ರಾಯಚೂರಿಗೆ ದಿನ ಬಿಟ್ಟು ದಿನ ನೀರು ಪೂರೈಕೆ
ರಾಯಚೂರು: ರಾಂಪುರ ಮುಖ್ಯ ಜಲಾಶಯದಲ್ಲಿ ಕುಡಿಯುವ ನೀರಿನ ಸಂಗ್ರಹ ಕುಸಿದಿರುವುದರಿಂದ ನಗರದ ಕೆಲ ವಾರ್ಡುಗಳಿಗೆ ದಿನ ಬಿಟ್ಟು ದಿನ ನೀರೊದಗಿಸಲು ನಗರಸಭೆ ಆಡಳಿತ ನಿರ್ಧರಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಪೌರಾಯುಕ್ತರು, ರಾಂಪೂರ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಿರುವ ಹಿನ್ನೆಲೆ ಗಣೇಕಲ್ ಜಲಾಶಯದಿಂದ ಕಾಲುವೆ ಮೂಲಕ ರಾಂಪುರ ಜಲಾಶಯಕ್ಕೆ ನೀರನ್ನು ತುಂಬಿಕೊಳ್ಳುವವರೆಗೆ ನಗರದ ಜನತೆಗೆ ದಿನ ಬಿಟ್ಟು ದಿನ ನೀರು ಪೂರೈಸಲಾಗುತ್ತದೆ ಎಂದು ತಿಳಿಸಿದ್ದಾರೆ. ಐಬಿ ಕಾಲೋನಿ, ಜ್ಯೋತಿ ಕಾಲೋನಿ, ಆಶಾಪುರ ರಸ್ತೆ, ಐಡಿಎಸ್ಸೆಂಟಿ ಲೇಔಟ್, ಅಂದ್ರೂನ್ ಕಿಲ್ಲಾ, ಅರಬ್ ಮೊಹಲ್ಲಾ, ಬೇಸ್ತವಾರಪೇಟ್, ಸಿಯಾತಲಾಬ್, ಸ್ಟೇಷನ್ ಏರಿಯಾ, ರಾಂಪುರ, ಹೊಸೂರು, ಅಸ್ಕಿಹಾಳ, ಕೋಟ್ ತಲ್ಹಾರ, ರಾಮನಗರ, ಗಂಗಾ ನಿವಾಸ, ಇಂದಿರಾನಗರ, ಕಲ್ಲೂರ ಕಾಲೋನಿ, ಮಂಗಳವಾರಪೇಟೆ, ಆರ್.ಆರ್. ಕಾಲೋನಿ, ನಿಜಲಿಂಗಪ್ಪ ಕಾಲೋನಿಗಳಿಗೆ ಜ.18ರಿಂದಲೇ ತಾತ್ಕಾಲಿಕವಾಗಿ ದಿನ ಬಿಟ್ಟು ದಿನ ನೀರೊದಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

