ರಾಯಚೂರು

ಚಿಗುರು ಯೋಜನೆ

Published On :

ಗುಲ್ಬರ್ಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಚಿಗುರು ಯೋಜನೆಯಡಿ ರಾಚೋಟೇಶ್ವರ ಸಂಸ್ಥಾನ ಮಠದ ಭೋವಿಗಲ್ಲಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಾಚೋಟೇಶ್ವರ ಸಂಸ್ಥಾನ ಮಠ ಚಂದ್ರಗುಂಡ ಶಿವಾಚಾರ್ಯ ಸಾನ್ನಿಧ್ಯ ವಹಿಸಿದ್ದರು. ಅರ್ಥಶಾಸ್ತ್ರ ಅಧ್ಯಯನ ವಿಭಾಗದ ವಿ.ವಿ ರವಿ, ಡಾ. ವಾಸುದೇವ ಸೇಡಂ ಅಧ್ಯಕ್ಷತೆ ವಹಿಸಿದ್ದರು. ಸುರೇಶ ಆರ್. ಸಜ್ಜನ್, ಶರಣಪ್ಪ ಎಲ್. ತೋರಣಕರ, ವಿ.ಎಸ್. ನಾಯ್ಕಲ್, ಎಸ್.ಎಸ್. ಮಳ್ಳಿ, ನಾಗರಾಜ ಎಸ್. ಜೋಗ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಚಿತ್ರಕಲಾ ಪ್ರದರ್ಶನ
ಗುಲ್ಬರ್ಗ: ನಗರದ ಮಹಾತ್ಮ ಬಸವೇಶ್ವರ ಕಾಲೋನಿಯಲ್ಲಿರುವ ವ್ಯಕ್ತಿತ್ವ ವಿಕಾಸ ಎಜುಕೇಶನ್ ಸೊಸೈಟಿಯ ಕನ್ನಡ ಕಾನ್ವೆಂಟ್ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿಕಾಸ ಆಂಗ್ಲ ಮಾಧ್ಯಮ ಶಾಲೆ ಹಾಗೂ ವಿಶಾಲ ಪದವಿ ಪೂರ್ವ ಕಾಲೇಜಿನ ಸಂಸ್ಥಾಪನಾ ದಿನಾಚರಣೆ ಹಾಗೂ ಶಾಲಾ ವಾರ್ಷಿಕೋತ್ಸವ ನಿಮಿತ್ತ ಮಕ್ಕಳ ಚಿತ್ರಕಲಾ ಪ್ರದರ್ಶನ ಏರ್ಪಡಿಸಲಾಗಿತ್ತು. ಚಿತ್ರಕಲಾ ಪರವೀಕ್ಷಕ ದೇವೇಂದ್ರ ತೋಟನಳ್ಳಿ ಪ್ರದರ್ಶನ ಉದ್ಘಾಟಿಸಿದರು. ಶಶಿಕಲಾ ಜೆ. ಪಾಟೀಲ್, ಭಾರತಿ ಹುಡಗಿಕರ, ಜಯರಾಜ ಬಿ. ಪಾಟೀಲ್ ಓಕಳಿ, ಕಮಲಾ ಬಿ. ಪಾಟೀಲ್, ಸಿ.ಸಿ. ಪಾಟೀಲ್ ಓಕಳಿ, ಶಶಿಕಲಾ ಬಿ. ಪಾಟೀಲ್, ಕವಿತಾ ಜೆ ಪಾಟೀಲ್ ಇನ್ನಿತರರಿದ್ದರು.
ವಾರ್ಷಿಕೋತ್ಸವ
ಗುಲ್ಬರ್ಗ: ಜಿಡಗಾದ ಸಿದ್ದಶ್ರೀ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಪ್ರಥಮ ವಾರ್ಷಿಕೋತ್ಸವನ್ನು ಜಿಪಂ ಸದಸ್ಯ ಮೀನಾಕ್ಷಿ ಪಾಟೀಲ್ ಉದ್ಘಾಟಿಸಿ ಚಾಲನೆ ನೀಡಿದರು. ಸಭೆಯಲ್ಲಿ ಸಂಸ್ಥಾಪಕ ಅಧ್ಯಕ್ಷ ಡಾ. ಮುರುಘರಾಜೇಂದ್ರ ಸ್ವಾಮಿ, ಅಣ್ಣಾರಾವ್ ಪಾಟೀಲ್ ಕೋರಳ್ಳಿ, ಬಸವರಾಜ ಸಿ. ಮಠಪತಿ, ಸಿದ್ದರಾಮ ಪಾಟೀಲ್, ಸಿ.ಎ. ನಾಡಗೌಡರ  ಇದ್ದರು.
ಪ್ರತಿಕೃತಿ ದಹನ
ಗುಲ್ಬರ್ಗ: ಮಾಜಿ ಪ್ರಧಾನಿ ದಿ. ರಾಜೀವಗಾಂಧಿಯವರನ್ನು ಹತ್ಯೆ ಮಾಡಿದ ಹಂತಕರನ್ನು ತಮಿಳುನಾಡು ಸರ್ಕಾರ ಬಿಡುಗಡೆಗೊಳಿಸಲು ಕ್ರಮ ಕೈಗೊಂಡಿರುವುದು ಜಿಲ್ಲಾ ಯುವ ಕಾಂಗ್ರೆಸ್ ಘಟಕದ ವತಿಯಿಂದ ಪ್ರತಿಭಟನೆ ನಡೆಸಿ, ಜಯಲಲಿತಾರ ಪ್ರತಿಕೃತಿಯನ್ನು ದಹನ ಮಾಡಿ ಪ್ರತಿಭಟನೆ ಮಾಡಲಾಯತು. ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಗುರುರಾಜ ಕುಲ್ಕರ್ಣಿ, ಪ್ರಧಾನ ಕಾರ್ಯದರ್ಶಿ ರೋಷನ್ ಖೇಡೇಕರ್, ಚಿದಾನಂದ ಹನಗುಂಟಿ, ಬಂಡೆಪ್ಪ ಲೆಂಗಟಿ, ಸಿದ್ಧಾರ್ಥ ಕೋರವಾರ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಬೀಳ್ಕೊಡುಗೆ
ಗುಲ್ಬರ್ಗ: ವಸತಿ ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಬಾಲಕೀಯರ ಮಹಾವಿದ್ಯಾಲಯದಲ್ಲಿ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿನಿಯರಿಗೆ ಬೀಳ್ಕೊಡುವ ಸಮಾರಂಭ ಆಚರಿಸಲಾಯಿತು.
ಸಾಂಸ್ಕೃತಿಕ ಮೇಳ: ನಾಳೆ ಆಯ್ಕೆ ಪ್ರಕ್ರಿಯೆ
ರಾಯಚೂರು: 2013-14ನೇ ಸಾಲಿನ ಸಾಂಸ್ಕೃತಿಕ ಯುವ ಮೇಳಕ್ಕಾಗಿ ಜಿಲ್ಲೆಯಲ್ಲಿ ಯುವಕ ಯುವತಿಯರ ಆಯ್ಕೆ ಪ್ರಕ್ರಿಯೆಯನ್ನು ಫೆ.26ರಂದು ನಡೆಸಲಾಗುತ್ತದೆ.
ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯು, ಅಂದು ನಗರದ ಮಹಾತ್ಮಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.
 ಯುವಕ, ಯುವತಿಯರಿಗಾಗಿ ಭಾವಗೀತೆ, ಜಾನಪದ ಗೀತೆ, ಕೋಲಾಟ, ಭಜನೆ, ರಂಗಗೀತೆ, ಸೋಬಾನೆಪದ, ಏಕಪಾತ್ರಾಭಿನಯ, ಜಾನಪದ ನೃತ್ಯ, ಗೀಗೀ ಪದ, ಲಾವಣಿ, ಬೀಸುವ ಕಲ್ಲಿನ ಪದ, ಡೊಳ್ಳು ಕುಣಿತ, ಸಣ್ಣಾಟ, ದೊಡ್ಡಾಟ, ವೀರಗಾಸೆ, ಮತ್ತು ಚರ್ಮವಾದ್ಯಗಳಲ್ಲಿ ಪ್ರತಿಭೆಗಳನ್ನು ಆಯ್ಕೆ ನಡೆಸಲಾಗುವುದು.
ಜಿಲ್ಲೆಯ ಯುವಕ ಯುವತಿಯರು ಈ ಆಯ್ಕೆಯಲ್ಲಿ ಭಾಗವಹಿಸಬಹುದಾಗಿದೆ.
 15 ರಿಂದ 35ವರ್ಷ ವಯೋವಾನದ ವಿದ್ಯಾರ್ಥಿಗಳು ಭಾಗವಹಿಸಬಹುದು. ಆಯ್ಕೆಯಾದವರು ವಿಭಾಗ ಮಟ್ಟಕ್ಕೆ ಅರ್ಹರಾಗಿರುತ್ತಾರೆ. ಯುವಕ ಯುವತಿ, ವಿದ್ಯಾರ್ಥಿಗಳ ಸಂಘಗಳ ನೋಂದಣಿ ಪ್ರಮಾಣ ಪತ್ರದ ಪ್ರತಿ, ಜನ್ಮ ದಾಖಲೆ ಪ್ರತಿಗಳೊಂದಿಗೆ ಅಗತ್ಯ ಪರಿಕರಗಳೊಮದಿಗೆ ಆಯ್ಕೆಗೆ ಸ್ವಂತ ಖರ್ಚಿನಲ್ಲಿ ಆಗಮಿಸಬೇಕು ಎಂದು ಇಲಾಖೆ ತಿಳಿಸಿದೆ.
ನಾಳೆ ಪ್ರೌಢಶಾಲಾ ಮುಖ್ಯ ಗುರುಗಳಿಗೆ ತರಬೇತಿ
ರಾಯಚೂರು: ಜಿಲ್ಲೆಯ ಸಿಂಧನೂರು ನಗರದಲ್ಲಿ ಫೆ. 26ರಂದು ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಗಳ ಎಲ್ಲ ಪ್ರೌಢಶಾಲಾ ಮುಖ್ಯಗುರುಗಳಿಗೆ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ.
ಅಂದು ಸಿಂಧನೂರಿನ ಜೈನ್ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 9.30ರಿಂದ ಸಂಜೆಯ 5.30ರವರೆಗೆ ಹಣಕಾಸು ನಿರ್ವಹಣೆ ಮತ್ತು ಗಣಕೀಕೃತ ಆಡಳಿತ ತರಬೇತಿ ಹಾಗೂ ನವೀನ ಶಾಲಾ ಸಂಕೀರ್ಣದ ತಂತ್ರಗಾರಿಕೆ ಎಂಬ ವಿಷಯದ ಕುರಿತು ಶೈಕ್ಷಣಿಕ ಕಾರ್ಯಾಗಾರ ಆಯೋಜಿಸಲಾಗಿದೆ. ಕಾರ್ಯಾಗಾರದಲ್ಲಿ ಬೆಂಗಳೂರಿನ ಮುಖ್ಯ ಸಂಯೋಜಕರು, ಪಠ್ಯಕ್ರಮ ಸಮಿತಿಯ ಜಿ.ಎಸ್. ಮುಂಡಂಬಡಿತಾಯ ಹಾಗೂ ಬೆಂಗಳೂರಿನ ಜಿಲ್ಲಾ ತರಬೇತಿ ಕೇಂದ್ರದ ನಿವೃತ್ತ ಪ್ರಾಚಾರ್ಯ ನಸೀರುದ್ದೀನ್ ತರಬೇತಿ ನೀಡಲಿದ್ದಾರೆ. ಕಾರ್ಯಾಗಾರದಲ್ಲಿ ಭಾಗವಹಿಸುವವರಿಗೆ ಶಿಕ್ಷಣ ಇಲಾಖೆಯು ಅನ್ಯಕಾರ್ಯನಿಮಿತ್ತ ಸೌಲಭ್ಯ ಒದಗಿಸಿದೆ. ಮುಖ್ಯ ಗುರುಗಳು ಕಾರ್ಯಾಗಾರದಲ್ಲಿ ತಪ್ಪದೇ ಪಾಲ್ಗೊಳ್ಳಲು  ಕೋರಲಾಗಿದೆ.
ಪೀಡೆ ನಿರ್ವಹಣೆ: ಕ್ಷೇತ್ರೋತ್ಸವ ಯಶಸ್ವಿ
ರಾಯಚೂರು: ತಾಲೂಕಿನ ಸುಂಕೇಶ್ವರಾಳ ಗ್ರಾಮದಲ್ಲಿ ರಾಯಚೂರು ಕೃಷಿ ವಿವಿ ಮತ್ತು ರಾಷ್ಟ್ರೀಯ ಸಮಗ್ರ ಪೀಡೆ ನಿರ್ವಹಣೆ ಕೇಂದ್ರ ನವದೆಹಲಿ ವತಿಯಿಂದ ಈಚೆಗೆ ಮೆಣಸಿನಕಾಯಿ ಬೆಳೆಯಲ್ಲಿ ಸಮಗ್ರ ಪೀಡೆ ನಿರ್ವಹಣೆ ಕುರಿತು ಕ್ಷೇತ್ರೋತ್ಸವ ಆಯೋಜಿಸಲಾಗಿತ್ತು.ಮೆಣಶಿನಕಾಯಿಗೆ ಬರುವ ರೋಗಗಳ ಹಾಗೂ ಅವುಗಳ ನಿರ್ವಹಣೆ ಬಗ್ಗೆ ಹಿರಿಯ ವಿಜ್ಞಾನಿ ಡಾ.ಎಂ.ಎನ್. ಭಟ್, ಡಾ.ಎಂ.ಕೆ. ನಾಯ್ಕ ರೈತರಿಗೆ ಮಾಹಿತಿ ನೀಡಿದರು. ಡೀನ್ ಡಾ. ನಾಗನಗೌಡ,ಡಾ. ಶೇಖರಗೌಡ ಪಾಟೀಲ್,  ಡಾ. ಅರುಣಕುಮಾರ, ಡಾ.ವೈ.ಎಸ್. ಅಮರೇಶ್, ಡಾ.ಅಶ್ವತ ನಾರಾಯಣ ಸೇರಿ ಅನೇಕರಿದ್ದರು.
ಹೊರಗುತ್ತಿಗೆ: ಮಾಹಿತಿಗೆ ಸೂಚನೆ
ರಾಯಚೂರು: ಜಿಲ್ಲಾ ಪಂಚಾಯಿತಿ ವತಿಯಿಂದ ವಿವಿಧ ಇಲಾಖೆಗಳಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಮಾಹಿತಿಯನ್ನು ಒದಗಿಸಲು ಜಿಪಂ ಸೂಚಿಸಿದೆ. 2012-13ನೇ ಸಾಲಿನಿಂದ ಈಚೆಗೆ ಹೊರಗುತ್ತಿದೆ ಆಧಾರದಲ್ಲಿ ಜಿಪಂ ಅಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಜಿಪಂ ಗೆ ಖುದ್ದಾಗಿ ಸಲ್ಲಿಸಲು ಜಿಪಂ ಸಿಇಒ ಕಚೇರಿ ತಿಳಿಸಿದೆ.
ಅಕ್ರಮ ಸೇಂದಿ: ಒಬ್ಬನ ಬಂಧನ
ರಾಯಚೂರು: ತಾಲೂಕಿನ ಬುಳ್ಳಾಪೂರ ಗ್ರಾಮದಲ್ಲಿ ಅಕ್ರಮವಾಗಿ ರಾಸಾಯನಿಕ ಮಿಶ್ರಿತ ಸೇಂದಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತನನ್ನು ನರಸಿಂಹ ಎಂದು ಗುರ್ತಿಸಲಾಗಿದೆ. ಈತ ಗ್ರಾಮದ ತನ್ನ ಮನೆಯ ಮುಂದೆ ಅಕ್ರಮವಾಗಿ ಸಿಎಚ್ ಪೌಡರ್‌ನಿಂದ ತಯಾರಿಸಿದ ಸೇಂದಿ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ಮಾಡಿದ ಪೊಲೀಸರು ಆರೋಪಿಯನ್ನು ಬಂಧಿಸಿ, ಅವನಿಂದ 30 ಲೀಟರ್ ಹೆಂಡ ಮತ್ತು ನಗದು ರು. 120 ಜಪ್ತಿ ಮಾಡಿದ್ದಾರೆ. ಇಡಪನೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಪದಾಧಿಕಾರಿಗಳ ಆಯ್ಕೆ
ಮಸ್ಕಿ: ಪಟ್ಟಣದ ಗೂಡ್ಶಾವಲಿ ಖಾದ್ರಿ ಆಲಂಗಿರಿ ಬಾಷಾ ದರ್ಗಾದ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳನ್ನು ನೇಮಿಸಲಾಗಿದೆ.  ಸಮಿತಿಗೆ ಅಧ್ಯಕ್ಷರಾಗಿ ಎಂ.ಡಿ. ಅಬ್ದುಲ್ ಸಲಿಂ ಮುದಗಲ್, ಉಪಾಧ್ಯಕ್ಷರಾಗಿ ಹುಸೇನ್ ಮುನ್ಸಿಸಾಬ್, ಕಾರ್ಯದರ್ಶಿಯಾಗಿ ಫಿರೋಜ್ ಅಹ್ಮದ್, ಸಹಕಾರ್ಯದರ್ಶಿಯಾಗಿ ಅನ್ವರ್ ಪಾಷಾ, ಖಜಾಂಚಿಯಾಗಿ ಇಬ್ರಾಹಿಂ ಸಾಬ್, ಸದಸ್ಯರಾಗಿ ಇಷಾರ್ ಪಾಷಾ, ಫಯಾಜ್ ಅಹ್ಮದ್, ಇರ್ಫಾನ್, ಗುಲಾಮುದ್ದೀನ್ ನೇಮಕಗೊಂಡಿದ್ದಾರೆಂದು ಸಮಿತಿ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.