೆಚ್ಚು ಅವಶ್ಯ. ಈ ನಿಟ್ಟಿನಲ್ಲಿ ಎಲ್ಲೆಡೆ ಅಣ    ಾ ಹಜಾರೆಯಂಥವರು ಹುಟ್ಟಿಬರಬೇಕಿದೆ ಎಂದ ಅವರು, ಕೇವಲ ಕನ್ನಡ ಕನ್ನಡ ಎನ್ನುವುದಕ್ಕಿಂತ ಕನ್ನಡದ ಉದ್ಧಾರಕ್ಕೆ ಎಲ್ಲರೂ ಒಗ್ಗೂಡಿ ಶ್ರಮಿಸುವುದು ಅವಶ್ಯಕ ಎಂದು ಕರೆ ನೀಡಿದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.