ರಾಯಚೂರು

ಯುವಪೀಳಿಗೆಗೆ ಶಿವಾಜಿ ಮಹಾರಾಜ ಆದರ್ಶಪ್ರಾಯ

Published On :

ಕ.ಪ್ರ. ವಾರ್ತೆ ,  ರಾಯಚೂರು ,  ಫೆ.19
ಛತ್ರಪತಿ ಶಿವಾಜಿ ಮಹಾರಾಜರಲ್ಲಿದ್ದ ಆದರ್ಶ, ದೇಶಪ್ರೇಮ, ಮಾತೃಭಕ್ತಿ ಇಂದಿನ ಯುವಪೀಳಿಗೆಗೆ ಆದರ್ಶಪ್ರಾಯವಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ವಿಜಯಾ ಜ್ಯೋತ್ಸ್ನಾ ಹೇಳಿದರು.
ನಗರದ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಯಚೂರು ವತಿಯಿಂದ ಬುಧವಾರ ಏರ್ಪಡಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಹಾನ್ ಸಾಧನೆ: ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ್ದ ಭೀಮೋಜಿರಾವ್ ಜಗತಾಪ್ ಮಾತನಾಡಿ, ಇಂದು ಹಿಂದೂ ಸಾಮ್ರಾಜ್ಯ ಉಳಿದಿದ್ದರೆ ಅದು ಶಿವಾಜಿ ಮಹಾರಾಜರಿಂದಲೇ ಎಂದು ಹೇಳಬಹುದು. ತಾಯಿ ಜೀಜಾ ಮಾತೆಯವರ ಕೃಪೆಯಿಂದ ಶಿವಾಜಿ ಅವರು ಅಂಥ ಮಹಾನ್ ಸಾಧನೆಗೈಯಲು ಸಾಧ್ಯವಾಯಿತು ಎಂದರು.
ಶಿವಾಜಿ ಮಹಾರಾಜರು ತಮ್ಮ 16ನೇ ವಯಸ್ಸಿನಲ್ಲಿಯೇ ಕುದುರೆ ಸವಾರಿ ಮತ್ತಿತರೆ ವಿದ್ಯೆಗಳನ್ನು ಕಲಿತು 19ನೇ ವಯಸ್ಸಿನಲ್ಲಿ ಕೋಟೆ ವಶಪಡಿಸಿಕೊಳ್ಳುವ ಕಲೆ ಕರಗತ ಮಾಡಿಕೊಂಡಿದ್ದರು. ದೇವಿ ಅಂಬಾಭವಾನಿ, ಗುರು ಸಮರ್ಥ ರಾಮದಾಸ ಹಾಗೂ ತಾಯಿ ಜೀಜಾಬಾಯಿಯವರ ನೆನೆದು ಅವರು ಯುದ್ಧಗಳಲ್ಲಿ ಯಶಸ್ಸು ಕಂಡರೆಂದು ಹೇಳಿದರು.
ಆದರ್ಶ, ತತ್ವಗಳನ್ನು ಪಾಲಿಸಿ: ಮೊಘಲರಿಂದ ಹಿಂದೂ ಸಾಮಾಜ್ಯವನ್ನು ರಕ್ಷಿಸಿ ಹಿಂದೂ ಸಾಮ್ರಾಜ್ಯದ ಕನಸು ಸಾಕಾರಗೊಳಿಸಿದರು. ಶಿವಾಜಿ ಮಹಾರಾಜರಂತೆಯೇ ಇಂದಿನ ಯುವಪೀಳಿಗೆ ಸಾಧನೆ ಮಾಡಬೇಕು. ಶಿವಾಜಿ ಮಹಾರಾಜರ ಆದರ್ಶ, ತತ್ವಗಳನ್ನು ಪಾಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷೆ ಪದ್ಮಾ ಜಿಂದಪ್ಪ, ಸಹಾಯಕ ಆಯುಕ್ತ ಮಾರುತಿ, ತಹಸೀಲ್ದಾರ್ ಅಶೋಕ ಜಾಹಗೀರದಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಸೀತಾಮಾತಾ, ಆನಂದರಾವ, ಮೋಹನ, ಹನುಮಂತಪ್ಪ, ತುಳಜಾರಾಮ, ವಿನಯಕುಮಾರ, ಪೊಲೀಸ್ ಅಧಿಕಾರಿ ನದಾಫ್, ಭೀಮರಾವ ಜಾಧವ್ ಸೇರಿ ಅನೇಕರಿದ್ದರು.
ಮೆರವಣಿಗೆ: ಇದಕ್ಕೂ ಮುನ್ನ ಬೆಳಗ್ಗೆ 8.30ಕ್ಕೆ ನಗರದ ಅಂಬಾಭವಾನಿ ದೇವಾಲಯದಿಂದ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆ ಆಯೋಜಿಸಲಾಗಿತ್ತು. ನಗರದ ಪ್ರಮುಖ ರಸ್ತೆಯ ಮೂಲಕ ಮೆರವಣಿಗೆ ಸಾಗಿತು. ಮೆರವಣಿಗೆಯಲ್ಲಿ ವಿವಿದ ಜಾನಪದ ಕಲಾತಂಡಗಳು ಪಾಲ್ಗೊಂಡಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.