ಎಂಸಿಐನಿಂದ ರಿಮ್ಸ್ ಕಾಲೇಜು ಪರಿಶೀಲನೆ
ರಾಯಚೂರು: ನಗರದ ರಾಯಚೂರು ವೈದ್ಯಕೀಯ ಮಹಾವಿದ್ಯಾಲಯ(ರಿಮ್ಸ್) ಗೆ ಶುಕ್ರವಾರ ಭಾರತೀಯ ವೈದ್ಯಕೀಯ ಮಂಡಳಿಯ ಏಕ ಸದಸ್ಯ ಸಮಿತಿ ಭೇಟಿ ನೀಡಿ ಸ್ನಾತಕೋತ್ತರ ಪ್ರವೇಶಕ್ಕೆ ಮಾನ್ಯತೆ ನೀಡಿಕೆಗೆ ಸಂಬಂಧಿಸಿ ಪರೀಶಿಲನೆ ನಡೆಸಿತು. ಭರತ್ ಚೌಧರಿ ಎಂಬುವರಿದ್ದ ಸಮಿತಿ ಕಾಲೇಜಿಗೆ ಭೇಟಿ ನೀಡಿ, ಪ್ಯಾಥಾಲಜಿ ವಿಭಾಗದಲ್ಲಿ ಸ್ನಾತಕೋತ್ತರ ಪ್ರವೇಶಕ್ಕೆ ಮಾನ್ಯತೆ ಕೋರಿ ಸರ್ಕಾರ ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆ ಸೌಲಭ್ಯಗಳನ್ನು ಪರಿಶೀಲಿಸಿತು. ಮುಂಬರುವ ಶೈಕ್ಷಣಿಕ ವರ್ಷದಿಂದ ರಿಮ್ಸ್ನಲ್ಲಿ ಸ್ನಾತಕೋತ್ತರ ಪದವಿ ಪ್ರವೇಶ ಪ್ರಕ್ರಿಯೆಗೆ ಸರ್ಕಾರ ನಿರ್ಧರಿಸಿದ್ದು, ಆ ಹಿನ್ನೆಲೆಯಲ್ಲಿ ಎಂಸಿಐಗೆ ಕೋರಿಕೆ ಸಲ್ಲಿಸಿದ್ದು, ಅದೇ ಕಾರಣಕ್ಕೆ ಶುಕ್ರವಾರ ಎಂಸಿಐನಿಂದ ಪರಿಶೀಲನೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸ್ಪರ್ಧಾತ್ಮಕ ಪರೀಕ್ಷೆ: ನಾಳೆ ಕಾರ್ಯಾಗಾರ
ರಾಯಚೂರು: ಧಾರವಾಡದ ದಿ ಕ್ಲಾಸಿಕ್ ಕೆಎಎಸ್ ಮತ್ತು ಐಎಎಸ್ ಸ್ಟಡಿ ಸರ್ಕಲ್ ಮತ್ತು ಸ್ಪರ್ಧಾ ಸ್ಫೂರ್ತಿ ಮಾಸಪತ್ರಿಕೆ ಸಂಯುಕ್ತಾಶ್ರಯದಲ್ಲಿ ಜ.19ರಂದು ನಗರದಲ್ಲಿ ಒಂದು ದಿನದ ಉಚಿತ ಮಾಹಿತಿ ನೀಡಿಕೆ ಕಾರ್ಯಾಗಾರ ಆಯೋಜಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಅವಶ್ಯವಿರುವ ತಿಳಿವಳಿಕೆ ನೀಡಲು ಈ ಕಾರ್ಯಾಗಾರ ಆಯೋಜಿಸಿದ್ದು, ನಗರದ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಅಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನಡೆಯುವ ಕಾರ್ಯಾಗಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಡೆಸುವ ಸ್ಫರ್ಧಾತ್ಮಕ ಪರೀಕ್ಷೆಗಳಾದ ಐಎಎಸ್, ಕೆಎಎಸ್, ಪಿಎಸೈ, ಪಿಸಿ, ಪಿಡಿಒ, ಡಿಇಡಿ, ಬಿಇಡಿ, ಬ್ಯಾಂಕಿಂಗ್ ಸೇರಿ ವಿವಿಧ ಪರೀಕ್ಷೆಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ, ಮಾರ್ಗದರ್ಶನ ಹಾಗೂ ಮಾಹಿತಿ ನೀಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. ಆಸಕ್ತರು ಕಾರ್ಯಾಗಾರದ ಪ್ರಯೋಜನ ಪಡೆಯಲು ಸಂಸ್ಥೆಯ ನಿರ್ದೇಶಕ ಲಕ್ಷ್ಮಣ ಉಪ್ಪಾರ ಅವರನ್ನು 9980552087 ಗೆ ಸಂಪರ್ಕಿಸಲು ಕೋರಲಾಗಿದೆ.
ಖಾದ್ರಿ ಅಬ್ದುಲ್ ಬಾಷಾ ಉರುಸ್
ಮುದಗಲ್: ಪಟ್ಟಣದಲ್ಲಿನ ಖಾದ್ರಿ ಅಬಲ್ ಬಾಷಾ ಉರುಸ್ ಗುರುವಾರ ಅದ್ಧೂರಿಯಿಂದ ಜರುಗಿತು. ಉರಸ್ ಅಂಗವಾಗಿ ಬುಧವಾರ ರಾತ್ರಿ ಹಳೆಪೇಟೆಯಿಂದ ಪಟ್ಟಣದ ವೆಂಕಟರಾಯನಪೇಟೆವರೆಗೆ ಸಂದಲ್ ಮೆರವಣಿಗೆ ನಡೆಯಿತು. ಮೆರವಣಿಗೆ ತಲುಪಿದ ನಂತರ ದರ್ಗಾದಲ್ಲಿ ಮುಸ್ಲಿಂ ಬಾಂಧವರಿದ ವಿಶೇಷ ಪ್ರಾರ್ಥನೆ ಜರುಗಿತು. ಸಂದಲ್ ಮೆರವಣಿಗೆಯಲ್ಲಿ ಜಾವೂರ ಸಾಬ, ಅಬ್ದುಲ್ ಖಾದೀರ್ ಹಸ್ಮಿ, ಅಬ್ದುಲ್ ರಸೂಲ್, ಜಾಫರ್ ಸಾದಿತ್, ಅಬ್ದುಲ್ ಘನಿ ಹಾಗೂ ಸಯದ್ ಖಾದ್ರಿಸಾಬ್ ಸೇರಿದಂತೆ ಅನೇಕ ಮುಜಾವರಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

