ಪೂರ್ವಭಾವಿ ಸಭೆ
ರಾಯಚೂರು: ನಗರದಲ್ಲಿ ಫೆ.19ರಂದು ಆಯೋಜಿಸಲಾಗುವ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಫೆ.15ರಂದು ಜಿಲ್ಲಾಡಳಿತದಿಂದ ಪೂರ್ವಭಾವಿ ಸಭೆ ಕರೆಯಲಾಗಿದೆ. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಫೆ.15ರಂದು ಸಂಜೆ 4ಕ್ಕೆ ಪೂರ್ವಭಾವಿ ಸಭೆ ನಡೆಯಲಿದ್ದು, ಸಭೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಜಿಲ್ಲಾಡಳಿತ ಮನವಿ ಮಾಡಿದೆ.
ನಾಳೆ ಶಾಲೆ ಉದ್ಘಾಟನೆ
ರಾಯಚೂರು: ತಾಲೂಕಿನ ಬಿಚ್ಚಾಲಿ ಗ್ರಾಮದಲ್ಲಿ ಸಿಸ್ಕೋ ಸಂಸ್ಥೆಯ ಸಮುದಾಯ ಯೋಜನೆಯಡಿ ಹೊಸ ಶಾಲೆಯ ಉದ್ಘಾಟನೆ ಸಮಾರಂಭ ಫೆ.16ರಂದು ಆಯೋಜಿಸಲಾಗಿದೆ. ಗ್ರಾಮದಲ್ಲಿ ಅಂದು ಮಧ್ಯಾಹ್ನ 2ಕ್ಕೆ ಆಯೋಜಿಸಿರುವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಉದ್ಘಾಟನೆ ನೆರವೇರಿಸಲಿದ್ದು, ಗ್ರಾಮೀಣ ಶಾಸಕ ತಿಪ್ಪರಾಜು ಹವಾಲ್ದಾರ್, ನಗರ ಶಾಸಕ ಡಾ. ಶಿವರಾಜ್ ಪಾಟೀಲ್, ಸಿಸ್ಕೋ ಸಂಸ್ಥೆಯ ಅಧ್ಯಕ್ಷ ಡಾ. ಅರವಿಂದ್ ಸೀತಾರಾಮನ್ ಪಾಲ್ಗೊಳ್ಳಲಿದ್ದಾರೆಂದು ಸಿಸ್ಕೋ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಆಕ್ಷೇಪಣೆಗೆ ಆಹ್ವಾನ
ದೇವದುರ್ಗ: ಪಟ್ಟಣದ ಆಸ್ತಿಗಳ ಜಿಐಎಸ್ ಸಮೀಕ್ಷೆ ಕಾರ್ಯ ಮುಗಿದಿದ್ದು, ಆಸ್ತಿಗಳ ಕರಡು ಪ್ರತಿ ಹಾಗೂ ಆಸ್ತಿ ನಮೂನೆಯನ್ನು ವಿತರಿಸಿದ್ದು, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಈಗಾಗಲೇ ಪಟ್ಟಣದ ನಿವಾಸಿಗಳಿಗೆ ಈ ಬಗ್ಗೆ ಮಾಹಿತಿ ವಿತರಿಸಿದ್ದು, ಆಸ್ತಿ ವಿವರಗಳನ್ನು ಖಚಿತಪಡಿಸಿಕೊಂಡು ತಿದ್ದುಪಡಿಗಳಿದ್ದಲ್ಲಿ ಮತ್ತು ಖಾಲಿ ನಿವೇಶನದಾರರು, ಪ್ಲಾಟ್‌ಗಳ ಮಾಲೀಕರು, ಖರೀದಿದಾರರು ಪುರಸಭೆಯಲ್ಲಿ ತಮ್ಮ ದಾಖಲೆಗಳನ್ನು ಪಡೆಯಬಹುದಾಗಿದೆ. ಈ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಫೆ.18ರೊಳಗೆ ಸಲ್ಲಿಸಬೇಕು ಎಂದು ಪುರಸಭೆ ತಿಳಿಸಿದೆ.
ಸ್ನೇಹ ಸಮ್ಮೇಳನ
ಸಿಂಧನೂರು: ಫಲಿತಾಂಶದ ಬೆನ್ನು ಬೀಳದೆ ಆತ್ಮಸ್ಥೈರ್ಯದಿಂದ ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುವಂತೆ ಸರ್ಕಾರಿ ಯುನಾನಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಹಮೀದ್ ಶರೀಫ್ ಸಲಹೆ ನೀಡಿದರು. ನಗರದ ಗಿರಿಜಾ ಮಹಿಳಾ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದರು. ಉಪನ್ಯಾಸಕ ರಾಮಣ್ಣ ಸಿಂಗಾಪುರ, ಮನುಜಮತ ಬಳಗದ ಕಾರ್ಯದರ್ಶಿ ಬಸವರಾಜ ಬಾದರ್ಲಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಬಸವರಾಜ ದೊಡ್ಡಮನೆ ಮಾತನಾಡಿದರು. ವಿದ್ಯಾರ್ಥಿನಿರಾದ ಜೈಬುಲ್ಲಾ, ಮಂಜುಳಾ, ಕಾವೇರಿ, ತ್ರಿವೇಣಿ ಅನಿಸಿಕೆ ವ್ಯಕ್ತಪಡಿಸಿದರು. ಸುನೀತಾ ಪ್ರಾರ್ಥಿಸಿದರು. ಗೀತಾ ಸ್ವಾಗತಿಸಿದರು. ಕಂಠೆಮ್ಮ ವಂದಿಸಿದರು.
ಸಮಸ್ಯೆಗಳ ಬುತ್ತಿ ಬಿಚ್ಚಿಟ್ಟ ವಿದ್ಯಾರ್ಥಿಗಳು
ಸಿಂಧನೂರು: ನಗರದ ರಾಯಚೂರು ರಸ್ತೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ನಿಲಯಕ್ಕೆ ಶಾಸಕ ಹಂಪನಗೌಡ ಬಾದರ್ಲಿ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದರು.
ವರ್ಷ ಮುಗಿಯುತ್ತಾ ಬಂದರೂ ವಿಜ್ಞಾನ ಶಿಕ್ಷಕರಿಲ್ಲ, ಟ್ರಂಕ್‌ಗಳಿಲ್ಲ, ಕಂಪ್ಯೂಟರ್ ಇಲ್ಲ, ಶೌಚಾಲಯಗಳ ಕೊರತೆ, ಸೊಳ್ಳೆಗಳ ಕಾಟ ಸೇರಿದಂತೆ ಹತ್ತಾರು ಸಮಸ್ಯೆಗಳನ್ನು ವಿದ್ಯಾರ್ಥಿಗಳು ಹೇಳಿಕೊಂಡರು.
ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳೊಂದಿಗೆ ಮಾತನಾಡಿದ ಶಾಸಕರು, ಹಾಸ್ಟೆಲ್ ತುರ್ವಿಹಾಳದಿಂದ ಸಿಂಧನೂರಿಗೆ ಸ್ಥಳಾಂತರಗೊಂಡು ಮೂರ್ನಾಲ್ಕು ವರ್ಷಗಳಾದರೂ ಒಂದು ಕಟ್ಟಡ ನೋಡದಿದ್ದರೆ ಹೇಗೆ ಎಂದು ಪ್ರಶ್ನಿಸಿದರು. ತಕ್ಷಣ ಮೂಲ ಸಮಸ್ಯೆಗಳ ನಿವಾರಣೆಗೆ ಬೇಕಾದ ಸಲಕರಣೆಗಳ ಅಂದಾಜು ಪತ್ರಿಕೆ ತಯಾರಿಸಿ ಕೊಡುವಂತೆ ಸೂಚಿಸಿದರು. ಶಾಲಾ ಮುಖ್ಯೋಪಾಧ್ಯಯರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

