ರಾಯಚೂರು

ವೃತ್ತಿ ಕೋರ್ಸ್‌ಗಳಲ್ಲಿ ಸೆಮಿಸ್ಟರ್ ಬೇಡ

Published On :

ಲಿಂಗಸ್ಗೂರು: ಸರ್ಕಾರ ಐಟಿಐ, ಸಿಎಸ್‌ಟಿ ಸೇರಿದಂತೆ ವೃತ್ತಿ ಕೋರ್ಸ್‌ಗಳಲ್ಲಿ ಅಳವಡಿಸಲು ಉದ್ದೇಶಿಸಿದ ಸೆಮಿಸ್ಟರ್ಪ್‌ದ್ದತಿ ಕೈಬಿಡುವಂತೆ ಆಗ್ರಹಿಸಿ ಎಐಡಿಎಸ್‌ಒ, ಎಐಡಿವೈಒ ಹಾಗೂ ಎಸ್‌ಎಫ್‌ಐ ಸಂಘಟನೆಗಳು ಬುಧವಾರ ಪ್ರತಿಭಟನೆ ನಡೆಸಲಾಯಿತು.
ಐಟಿಐ ತರಬೇತಿಯಲ್ಲಿ ಉದ್ಯೋಗ ಮತ್ತು ತರಬೇತಿ ಇಲಾಖೆ(ಡಿಇಟಿ) ದಿಢೀರನೆ ಸೆಮಿಸ್ಟರ್ ಪದ್ಧತಿ ಜಾರಿ ವಿರೋಧಿಸಿ ಡಿ.23ರಂದು ಸಂಘಟನೆಯಿಂದ ಬೆಂಗಳೂರು ಚಲೋ ಬೃಹತ್ ಹೋರಾಟ ನಡೆಸಲಾಯಿತು. ಅಂದು ಉದ್ಯೋಗ ಮತ್ತು ತರಬೇತಿ ಇಲಾಖೆ ಜಂಟಿ ನಿರ್ದೇಶಕರು ಎಐಡಿವೈಒ ಮತ್ತು ಎಐಡಿಎಸ್‌ಒ ರಾಜ್ಯ ನಾಯಕರಿಂದ ಮನವಿ ಸ್ವೀಕರಿಸಿ ಸದ್ಯದಲ್ಲಿ ಸಿಹಿ ಸುದ್ದಿ ಕೊಡುವುದಾಗಿ ಹೇಳಿದ್ದರು. ನಂತರ ಡಿ.26ರಂದು ಭೇಟಿ ಮಾಡಿದ ನಿಯೋಗಕ್ಕೆ ಒಂದು ವಾರದೊಳಗೆ ಅನುಕೂಲಕರ ಉತ್ತರ ಪಡೆಯುವ ಭರವಸೆ ನೀಡಿದ್ದರು.
ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕ: ಆದರೆ ಇದುವರೆಗೆ ದೆಹಲಿಯ ಡೈರೆಕ್ಟರೇಟ್ ಜನರಲ್ ಆಫ್ ಎಂಪ್ಲಾಯ್‌ಮೆಂಟ್ ಆಂಡ್ ಟ್ರೈನಿಂಗ್‌ಗೆ ಮನವಿ ಪತ್ರ ರವಾನಿಸಲಾಗಿದೆ ಎಂದು ಹೇಳುತ್ತಾ ಅತಂತ್ರ ಸ್ಥಿತಿ ಮುಂದುರಿಸುತ್ತಾ ಹೋಗುತ್ತಿದೆ. ಪ್ರಸಕ್ತ ತರಬೇತಿ ಪಠ್ಯಕ್ರಮ, ಶಿಕ್ಷಕರ ತರಬೇತಿ ಬಗ್ಗೆ ಯಾವುದೇ ಪೂರ್ವ ತಯಾರಿ ನಡೆಸದೆ ಇರುವ ರಾಜ್ಯ ಡಿಇಟಿ ಈಗ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಪರೀಕ್ಷೆ ತಯಾರಿಯಲ್ಲಿ ತೊಡಗಿದ್ದು, ಇದರಿಂದ ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೇಡಿಕೆಗಳು: ಐಟಿಐ ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕ ಹುದ್ದೆಗಳಿಗೆ ನೇಮಕ ಮಾಡಬೇಕು. ಪ್ರಯೋಗಾಲಯ ಮತ್ತು ಮೂಲ ಸೌಕರ್ಯ ಒದಗಿಸಬೇಕು. ಕಾಲೇಜು ಸಮಯದಲ್ಲಿ ನಿರಂತರ 3 ಫೇಸ್ ವಿದ್ಯುತ್ ಪೂರೈಸಬೇಕು. ಬಾಕಿ ಶಿಷ್ಯವೇತನ ಬಿಡುಗಡೆ ಮಾಡಿ ಹೆಚ್ಚುವರಿ ಕಾಲೇಜು ಸ್ಥಾಪಿಸಬೇಕು. ಪಠ್ಯಕ್ರಮದ ಬದಲಾವಣೆಗೆ ಹೆಚ್ಚಿನ ಸಮಯಾವಕಾಶ ನೀಡಿ ತಜ್ಞರ ಹಾಗೂ ಎಲ್ಲ ಭಾಗಿದಾರರ ಅಭಿಪ್ರಾಯ ಸಂಗ್ರಹಿಸಿ ಮುಂದುವರಿಯಬೇಕೆಂದು ಒತ್ತಾಯಿಸಿ ಸಹಾಯಕ ಆಯುಕ್ತರ ಕಚೇರಿ ಶಿರಸ್ತೇದಾರ ಭಾನುಮತಿ ಅವರಿಗೆ ಪ್ರತ್ಯೇಕ ಮನವಿ ಸಲ್ಲಿಸಿದರು.
ತಿರುಪತಿ ಗೋನವಾರ್, ಅಯ್ಯಪ್ಪ, ಗಂಗಾಧರ, ಪವನಕುಮಾರ, ಅಮರೇಶ, ಬಸಲಿಂಗ, ಮೌನೇಶ ನಾಗರಾಜ, ರಮೇಶ ವೀರಾಪೂರ, ಮಹೇಶ ರಾಠೋಡ್, ಬಸನಗೌಡ, ಆಸೀಫ್, ಮಲ್ಲಿಕಾರ್ಜುನ, ಅಶೋಕ ಕುಮಾರ, ಭೀಮಾಶಂಕರ ಸೇರಿದಂತೆ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.