ರಾಯಚೂರು

ಒಂದು ದೇಶ, ಒಂದು ಗ್ರಿಡ್ ಯೋಜನೆಗೆ ಚಾಲನೆ

Published On :

ರಾಯಚೂರು: 'ಒಂದು ದೇಶ, ಒಂದು ಗ್ರಿಡ್‌'ನ ಅಂಗವಾಗಿ ದಕ್ಷಿಣದ ರಾಜ್ಯಗಳನ್ನು ಉತ್ತರದ ಪವರ್ ಗ್ರಿಡ್‌ನೊಂದಿಗೆ ಸಂಪರ್ಕ ಕಲ್ಪಿಸುವ ವ್ಯವಸ್ಥೆಗೆ ಮಂಗಳವಾರ ಚಾಲನೆ ನೀಡಲಾಗಿದೆ. 765/400 ಕೆ.ವಿ. ರಾಯಚೂರು- ಸೋಲಾಪುರ ಮಧ್ಯದ ವಿದ್ಯುತ್ ಮಾರ್ಗದಲ್ಲಿ ಪ್ರಾಯೋಗಿಕ ವಿದ್ಯುತ್ ಪ್ರವಹಿಸುವ ಕಾರ್ಯ ಆರಂಭವಾಗಿದೆ. ನಗರದ ಹೊರವಲಯದ ಅಸ್ಕಿಹಾಳ ಬಳಿಯಿರುವ ಕೇಂದ್ರದ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾದ 765/400 ಕೆ.ವಿ. ವಿದ್ಯುತ್ ಉಪ ಕೇಂದ್ರದ ಪ್ರಾಜೆಕ್ಟ್ ನಿರ್ದೇಶಕ ಐ.ಎಸ್. ಝಾ ಅವರು ವಿದ್ಯುತ್ ಪ್ರವಹಿಸುವ ಪ್ರಕ್ರಿಯೆಗೆ ಚಾಲನೆ ನೀಡಿದರು. ಈ ವೇಳೆ ಕಾರ್ಪೊರೇಷನ್‌ನ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ದೇಶದ ಉತ್ತರ ಮತ್ತು ದಕ್ಷಿಣ ರಾಜ್ಯಗಳ ವಿದ್ಯುತ್ ಸಾಗಣೆ ಮಾರ್ಗಕ್ಕೆ ಸಂಪರ್ಕ ಕೊಂಡಿಯಾಗಿರುವ ರಾಯಚೂರು-ಸೋಲಾಪುರ ವಿದ್ಯುತ್ ಮಾರ್ಗದ ಪ್ರಾಯೋಗಿಕ ಕಾರ್ಯಾರಂಭ ಸದ್ಯ ಮಾಡಲಾಗಿದೆ ಎಂದು ಪವರ್‌ಗ್ರಿಡ್ ಕಾರ್ಪೊರೇಷನ್‌ನ ಹೈದರಾಬಾದ್ ಕಚೇರಿ ಹಿರಿಯ ಅಧಿಕಾರಿ ಬನ್ಸಲ್ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.