ಯೋಜನೆ ಸದುಪಯೋಗಕ್ಕೆ ಶಾಸಕ ವಜ್ಜಲ್ ಸಲಹೆ
ಲಿಂಗಸ್ಗೂರು: ಸರ್ಕಾರ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ವಿದ್ಯಾರ್ಥಿಗಳು ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ಮಾನಪ್ಪ ವಜ್ಜಲ್ ಸಲಹೆ ನೀಡಿದರು. ಅವರು ಪಟ್ಟಣದ ಶಾಸಕರ ಸರ್ಕಾರಿ ಮಾದರಿ ಶಾಲೆಯಲ್ಲಿ ಇತ್ತೀಚೆಗೆ ಸೈಕಲ್ ವಿತರಿಸಿ ಮಾತನಾಡಿ, ಸರ್ಕಾರ ಬಿಸಿಯೂಟ, ಸಮವಸ್ತ್ರ, ಪಠ್ಯಪುಸ್ತಕ, ಸೈಕಲ್ ಸೇರಿ ಅನೇಕ ಯೋಜನೆಗಳ ಜಾರಿಯಿಂದ ಗ್ರಾಮೀಣ ಮಕ್ಕಳ ಹಾಜರಾತಿ ಹೆಚ್ಚಿಸಲು ಹಾಗೂ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಬಿಇಒ ಶಾಂತಗೌಡ ಪಾಟೀಲ್, ಎಸ್ಡಿಎಂಸಿ ಅಧ್ಯಕ್ಷ ಜಯಪ್ರಕಾಶ ಪಾಟೀಲ್, ವೆಂಕನಗೌಡ ಐದನಾಳ ಇದ್ದರು. ಶಾಲಾ ವಿದ್ಯಾರ್ಥಿಗಳು ಮತ್ತು ಬೋಧಕ ವರ್ಗದವರು ಪಾಲ್ಗೊಂಡಿದ್ದರು.
ಸ್ಮಶಾನ ಜಮೀನು; ಅಕ್ರಮ ತೆರವು ತಡೆಗೆ ಮನವಿ
ಲಿಂಗಸ್ಗೂರು: ತಾಲೂಕಿನ ದೇವರಭೂಪೂರ ಗ್ರಾಮದ ಸ್ಮಶಾನ ಭೂಮಿಯ ಅಕ್ರಮ ತೆರವು ಕಾರ್ಯ ತಡೆಯಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ತಹಸೀಲ್ದಾರ್ ಜಿ.ಎಸ್. ಮಹಾಜನ್ ಅವರಿಗೆ ಮನವಿ ಸಲ್ಲಿಸಿದರು. ಗ್ರಾಮದ ದುರುಗಪ್ಪ ಹೊರಮನಿ ಎಂಬುವರು ಸುಮಾರು 30 ವರ್ಷಗಳ ಹಿಂದೆ ಗ್ರಾಪಂ ಕಾರ್ಯಾಲಯಕ್ಕೆ ಸರ್ವೆ ನಂ.2 ರಲ್ಲಿ 3.15 ಎಕರೆಯನ್ನು 3 ಸಾವಿರಕ್ಕೆ ಮಾರಾಟ ಮಾಡಿದ್ದಾರೆ. ನೋಂದಣಿಯೂ ಆಗಿದೆ. ಆದರೆ ಮಾರಾಟ ಮಾಡಿದ ದುರುಗಪ್ಪ ಅವರ ಮಕ್ಕಳಾದ ದ್ಯಾವಪ್ಪ ಹಾಗೂ ಅಮರೇಶ ಎಂಬುವರು ಏಕಾಏಕಿ ಸ್ಮಶಾನ ಜಾಗ ತೆರವುಗೊಳಿಸಿದ್ದು, ಅಲ್ಲದೆ ಜಾಗದಲ್ಲಿ ಸಾರ್ವಜನಿಕರು ಪ್ರವೇಶ ಮಾಡದಂತೆ ದಾರಿ ಬಂದ್ ಮಾಡಿದ್ದಾರೆ. ಕೂಡಲೇ ಗ್ರಾಮದ ಸ್ಮಶಾನ ಭೂಮಿಯಲ್ಲಿ ಶವಸಂಸ್ಕಾರ ಮಾಡಲು ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಈ ವೇಳೆ ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ, ಅಮರೇಗೌಡ, ಹನುಮಪ್ಪ, ಭೀಮರಾಯ, ನಿಂಗಪ್ಪ, ರಾಮಪ್ಪ, ಗದ್ದೆಪ್ಪ, ಗಂಗಮ್ಮ, ಹನುಮಗೌಡ, ಗೋವಿಂದಪ್ಪ, ಯಂಕೋಬ, ಶರಣಪ್ಪ, ಬಸಪ್ಪ, ಅಮರೇಶ, ಬಸನಗೌಡ, ಶಿವಪ್ಪ, ಮಾನಪ್ಪ, ದ್ಯಾವಪ್ಪ, ಸೋಮಪ್ಪ, ಹನುಮಂತ, ಚೌಡಪ್ಪ, ಶಿವನಗೌಡ, ಅಮರಪ್ಪ, ತಿಮ್ಮನಗೌಡ, ಅಮರಪ್ಪ, ಯಲ್ಲಪ್ಪ, ರಾಮಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

