ಸಮ್ಮೇಳನ ಯಶಸ್ವಿಗೆ ಸಹಕರಿಸಿ: ಜಾಗೀರದಾರ
ಕ.ಪ್ರ. ವಾರ್ತೆ ಸಿಂಧನೂರು ಫೆ.17
ನಗರದ ಸತ್ಯಾಗಾರ್ಡ್‌ನ್‌ನಲ್ಲಿ ಫೆ. 22ರಂದು ಜರುಗಲಿರುವ ತಾಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಎಲ್ಲರೂ ಜವಾಬ್ದಾರಿಯಿಂದ ಸ್ಪಂದಿಸಿ ಸಹಕಾರ ನೀಡಬೇಕೆಂದು ನಗರಸಭೆ ಅಧ್ಯಕ್ಷ ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಸೈಯದ್ ಜಾಫರ ಅಲಿ ಜಾಗೀರದಾರ ತಿಳಿಸಿದರು.
ನಗರದ ನಗರಸಭಾ ಸಭಾಭವನದಲ್ಲಿ ಸಮ್ಮೇಳನದ ಲಾಂಛನ ಅನಾವರಣಗೊಳಿಸಿ ಮಾತನಾಡಿ, 10 ವರ್ಷಗಳ ನಂತರದಲ್ಲಿ ಸಿಂಧನೂರು ನಗರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದ್ದು ಅದಕ್ಕಾಗಿ ಎಲ್ಲ ಉಪ ಸಮಿತಿಯ ಪದಾಧಿಕಾರಿಗಳು ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಿ ಸಮ್ಮೇಳನವನ್ನು ಅಚ್ಚುಕಟ್ಟಾಗಿ ಜರುಗುವಂತೆ ಪ್ರಯತ್ನಿಸಬೇಕೆಂದರು.
ಸಹಕಾರ: ಲಾಂಛನ ವಿನ್ಯಾಸಗೊಳಿಸಿದ ಕಸಾಪ ಗೌರವ ಕಾರ್ಯದರ್ಶಿ ವೀರೇಶ ಗೋನವಾರ ಲಾಂಛನದಲ್ಲಿ ಸಿಂಧನೂರು ತಾಲೂಕಿನ ಮಹತ್ವದ ಸ್ಥಳಗಳ ವಿವರವನ್ನು ತಿಳಿಸಿದರು. ಸಭೆಯಲ್ಲಿ ವಿವಿಧ ಉಪಸಮಿತಿಯ ಮುಖಂಡರು ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಿಳಿಸಿ ಸಮ್ಮೇಳನದ ಯಶಸ್ವಿಗೆ ಸಹಕರಿಸುವುದಾಗಿ ತಿಳಿಸಿದರು. ಸಮ್ಮೇಳನದ ಸಿದ್ಧತೆ ಕುರಿತು ಕಸಾಪ ತಾಲೂಕಾಧ್ಯಕ್ಷೆ ರಮಾದೇವಿ ಶಂಭೋಜಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಎಸ್.ದೇವೇಂದ್ರಗೌಡ ಮಾತನಾಡಿದರು.
ಸ್ವರ್ಣ ಜಯಂತಿ ಶಹರ್ ರೋಜಗಾರ್ ಯೋಜನೆಯ ಅಧ್ಯಕ್ಷೆ ಶ್ರೀದೇವಿ, ಉಪಾಧ್ಯಕ್ಷೆ ಅನುಸೂಯಾ, ನಗರಸಭೆ ಸದಸ್ಯರಾದ ಪ್ರಭುರಾಜ, ಮಂಜುಳಾ ಪಾಟೀಲ್, ವೆಂಕಣ್ಣಾಚಾರ ಜೋಶಿ, ಶಿವುಕುಮಾರ ಜವಳಿ, ಶಿವಬಸನಗೌಡ, ಬಸವರಾಜ ಅಂಗಡಿ, ಎಚ್.ಧರಯ್ಯ ಸ್ವಾಮಿ, ರಮೇಶ ಸಜ್ಜನ, ವೀರೇಶ ಗೋನವಾರ್, ಶ್ರೀಶೈಲ್ ಕೌದಿ, ಬೀರಪ್ಪ ಶಂಭೋಜಿ, ಬಸವರಾಜ್ ಎಚ್, ಪಂಪಯ್ಯಸ್ವಾಮಿ ಸಾಲಿಮಠ, ಡಿ.ಎಚ್. ಕಂಬಳಿ, ನಾಗರತ್ನ ಬಂಗಾರಶೆಟ್ಟಿ, ಶಿವಲೀಲಾ ಹಿರೇಮಠ, ಶಿವಪುತ್ರಪ್ಪ, ಬಸವರಾಜ್ ಗಸ್ತಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

