ರಾಯಚೂರು

ಕಲುಷಿತ ಎಣ್ಣೆ ಮಾರಾಟದ ಆರೋಪ; ವಾಹನಕ್ಕೆ ತಡೆ

Published On :

ಸಿಂಧನೂರು: ನಗರದ ಡಾ. ಆನಂದ ಹೆಗ್ಡೆ ಫಾರಂ ರಸ್ತೆಯಲ್ಲಿರುವ ಮನೆ ಮತ್ತು ಗೋದಾಮಿನಲ್ಲಿ ಮಂಗಲರಾಮ್ ಪಟೇಲ್ ಎಂಬುವವರು ರುಚಿಗೋಲ್ಡ್ ಅಡುಗೆ ಎಣ್ಣೆಯ ಲೇಬಲ್ ಬಳಸಿ ಕಲುಷಿತ ಎಣ್ಣೆ ಮಿಶ್ರಣ ತಯಾರಿಸಿ ಮಾರಾಟ ಮಾಡುತ್ತಿದ್ದಾರೆಂದು ಆರೋಪಿಸಿ ದಸಂಸ(ಭೀಮವಾದ)ಕಾರ್ಯಕರ್ತರು ಬಸ್ ನಿಲ್ದಾಣದ ಬಳಿ ಎಣ್ಣೆ ಸಾಗಿಸುತ್ತಿದ್ದ ವಾಹನವನ್ನು ಶುಕ್ರವಾರ ತಡೆದ ಘಟನೆ ನಡೆದಿದೆ. ಬಸ್ ನಿಲ್ದಾಣದ ಬಳಿಯ ಅಂಬಾದೇವಿ ದೇವಸ್ಥಾನದ ಬಳಿ ಎಣ್ಣೆ ಸಾಗಿಸುತ್ತಿದ್ದ ಟಂಟಂ ವಾಹನವನ್ನು ತಡೆದು ನಿಲ್ಲಿಸಿದ ಕಾರ್ಯಕರ್ತರು, ತಹಸೀಲ್ದಾರರು ಮತ್ತು ನಗರ ಪೊಲೀಸ್ ಠಾಣೆಗೆ ದೂರಿದ್ದರಿಂದ ವಾಹನದಲ್ಲಿದ್ದ ಎಣ್ಣೆಯ ಮಾದರಿಯನ್ನು ಪಡೆದು ಗುಲ್ಬರ್ಗದ ಪ್ರಯೋಗಾಲಯಕ್ಕೆ ಕಳಿಸಿಕೊಡಲಾಯಿತು. ಈ ಕುರಿತು ತಹಸೀಲ್ದಾರ್ ವೆಂಕನಗೌಡ ಆರ್. ಪಾಟೀಲ್ ಪ್ರತಿಕ್ರಿಯಿಸಿದ್ದು, ಆಹಾರ ಇಲಾಖೆಯ ಜಿಲ್ಲಾ ನಿರೀಕ್ಷಕರಿಗೆ ಮತ್ತು ಆರೋಗ್ಯ ಇಲಾಖೆ ನಿರೀಕ್ಷಕರಿಗೆ ದೂರಿನ ವಿವರ ತಿಳಿಸಿ ಕ್ರಮಕ್ಕೆ ಶಿಫಾರಸು ಮಾಡಿರುವುದಾಗಿ ಹೇಳಿದರು.  ದಲಿತ ಮುಖಂಡರಾದ ಚಿಟ್ಟಿಬಾಬು, ವೀರಣ್ಣ, ದುರ್ಗಪ್ಪ ಹೆಡಿಗಿಬಾಳ, ಚಂದ್ರಶೇಖರ ಸಾಸಲಮರಿ, ಬಾಲಸ್ವಾಮಿ ವಕೀಲರು ಮತ್ತಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.