ರಾಯಚೂರು

ಬಸವ ಚಾರಿಟಬಲ್ವರೆಗೆ ಡಾಂಬರೀಕರಣಕ್ಕೆ ಆಗ್ರಹ

Published On :

ಕ.ಪ್ರ. ವಾರ್ತೆ    ಸಿಂಧನೂರು    ಜ.11
ನಗರದ ಬಸ್ ನಿಲ್ದಾಣದಿಂದ ಬಸವ ಚಾರಿಟಬಲ್ ಟ್ರಸ್ಟ್ವರೆಗೆ ರಸ್ತೆಯನ್ನು ಡಾಂಬರೀಕರಣಗೊಳಿಸಬೇಕೆಂದು ನಗರಾಭಿವೃದ್ಧಿ ಹೋರಾಟ ಸಮಿತಿ ಕೆಆರ್ಡಿಸಿಎಲ್ ಮತ್ತು ಶಾಸಕ ಹಂಪನಗೌಡ ಬಾದರ್ಲಿ ಅವರಿಗೆ ಆಗ್ರಹಿಸಿದೆ.
ಅನಿಕೇತನ ಸ್ವತಂತ್ರ ಪಪೂ ಕಾಲೇಜಿನಲ್ಲಿ ಸಭೆ ಸೇರಿದ ಹೋರಾಟ ಸಮಿತಿಯು ಲಿಖಿತ ಭರವಸೆ ನೀಡಿದ್ದ ಪ್ರಕಾರ ಗಾಂಧಿವೃತ್ತದಿಂದ ಬಸವ ವೃತ್ತದವರೆಗೆ ಡಾಂಬರೀಕರಣ ಮಾಡಿರುವುದಕ್ಕೆ ಶಾಸಕ ಹಂಪನಗೌಡ ಬಾದರ್ಲಿ ಹಾಗೂ ಕೆಆರ್ಡಿಸಿಎಲ್ ಅಧಿಕಾರಿಗಳನ್ನು ಅಭಿನಂದಿಸಿದರು.
ಭರವಸೆ ಈಡೇರಿಕೆಗೆ ಒತ್ತಾಯ: ಕೆಆರ್ಡಿಸಿಎಲ್ನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಯೋಗಿ ಡೊಳ್ಳಿನ್ ತಮ್ಮ ಲಿಖಿತ ಭರವಸೆಯಂತೆ ಬಸವ ಚಾರಿಟಬಲ್ ಟ್ರಸ್ಟ್ವರೆಗೆ ಡಾಂಬರೀಕರಣ ಮಾಡಿದರೆ ಈಡೇರಿದಂತಾಗುತ್ತದೆ. ಈ ಬಗ್ಗೆ ಮತ್ತೊಮ್ಮೆ ಅಧಿಕಾರಿಗಳನ್ನು ಒತ್ತಾಯಿಸಲು ನಿರ್ಣಯ ಕೈಗೊಳ್ಳಲಾಯಿತು.
ಹಳೇ ಬಜಾರ್ ಮುಖ್ಯರಸ್ತೆಗೆ ಹಾಕಿರುವ ಟೆಂಡರ್ನ್ನು ಡಿ.3ಕ್ಕೆ ತೆಗೆಯಲಾಗುತ್ತದೆ. ತಕ್ಷಣದಿಂದಲೇ ಕೆಲಸ ಪ್ರಾರಂಭಿಸುವುದಾಗಿ ನಗರಸಭೆ ಅಧ್ಯಕ್ಷ ಜಾಫರ್ ಅಲಿ ಜಾಗೀರದಾರ ತಿಳಿಸಿದ್ದರು. ತದನಂತರ ಹೊಸ ವರ್ಷದ ಮೊದಲ ದಿನವೇ ರಸ್ತೆ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡುವುದಾಗಿ ಹೇಳಿದ್ದರು. ಆದರೆ ಈವರೆಗೆ ಕೆಲಸ ಪ್ರಾರಂಭವಾಗಿರದ ಬಗ್ಗೆ ಸಮಿತಿಯ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಕಾಮಗಾರಿ ಆರಂಭಿಸುವಂತೆ ನಗರಸಭೆ ಆಡಳಿತ ಮಂಡಳಿಯ ಗಮನ ಸೆಳೆಯಲು ನಿರ್ಣಯಿಸಲಾಯಿತು.
ಶೌಚಾಲಯ ನಿರ್ಮಿಸಿಲ್ಲ: ರಾಯಚೂರು, ಗಂಗಾವತಿ ಮತ್ತು ಕುಷ್ಟಗಿ ಮುಖ್ಯ ರಸ್ತೆಗಳಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಮೂತ್ರಾಲಯಗಳನ್ನು ಕಟ್ಟಿಸುವುದಾಗಿ ಭರವಸೆ ನೀಡಿದ್ದರು. ಇನ್ನೂ ಕಾಮಗಾರಿ ಆರಂಭಿಸಿಲ್ಲ. ಈ ಸಮಸ್ಯೆ ನಿವಾರಣೆಗೆ ಆದ್ಯತೆ ಮೇರೆಗೆ ಕೈಗೊಳ್ಳಲು ನಗರಸಭೆ ಅಧ್ಯಕ್ಷರೊಂದಿಗೆ ಸಮಾಲೋಚನೆ ನಡೆಸಲು ಚರ್ಚಿಸಲಾಯಿತು.
ನಗರದ ವಿವಿಧ ವಾರ್ಡ್ಗಳಲ್ಲಿ ರಸ್ತೆಗಳಿಗೆ ಮರಂ ಹಾಕಿದ್ದು ಧೂಳೆದ್ದಿದೆ. ಅದರ ನಿಯಂತ್ರಣಕ್ಕಾಗಿ ನೀರು ಸಿಂಪಡಿಸುವಂತೆ ನಗರಸಭೆ ಆಡಳಿತ ಮಂಡಳಿಯನ್ನು ಒತ್ತಾಯಿಸಲು ನಿರ್ಣಯ ಕೈಗೊಳ್ಳಲಾಯಿತು. ಉದ್ಯಾನವನ ರಕ್ಷಣೆ, ಚರಂಡಿ ನಿರ್ಮಾಣ ಮತ್ತು ಬೇಸಿಗೆಯಲ್ಲಿ ಕುಡಿವ ನೀರಿನ ಪೂರೈಕೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಆಡಳಿತ ಮಂಡಳಿಯ ಗಮನ ಸೆಳೆಯಲು ವಿವಿಧ ಸಂಚಾಲಕರು ಅಭಿಪ್ರಾಯಪಟ್ಟರು.
ನಗರಾಭಿವೃದ್ಧಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಹನುಮನಗೌಡ ಬೆಳಗುರ್ಕಿ, ಸಂಪರ್ಕ ಸಂಚಾಲಕ ಡಿ.ಎಚ್. ಕಂಬಳಿ, ಸಂಚಾಲಕರಾದ ಡಾ.ತಾಹೀರ ಅಲಿ, ಯಂಕನಗೌಡ ಗದ್ರಟಗಿ, ನಾರಾಯಣ ಬೆಳಗುರ್ಕಿ, ಎಚ್.ಎನ್. ಬಡಿಗೇರ, ಗುಂಡಪ್ಪ ಬಳಿಗಾರ, ಎಂ.ಸಿ. ಸೀತಮ್ಮ, ಶಂಕರ ಗುರಿಕಾರ, ಬಸವರಾಜ ಬಾದರ್ಲಿ, ಎಸ್.ದೇವೆಂದ್ರಗೌಡ, ಬಸವರಾಜ ಹಳ್ಳಿ, ಕೆ.ಬಸವರಾಜ, ದಾವುಲಸಾಬ ದೊಡ್ಡಮನಿ, ವೆಂಕಟೇಶ ಗಿರಿಜಾಲಿ ಸಭೆಯಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.