ರಾಯಚೂರು

ನಾಗಲಾಪುರ: ಶುದ್ಧ ಕುಡಿವ ನೀರಿನ ಘಟಕಕ್ಕೆ ಚಾಲನೆ

Published On :

ಮುದಗಲ್: ಪಟ್ಟಣ ಸಮೀಪದ ನಾಗಲಾಪುರ ಗ್ರಾಮದಲ್ಲಿ ಸ್ಥಾಪಿಸಲಾದ ಸಾರ್ವಜನಿಕ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಸ್ಥಳೀಯ ಗ್ರಾ.ಪಂ.ಅಧ್ಯಕ್ಷ ಅನುಸೂಯ ಗ್ಯಾನನಗೌಡ ಪಾಟೀಲ್ ವಿದ್ಯುತ್ ಗುಂಡಿ ಒತ್ತುವ ಮೂಲಕ ಘಟಕಕ್ಕೆ ಚಾಲನೆ ನೀಡಿದರು.
ನಂತರ ಗ್ರಾ.ಪಂ.ಪಿಡಿಒ ಚನ್ನಮಲ್ಲಯ್ಯ ಸ್ವಾಮಿ ಮಾತನಾಡಿ, ಸರಕಾರ ನಿರ್ದೇಶನದಂತೆ ಹೈದ್ರಾಬಾದ ಮೂಲದ ಸ್ಮಾಟ್ ಅಕ್ವಾ ಸಂಸ್ಥೆ ಸ್ಥಳೀಯ ಗ್ರಾ.ಪಂ. ಸಂಯೋಗದೊಂದಿಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿದ್ದು, ಜನತೆ ಪ್ರತಿ ಲೀಟರ್ ನೀರಿಗೆ ಕೇವಲ 20 ಪೈಸೆ ಹಣ ನೀಡಬೇಕು ಎಂದರು.
ನಾಗಲಾಪುರ ಗ್ರಾಮದಲ್ಲಿ ಹೆಚ್ಚಾಗಿ ಉಪ್ಪಿನಂಶದ ನೀರು ಲಭ್ಯಾವಾಗುತಿತ್ತು. ಆದರೆ ಈಗ ಜನರಿಗೆ ಶುದ್ಧ ಕುಡಿಯುವ ನೀರು ಸಿಗಲಿದ್ದು, ಜನತೆ ಇದರ ಲಾಭ ಪಡೆಯಬೇಕು ಎಂದರು. ನಾಗಲಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಮಾರಖೇಡ, ಛತ್ತರ, ಪಿಕಳಿಹಾಳ ಗ್ರಾಮಗಳಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕಗಳನ್ನು ಅಳವಡಿಸಲು ಸಂಸ್ಥೆ ಮುಂದೆ ಬಂದಿದ್ದು, ಈಗಾಗಲೇ ಕಾಮಗಾರಿ ಮುಗಿಯುವ ಹಂತಕ್ಕೆ ತಲುಪಿದೆ ಎಂದರು.
ವಿಎಸ್ಎಸ್ಎನ್ ಟ್ಯಾಂಕ್ ಅಧ್ಯಕ್ಷ ಶೇಖರಗೌಡ, ನಿರ್ದೇಶಕ ಶರಣಬಸವ, ಗ್ರಾ.ಪಂ. ಸದಸ್ಯ ಸೋಮಶೇಖರ ಪುಜಾರಿ, ತಾ.ಪಂ.ಮಾಜಿ ಸದಸ್ಯ ಶರಣಪ್ಪ ಮಸ್ಕಿ, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಲಕ್ಷ್ಮಣ ರಾಠೋಡ, ಗ್ಯಾನನಗೌಡ, ಮಲ್ಲೇಶ ಮಡಿವಾಳರ, ಛತ್ತರೇಶ ನಾಯ್ಕ, ಸಿ.ಎಚ್. ನಾಯಕ, ಕುಡಿಯುವ ನೀರಿನ ಘಟಕ ನಿರ್ವಾಹಕ ಹನುಮಂತ ರಾಠೋಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.