ಸಂಚಾರ ನಿಯಮ ಅರಿತು ವಾಹನ ಚಲಾಯಿಸಿ'
ಅಫಜಲ್ಪುರ: ವಾಹನ ಚಾಲಕರು ತಮ್ಮ ವಾಹನವನ್ನು ಚಲಾಯಿಸುವಾಗ ಸಂಚಾರಿ ನಿಯಮ ತಿಳಿದು ಅವುಗಳನ್ನು ಅನುಸರಿಸಿ ವಾಹನ ಚಲಾಯಿಸಬೇಕೆಂದು ಅಫಜಲ್ಪುರ ಪೊಲೀಸ್ ಠಾಣೆಯ ಪಿಎಸ್ಐ ಸುರೇಶ ಬೆಂಡೆಗುಂಬಳ ಹೇಳಿದರು. ಪಟ್ಟಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷ ಸಪ್ತಾಹ 2014ಕ್ಕೆ ಚಾಲನೆ ನೀಡಿ ಮಾತನಾಡಿ, ವಾಹನ ಸವಾರರು ಪ್ರತಿ ದಿವಸ ವಾಹನ ಚಲಾಯಿಸಿ ಅದರಿಂದ ಬರುವ ಹಣವನ್ನು ತಮ್ಮ ಸಂಸಾರಕ್ಕೆ ಉಪಯೋಗಿಸಿಕೊಳ್ಳಬೇಕು. ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಅವರ ಭವಿಷ್ಯಕ್ಕೆ ಅನಕೂಲವಾಗುವ ರೀತಿಯಲ್ಲಿ ಈ ಹಣವನ್ನು ಉಪಯೋಗಿಸಿಕೊಳ್ಳಬೇಕು. ಪ್ರತಿನಿತ್ಯ ಶ್ರಮಪಟ್ಟು ದುಡಿದು ತಂದಿರುವ ಹಣವನ್ನು ಕುಡಿದು ವ್ಯರ್ಥವಾಗಿ ಹಾಳುಮಾಡಿಕೊಳ್ಳಬಾರದು ಎಂದರು. ವಾಹನ ಸವಾರರು ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿದರು. ಸಪ್ತಾಹದಲ್ಲಿ ಎಎಸ್ಐ ನಜೀರ್ ಅಹ್ಮದ್, ರಮೇಶ ಎಲ್ದೆ, ಭೀಮಾಶಂಕರ, ಸಿದ್ರಾಮಪ್ಪ ಧನ್ನಿ ಚಂದ್ರಕಾಂತ, ನಾಗರಾಜ, ಜಗನ್ನಾಥ, ಮಿಥುನ ರಾಠೋಡ, ಅಜಯ ರಾಠೋಡ, ಸುನೀಲ, ಅನೀಲ, ರಮೇಶ, ಲಕ್ಷ್ಮಣ, ಭಾಗಣ್ಣ ಇದ್ದರು. ಬಸವೇಶ್ವರ ವೃತ್ತದಿಂದ ಅಫಜಲ್ಪುರ ಪಟ್ಟಣದ ಬೀದಿಗಳಲ್ಲಿ ರ್ಯಾಲಿ ಜರುಗಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

