ವಿದ್ಯಾರ್ಥಿಗಳು ಭವಿಷ್ಯದ ರೂವಾರಿಗಳು: ಶಾಶ್ವತಯ್ಯ
ಸಿಂಧನೂರು: ಇಂದಿನ ವಿದ್ಯಾರ್ಥಿಗಳು ದೇಶದ ಭವಿಷ್ಯವನ್ನು ಬರೆಯುವ ರೂವಾರಿಗಳು ಎಂದು ಸರ್ವೋದಯ ವಿದ್ಯಾವರ್ಧಕ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ ಹೇಳಿದರು.
ಶಾಲೆಯ 26ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಶಿಸ್ತಿನಿಂದ ಅಭ್ಯಾಸದ ಕಡೆ ಲಕ್ಷ್ಯ ವಹಿಸಬೇಕು. ಪಾಲಕರ ಆಶೋತ್ತಗಳನ್ನು ಹುಸಿಗೊಳಿಸದೆ ಉತ್ತಮ ಫಲಿತಾಂಶವನ್ನು ತಂದು ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಬೇಕು ಎಂದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಸಂಸ್ಥೆಯ ಮಾಜಿ ಅಧ್ಯಕ್ಷ ಎನ್.ಶಿವನಾಗಪ್ಪ ಮಾತನಾಡಿದರು. ಸದಸ್ಯ ಡಾ. ಎಸ್.ವಿ. ಪಾಟೀಲ್ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿದರು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ.ಮಲ್ಲಪ್ಪನವರ ಭಾವಚಿತ್ರಕ್ಕೆ ಸದಸ್ಯ ಅಮರಪ್ಪ ಮೈಲಾರ ಮಾಲಾರ್ಪಣೆ ಮಾಡಿದರು. ನಗರಸಭೆ ಸದಸ್ಯ ಆಶಾಬೀ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವೀರಭದ್ರಪ್ಪ ಹಟ್ಟಿ, ಖಜಾಂಚಿ ಪ್ರಕಾಶ ಜೈನ್, ಮುಖ್ಯಶಿಕ್ಷಕ ಜಿ.ಎಸ್. ಸಿಂದಗಿಮಠ, ಪ್ರೌಢಶಾಲೆ ಮುಖ್ಯ ಶಿಕ್ಷಕ ಬಿ.ಚಿದಾನಂದಪ್ಪ ಪಾಲ್ಗೊಂಡಿದ್ದರು.
ಇದೇ ವೇಳೆ ಕನ್ನಡ ಶಿಕ್ಷಕ ಮಲ್ಲಿಕಾರ್ಜುನ ಕಾಡ್ಲೂರು, ಇಂಗ್ಲಿಷ್ ಶಿಕ್ಷಕ ತಿಮ್ಮಪ್ಪ ಕೆ. ಅವರನ್ನು ಸನ್ಮಾನಿಸಲಾಯಿತು. ಶ್ರೀಧರ ಹಿರೇಮಠ ಸ್ವಾಗತಿಸಿದರು. ಆರ್.ಜೆ. ಕುಲಕರ್ಣಿ, ಅಮರೇಶ ಕುಪ್ಪಿಗುಡ್ಡ ನಿರೂಪಿಸಿದರು. ವೀರಭದ್ರಪ್ಪ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

