ಬದಕು ಹಸನಾಗಲು ಅಕ್ಷರ ಜ್ಞಾನ ಬೇಕು: ರಾಮನಗೌಡ
ಮುದಗಲ್: ವಿದ್ಯೆ ಇಲ್ಲದವನ ಬಾಳು ಹದ್ದಿಗಿಂತಕೀಳು ಎಂಬಂತೆ ಮಾನವ ಬದಕು ಹಸನಾಗಬೇಕಾದರೇ ಅಕ್ಷರ ಜ್ಞಾನದ ಅವಶ್ಯವಿದೆ ಎಂದು ಹುನೂರ ಪ್ರೌಢಶಾಲೆ ಮುಖ್ಯೋಪಾಧ್ಯಾಯ ರಾಮನಗೌಡ ಹೇಳಿದರು.
ಪಟ್ಟಣ ಸಮೀಪದ ಹುನೂರ ಗ್ರಾ.ಪಂ.ದಲ್ಲಿ ಹಮ್ಮಿಕೋಳ್ಳಲಾಗಿದ್ದ ಸ್ವಯಂ ಸೇವಕರ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಾನವನಲ್ಲಿ ಆಸ್ತಿ, ಹಣ ಇದ್ದರೇ ಅಣ್ಣ-ತಮ್ಮಂದಿರು ಪಾಲು ಬೇಡುವದಲ್ಲದೆ, ಪುಂಡ-ಪೋಕರಿಗಳ ಕಣ್ಣು ಬೀಳುತ್ತದೆ. ಆದರೆ ಅಕ್ಷರ ಜ್ಞಾನ, ವಿದ್ಯೆ-ಬುದ್ಧಿ ಇದ್ದರೇ ಯಾರಿಗೂ ತೆಗೆದುಕೊಳ್ಳಲು ಬರುವುದಿಲ್ಲ. ಹಾಗಾಗಿ ಗ್ರಾಮದಲ್ಲಿ ಅನಕ್ಷರಸ್ಥ ಯುವಕರು, ಮಕ್ಕಳು ಅಕ್ಷರ ಕಲಿತು, ಬುದ್ಧಿವಂತರಾಗಬೇಕು ಎಂದರು. ಶಿಕ್ಷಣ ಸಂಪನ್ಮೂಲ ವ್ಯಕ್ತಿ ಶಂಕ್ರಯ್ಯ ಸ್ವಾಮಿ ಮಾತನಾಡಿದರು. ತರಬೇತಿ ಕಾರ್ಯಕ್ರಮವನ್ನು ಗ್ರಾಪಂ ಅಭಿವೃದ್ಧಿ ಅಧಿಕಾರಿ ಸೋಮನಗೌಡ ಪಾಟೀಲ್ ಉದ್ಘಾಟಿಸಿದರು. ತರಬೇತಿಯಲ್ಲಿ 33 ಜನ ಸ್ವಯಂ ಸೇವಕರು ತರಬೇತಿ ಪಡೆದರು. ಪ್ರೇರಕ ಬಸವರಾಜ, ಉಪಪ್ರೇರಕಿ ಯಂಕಮ್ಮ, ಕರವೇ ಘಟಕದ ಅಧ್ಯಕ್ಷ ವಿಜಯಕುಮಾರ, ಬಸವರಾಜ, ತಿಮ್ಮನಗೌಡ, ವೆಂಕನಗೌಡ ಸೇರಿದಂತೆ ಹಲವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

