ಘನಮಠ ಶ್ರೀಗಳ ಪಲ್ಲಕ್ಕಿ ಮೆರವಣಿಗೆ
ಮುದಗಲ್: ಸಮೀಪದ ಸಂತೆಕೆಲ್ಲೂರಿನ ಘನಮಠ ಶಿವಯೋಗಿಗಳ 134ನೇ ಪುಣ್ಯಸ್ಮರಣೆ ಜಾತ್ರಾ ಮಹೋತ್ಸವದ ಅಂಗವಾಗಿ ಘನಮಠೇಶ್ವರ ಮಠದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮ ಹಾಗೂ ಪಲ್ಲಕ್ಕಿ ಉತ್ಸವ ಶನಿವಾರ ನಡೆಯಿತು.
ಬೆಳಗ್ಗೆ ಘನಮಠೇಶ್ವರ ಕತೃ ಗದ್ದುಗೆಗೆ ರುದ್ರಾಭೀಷೇಕ, ಬಿಲ್ವಾರ್ಚನೆ, ಜಂಗಮ ವಟುಗಳಿಗೆ ಲಿಂಗ ದೀಕ್ಷೆ(ಅಯ್ಯಾಚಾರ) ನಡೆದವು. ಸಾಮೂಹಿಕ ವಿವಾಹ ನಂತರ ಘನಮಠ ಶಿವಯೋಗಿಗಳ ಹಾಗೂ ಬಸವಾದಿ ಶರಣರ ವಚನ ಸಾಹಿತ್ಯ ಮತ್ತು ಭಾವಚಿತ್ರ ಮೆರವಣಿಗೆ ಅಲಕೃತ ಪಲ್ಲಕ್ಕಿಯಲ್ಲಿಟ್ಟು ಗ್ರಾಮದಲ್ಲಿ ಮೆರವಣಿಗೆ ಶನಿವಾರ ನಡೆಸಲಾಯಿತು.
ಸೂಗಯ್ಯ ಹಿರೇಮಠ ಪೂಜೆ ಸಲ್ಲಿಸುತ್ತಿದ್ದಂತೆ ಸೊಂಡೂರು ತಾಲೂಕು ತಾರಾನಗರದ ಎಸ್.ಎಂ. ಚಂದ್ರಯ್ಯ ಹಾಗೂ ಬಸಯ್ಯ ಅವರಿಂದ ವೀರಗಾಸೆ ನೃತ್ಯ ಹಾಗೂ ಚಿಕ್ಕಜಂತಗಲ್ ನ್ಯಾಶನಲ್ ಮ್ಯೂಸಿಕ್ ತಂಡ ಬಾಜಾ ಭಜಂತ್ರಿ, ಡೊಳ್ಳುಕುಣಿತ, ವಾದ್ಯಮೇಳ ಹಾಗೂ ಗುಂಡಸಾಗರದ ಬಸವರಾಜ ಕಾಳಾಪುರ ಮೌನೇಶ ಬಡಿಗೇರ ತಂಡದ ಪುರವಂತಿಕೆ ಮೇಳಗಳ ನೃತ್ಯ ಜನಮನಸೂರೆಗೊಂಡವು.
ನಂದವಾಡಗಿ ಮಹಾಂತಲಿಂಗ ಶಿವಾಚಾರ್ಯರು, ಜೇರಟಗಿಯ ವಿರಕ್ತಮಠದ ಮಹಾಂತ ಸ್ವಾಮೀಜಿ, ಘನಮಠದ ಗುರುಬಸವ ಸ್ವಾಮೀಜಿ, ಗುಲ್ಬರ್ಗದ ರೋಜಾ ಹಿರೇಮಠದ ಕೆಂಚಬಸವ ಶಿವಾಚಾರ್ಯರು, ಮಹಾಂತಿನ ಮಠದ ಮರಿಮಹಾಂತ ದೇವರು, ಸಿದ್ದರಾಮಪ್ಪ ಸಾಹುಕಾರ, ಆದನಗೌಡ ಪಾಟೀಲ್, ಮರಿಗೌಡ ಪಾಟೀಲ್, ವಿರೇಶ ವಿರಕ್ತಮಠ, ಮಹಾಂತಪ್ಪ ನಾವದಗಿ, ಲಿಂಗರಾಜ ಸಾಹುಕಾರ, ಡಾ. ಶರಣಪ್ಪ ಜಾವೂರ ಮಟ್ಟೂರ, ಸಂಗನಗೌಡ ವಿರೇಶ ಪತ್ತಾರ, ಹುಲುಗಪ್ಪ, ಗ್ರಾಪಂ ಉಪಾಧ್ಯಕ್ಷ ಮಹೇಂದ್ರಗೌಡ ಪಾಟೀಲ್, ಸದಸ್ಯರಾದ ನಾಗಭೂಷಣ ರೇವಣಿಮಠ, ಶಿವಗ್ಯಾನಪ್ಪ, ಸೋಮ ಶೇಖರಪ್ಪ ಗಡೇದ ನಾನಾ ಯುವಕ ಸಂಘದ ಪದಾಧಿಕಾರಿಗಳು ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

