ಸ್ಪರ್ಧಾತ್ಮಕ ಯುಗದಲ್ಲಿ ಆಧುನಿಕ ಶಿಕ್ಷಣ ಅವಶ್ಯ
ಕನ್ನಡಪ್ರಭ ವಾರ್ತೆ, ಮುದಗಲ್, ಜ.14
ಪ್ರಸ್ತುತ ದಿನಮಾನಗಳು ಸ್ಪರ್ಧಾತ್ಮಕತೆಯಿಂದ ಪ್ರತಿಯೊಂದು ರಂಗಗಳು ಕೂಡಿರುವುದರಿಂದ ಆಧುನಿಕ ಶಿಕ್ಷಣದ ಅವಶ್ಯಕತೆ ಇದೆ. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಶಿಕ್ಷಣದ ವ್ಯವಸ್ಥೆಗೆ ಶ್ರಮಿಸುವಂತೆ ಮುದಗಲ್ನ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ನೂರ್ ಬಾಷಾ ಕರೆ ನೀಡಿದರು.
ಪಟ್ಟಣ ಸಮೀಪದ ಕನ್ನಾಪುರಹಟ್ಟಿ ಜವಾಹರ ನವೋದಯ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣದ ನೈತಿಕತೆ ಕ್ಷೀಣಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ವಿದ್ಯಾರ್ಥಿಗಳಲ್ಲಿ ನೀಡುವಲ್ಲಿ ಶಿಕ್ಷಕ ವರ್ಗದವರು ಶ್ರಮಿಸಬೇಕೆಂದರು. ಹೈದ್ರಾಬಾದ್ ಕರ್ನಾಟಕ ವಿಶೇಷ ಸ್ಥಾನಮಾನ ಲಭಿಸಿದ ಹಿನ್ನೆಲೆಯಲ್ಲಿ ಸ್ಪರ್ಧೆ ಏರ್ಪಟ್ಟಿದ್ದು ಸ್ಪರ್ಧಾತ್ಮಕ ಪರೀಕ್ಷೆ ತಯಾರಿಕೆಗೆ ವಿದ್ಯಾರ್ಥಿಗಳು ಸನ್ನದ್ಧರಾಗುವಂತೆ ಕಿವಿಮಾತು ಹೇಳಿದರು. ಈ ಶತಮಾನದ ಅಂಚಿನಲ್ಲಿ ಭಾರತವು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈಯಲು ಸಹಕರಿಸಲು ಕೋರಿದರು. ಸ್ಥಳೀಯ ಸಮುದಾಯ ಕೇಂದ್ರದ ವೈದ್ಯಾಧಿಕಾರಿ ಡಾ. ಈಶ್ವರ ಸವಡಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಯುವಕರು ದುಶ್ಚಟಗಳಿಗೆ ಬಲಿಯಾಗದೇ ಉತ್ತಮ ಸಮಾಜ ನಿರ್ಮಿಸುವಲ್ಲಿ ಭಾಗಿಯಾಗುವುದಲ್ಲದೇ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಸುಶಿಕ್ಷಿತರಾಗಿ ಸರ್ಕಾರದ ಯೋಜನೆಗಳನನು ಸದುಪಯೋಗ ಪಡೆದುಕೊಳ್ಳಿ ಎಂದರು.
ಸದುಪಯೋಗ: ಪಾಲಕರ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಲಿಂಗಪ್ಪ ಪರಂಗಿ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳ ಭಾಗ್ಯದ ಬಾಗಿಲು ಈ ನವೋದಯ ಮಹಾವಿದ್ಯಾಲಯವಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಉತ್ತಮ ಪ್ರಜೆಗಳಾಗುವಂತೆ ಸಲಹೆ ನೀಡಿದರು. ಮಕ್ಕಳ ಪಾಲಕರ ಸಹಯೋಗದೊಂದಿಗೆ ನವೋದಯ ಮಹಾವಿದ್ಯಾಲಯಕ್ಕೆ ಅನೇಕ ರೀತಿ ಸೌಲಭ್ಯಗಳನ್ನು ನೀಡಿದ್ದು, ಪಾಲಕರ ಸಹಕಾರಕ್ಕೆ ಶುಭ ಕೋರಿದರು. ನವೋದಯ ಮಹಾವಿದ್ಯಾಲಯದ ಪ್ರಾಚಾರ್ಯ ಸಚೇಂದ್ರನ್ ಕಾರ್ಯಕ್ರಮದ ಕುರಿತು ಹಾಗೂ ಪಾಲಕರನ್ನದ್ದೇಶಿಸಿ ಮಾತನಾಡಿದರು.
ಪ್ರಶಸ್ತಿ ವಿತರಣೆ: 2013-14 ನೇ ಸಾಲಿನಲ್ಲಿ ಮಹಾವಿದ್ಯಾಲಯದಲ್ಲಿ ನಡೆದ ನಾನಾ ಬಗೆಯ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪಾರಿತೋಷಕಗಳನ್ನು ವಿತರಿಸಲಾಯಿತು. ವರ್ಷದ ಉತ್ತಮ ವಿದ್ಯಾರ್ಥಿ ಸುದರ್ಶನ ಹಾಗೂ ಉತ್ತಮ ವಿದ್ಯಾರ್ಥಿನಿ ಸೌಮ್ಯಗೆ ಸನ್ಮಾನಿಸಲಾಯಿತು.
ಲಿಂಗಸ್ಗೂರು ತಾಪಂ ಅಧ್ಯಕ್ಷೆ ಬಸ್ಸಮ್ಮ ಪರಮೇಶ ಯಾದವ್, ಪಾಲಕರ ಸಂಘದ ಪ್ರತಿನಿಧಿಗಳಾದ ಸಿದ್ದಲಿಂಗಪ್ಪಗೌಡರು, ಅಮರೇಶ ಗೌಡರ್, ಸೇರಿದಂತೆ ಮಹಾವಿದ್ಯಾಲಯದ ಶಿಕ್ಷಕ ಬಳಗ ಸಿಬ್ಬಂದಿ ವರ್ಗ ಇದ್ದರು. ಶಿಕ್ಷಕ ಶ್ರೀಧರ ಗುಡಿ ಕಾರ್ಯಕ್ರಮ ನಿರ್ವಹಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪಾಲಕರ ಮನಸ್ಸು ಸೆಳೆದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

