ರಜೆ ರಾಜಕೀಯ!
ವಿಶೇಷ ವರದಿ
ಕ.ಪ್ರ. ವಾರ್ತೆ ರಾಯಚೂರು ಜ.20
ಒಂದೆಡೆ ನಗರದ ಜನತೆ ಸಮಸ್ಯೆಗಳ ಸುಳಿಯಲ್ಲಿದ್ದರೆ ಮತ್ತೊಂದೆಡೆ ನಗರಸಭೆಯಲ್ಲಿ ರಾಜಕೀಯ ಕಿತ್ತಾಟದ ಚಿತ್ರಣ. ಕಳೆದ 6 ತಿಂಗಳಿನಿಂದ ನಗರದ ಅಭಿವೃದ್ಧಿ ನಿಂತೇ ಹೋಗಿದೆ ಎಂಬ ಅಸಮಾಧಾನ ಹೊಗೆಯಾಡುತ್ತಿದ್ದು, ನಗರಸಭೆ ಅಧ್ಯಕ್ಷರನ್ನು ರಜೆಯ ಮೇಲೆ ಕಳಿಸುವ ತಂತ್ರ ಫಲ್ನಿದ ನಂತರ ಎಲ್ಲ ಸದಸ್ಯರು ಅಭಿವೃದ್ಧಿಯ ಮಂತ್ರ ಜಪಿಸುತ್ತಿದ್ದಾರೆ. ಅಷ್ಟೇ ಅಲ್ಲ ಆಡಳಿತದ ಭಾರ ಹೊರಲು ಉಪಾಧ್ಯಕ್ಷರನ್ನು ಸಜ್ಜುಗೊಳಿಸಲಾಗಿದೆ.
ಇಲ್ಲಿನ ನಗರಸಭೆ ಎಂದಿನಿಂದಲೂ ರಾಜಕೀಯ ಕಿತ್ತಾಟ, ಗೊಂದಲದ ಗೂಡು. ಒಂದೆಡೆ ನಗರದ ಜನತೆ ನೀರಿಲ್ಲ, ಕಸ ಗುಡಿಸಲಿಲ್ಲ, ಬೀದಿ ದೀಪಗಳಿಲ್ಲ ಎಂದು ದೂರು ಹಿಡಿದು ಆಡಳಿತದ ಮುಂದೆ ನಿಂತರೆ ನಾಗರಿಕರ ದೂರು ಅರಣ್ಯರೋದನವೇ ಆಗಿದೆ. ಆದರೆ ಅದೇ ಮತ್ತೊಂದೆಡೆ ನಗರಸಭೆಯ ನೂತನ ಆಡಳಿತ ಮಂಡಳಿ ಅ್ನ್ತತ್ವಕ್ಕೆ ಬಂದು ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಪಕ್ಷೇತರರು ಬಂದು ಕುಳಿತಂದಿನಿಂದ ರಾಜಕೀಯ ಪಕ್ಷಗಳ ಸದಸ್ಯರಲ್ಲಿ ಅಸಮಾಧಾನವಿತ್ತು.
ಅಸಮಾಧಾನ ಸ್ಫೋಟ: ಆಗಿನಿಂದ ಹೊಗೆಯಾಡುತ್ತಿದ್ದ ಅಸಮಾಧಾನವೇ ಈಗ ಸ್ಪೋಟ್ನಿದೆ. ಪರಿಣಾಮ ಈಚೆಗೆ ನಗರದ ಖಾಸಗಿ ಹೊಟೇಲ್‌ನಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು ರಾಜಕೀಯ ದ್ವೇಷ ಮರೆತು ಒಂದಾಗಿ ಹಾಲಿ ಅಧ್ಯಕ್ಷೆ ಮಹಾದೇವಿ ಅವರ ವಿರುದ್ಧ ಅವಿಶ್ವಾಸ ಇಲ್ಲವೇ ಅವರ ಮೇಲೆ ರಜೆಗೆ ತೆರಳುವ ಒತ್ತಡ ಹೇರುವ ತಂತ್ರ ರಚ್ನಿದ್ದರೆಂದು ಗೊತ್ತಾಗಿದೆ.
ಅದರಂತೆ ಅಧ್ಯಕ್ಷರಿಗೆ ಈ ಬಗ್ಗೆ ಸಂದೇಶ ರವಾನೆಯಾಗುತ್ತಿದ್ದಂತೆಯೇ ನಗರಸಭೆ ಅಧ್ಯಕ್ಷೆ ಮಹಾದೇವಿ ಅವರು ಅನಾರೋಗ್ಯದ ಕಾರಣವೊಡ್ಡಿ ಎರಡು ತಿಂಗಳ ರಜೆ ಮೇಲೆ ತೆರಳಲು ್ನದ್ಧರಾಗಿದ್ದಾರೆ. ಇದರಿಂದಾಗಿ ಆರು ತಿಂಗಳಿನಿಂದ ನಗರಸಭೆಯ ನೂತನ ಆಡಳಿತ ಮಂಡಳಿಯಲ್ಲಿ ಹೊಗೆಯಾಡುತ್ತಿದ್ದ ಅಸಮಾಧಾನಕ್ಕೆ ಗೆಲುವು ದಕ್ಕದಂತಾಗಿದೆ.
ಬದಲಿ ಕಾರ್ಯಭಾರ: ಈ ಕುರಿತು 'ಕನ್ನಡಪ್ರಭ'ಕ್ಕೆ ಪ್ರತಿಕ್ರಿಯ್ನಿದ ನಗರಸಭೆ ಅಧ್ಯಕ್ಷೆ ಮಹಾದೇವಿ ಅವರು, ತೀವ್ರ ಕೆಮ್ಮು, ಜ್ವರದ ಹಿನ್ನೆಲೆಯಲ್ಲಿ ಎರಡು ತಿಂಗಳು ರಜೆಯ ಮೇಲೆ ತೆರಳಲಿದ್ದು, ತಮ್ಮ ಕಾರ್ಯಭಾರವನ್ನು ಉಪಾಧ್ಯಕ್ಷೆ ಪದ್ಮಾವತಿ ಅವರಿಗೆ ವಹ್ನಿ ಕೊಡುತ್ತಿರುವುದಾಗಿ ಹೇಳಿದ್ದಾರೆ.
ತೀವ್ರ ಅನಾರೋಗ್ಯದ ್ನ್ಥತಿಯಲ್ಲಿಲ್ಲದಿದ್ದರೂ ಎರಡು ತಿಂಗಳು ರಜೆ ಪಡೆಯಲು ಮುಂದಾಗಿರುವುದಕ್ಕೆ ರಾಜಕೀಯ ಪಕ್ಷಗಳು ಹೆಣೆದಿರುವ ಅವಿಶ್ವಾಸದ ಒತ್ತಡವೇ ಕಾರಣ ಎಂದು ಬೇರೆ ಹೇಳಬೇಕಿಲ್ಲ. ಕಾನೂನಿನಲ್ಲಿ 2ತಿಂಗಳು ರಜೆ ಪಡೆಯಲು ಅವಕಾ ಶವಿದೆ. ಅದಕ್ಕೆ ರಜೆಯಲ್ಲಿ ತೆರಳಲಿದ್ದಾರೆಂಬ ನಗರಸಭೆಯ ಸದಸ್ಯರನೇಕರ ಮಾತುಗಳು ಈಗ ನಗರಸಭೆಯಲ್ಲಿನ ವಾಸ್ತವವನ್ನು ಹೊರಗೆಡವಿದೆ. ಒಟ್ಟಿನಲ್ಲಿ ನಗರಸಭೆ ಮತ್ತೆ ವಿವಾದದ ಕೇಂದ್ರವಾಗಿ ನಗರದ ಜನತೆಯ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸದೇ ಕೇವಲ ರಾಜಕಿಯ ಕಿತ್ತಾಟದಲ್ಲಿಯೇ ಕಾಲಹರಣವಾಗುತ್ತಿದೆ ಎಂಬ ಆರೋಪ ನಾಗರಿಕರದು. ಅಷ್ಟೇ ಅಲ್ಲ ವಿವಿಧ ಸಂಘಟನೆಗಳು ನಿರಂತರ ಹೋರಾಟಕ್ಕೆ ಮುಂದಾಗುವಂಥ ಪರ್ನ್ಥಿತಿಗೆ ನಗರಸಭೆ ಆಡಳಿತದ ಕಾರ್ಯವೈಖರಿ ದಾರಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

