ರಾಯಚೂರು

ಕಾನೂನು ಅರಿವು ಪಡೆದುಕೊಳ್ಳಿ: ನ್ಯಾ. ಭಾರತಿ

Published On :

ಸಿಂಧನೂರು: ದೈನಂದಿನ ಜೀವನದಲ್ಲಿ ಎದುರಾಗುವ ತೊಡಕುಗಳನ್ನು ಪರಿಹರಿಸಿಕೊಳ್ಳಲು ಕಾನೂನು ಅರಿವು ಪಡೆದುಕೊಳ್ಳುವಂತೆ ಪ್ರಧಾನ ಸಿವಿಲ್ ನ್ಯಾಯಾಧೀಶೆ ಭಾರತಿ.ಎಸ್. ರಾಯಣ್ಣವರ್ ಸಲಹೆ ನೀಡಿದರು. ಅವರು ತಾಲೂಕಿನ ಮಲ್ಕಾಪುರ ಗ್ರಾಮದಲ್ಲಿ ಕನಕದಾಸ ಪ.ಪೂ. ಕಾಲೇಜ್ ಎನ್‌ಎಸ್‌ಎಸ್ ಘಟಕದ ವಿಶೇಷ ಶಿಬಿರದಲ್ಲಿ ಮಹಿಳೆ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಕೆ. ಭೀಮನಗೌಡ, ಸರ್ಕಾರಿ ವಕೀಲ ಶೇಖರಪ್ಪ ಶಾಲಿಗನೂರು, ಉಪನ್ಯಾಸಕ ಶೇಕ್ಷಾವಲಿ, ವಕೀಲರಾದ ಜಾನ್ಸಿ, ಪ್ರಹ್ಲಾದ ಗುಡಿ ವಕೀಲರು ಮಹಿಳಾ ಮತ್ತು ಕಾನೂನು ಕುರಿತು ಉಪನ್ಯಾಸ ಮಂಡಿಸಿದರು. ಶಿಕ್ಷಕರಾದ ಎಂ. ಶಿವಯ್ಯ, ಅಮಾತೆಪ್ಪ ಮೇಟಿ ಇದ್ದರು. ನಾಗಪ್ಪ ಸ್ವಾಗತಿಸಿದರು. ಶರಣಮ್ಮ ನಿರೂಪಿಸಿದರು. ನಾಗರಾಜ ವಂದಿಸಿದರು.
ಕನ್ನಡಾಭಿಮಾನಕ್ಕೆ ಕಾವ್ಯ ರಸಗ್ರಹಣ ಸಹಕಾರಿ: ಬಿಇಒ
ಲಿಂಗಸ್ಗೂರು: ನಾಡಿನ ವಿದ್ಯಾರ್ಥಿಗಳಲ್ಲಿ ಕನ್ನಡಾಭಿಮಾನ ಬೆಳೆಯಲು ಕಾವ್ಯ ರಸಗ್ರಹಣ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಗೌಡ ಪಾಟೀಲ್ ಹೇಳಿದರು. ತಾಲೂಕಿನ ಯರಡೋಣ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಆಯೋಜಿಸಿದ್ದ ಕಾವ್ಯ ರಸಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ, ಕನ್ನಡ ಸಾಹಿತ್ಯದ ಜೊತೆಗೆ ಕವನ ಸಂಕಲನದ ಅಭಿರುಚಿ, ಕನ್ನಡ ಭಾಷೆ ಬಗ್ಗೆ ಹೆಚ್ಚಿನ ಜ್ಞಾನ ಹೊಂದಲು ಇಂತಹ ಕಾರ್ಯಕ್ರಮಗಳು ಅನುಕೂಲವಾಗಲಿವೆ ಎಂದರು. ಇದೆ ವೇಳೆ ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ತುರವಿಹಾಳ ಚಂದ್ರು, ಕರ್ನಾಟಕ ಸಾಹಿತ್ಯ ಅಕಾಡೆಮಿ ಸಿ.ಎಚ್.ಭಾಗ್ಯ, ಶಾಲಾ ಮುಖ್ಯಶಿಕ್ಷಕಿ ಎಂ. ಮಂಜುಳಾ, ಅಕಾಡೆಮಿಯ ಹರೀಶ್, ಶಿಕ್ಷಕರಾದ ಮರಿಯಪ್ಪ, ಪರಮಣ್ಣ, ಸುಮಂಗಲಾ ಇದ್ದರು.
ಪದಾಧಿಕಾರಿಗಳು
ಸಿಂಧನೂರು: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಸಿಂಧನೂರು ಘಟಕ ಯುವ ಮೋರ್ಚಾ ಸಂಚಾಲಕರಾಗಿ ಮುನೀರ್ ಅಹ್ಮದ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಇತ್ತೀಚೆಗೆ ತಾಲೂಕು ಅಧ್ಯಕ್ಷ ಸೈಯದ್ ರಸೂಲ್ ಮುಲ್ಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು. ಉಪ ಸಂಚಾಲಕರಾಗಿ ಸೈಯ್ಯದ್ ಸಮದಾನಿ, ಕಾರ್ಯದರ್ಶಿ ಬಿ.ನಜೀರ್ ಅಹಮದ್, ಜಂಟಿ ಕಾರ್ಯದರ್ಶಿಯಾಗಿ ಶೇಖ್ ಕಬೀರ್ ಎತ್ಮಾರಿ ಆಯ್ಕೆಯಾಗಿದ್ದಾರೆ ಎಂದು ವೆಲ್ಫೇರ್ ಪಾರ್ಟಿಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಅಲಿ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.