ರಾಯಚೂರು

ಡಬ್ಬಿಂಗ್ ಸಂಸ್ಕೃತಿಯಿಂದ ಚಿತ್ರರಂಗಕ್ಕೆ ಅನಾಹುತ

Published On :

ಲಿಂಗಸ್ಗೂರು: ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ಸಂಸ್ಕೃತಿ ಅನಾಹುತಕ್ಕೆ ಕಾರಣವಾಗಲಿದೆ ಎಂದು ಆರೋಪಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಕಚೇರಿ ಶಿರಸ್ತೇದಾರರಿಗೆ ಮನವಿ ಸಲ್ಲಿಸಿದರು.
ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ಚಿತ್ರಗಳು ಕನ್ನಡ ಭಾಷೆ, ಸಂಸ್ಕೃತಿ, ಭಾಷಾ ವೈವಿದ್ಯತೆ, ದೇಶೀಯ ಘನತೆ ಮತ್ತು ಸೊಗಡು ಇದರಿಂದಾಗಿ ಭಾಷೆಯಲ್ಲಿ ಪ್ರಾದೇಶಿಕತೆ ತರುವ ಉಳಿಮೆಯಲ್ಲಿ ಡಬ್ಬಿಂಗ್ ಅವಾಂತರದಲ್ಲಿ ಭಾಷಾ ನಿರೂಪ ಅಥವಾ ಕೊಲೆ ಎನ್ನಬಹುದಾಗಿದೆ. ಕಲಾವಿದರು, ತಂತ್ರಜ್ಞರು, ಸಾಹಿತಿಗಳು, ಕಾರ್ಮಿಕರು ಮತ್ತು ಇತರ ವರ್ಗಗಳಿಗೆ ತಲೆದೂರುವ ನಿರುದ್ಯೋಗ ಡಬ್ಬಿಂಗ್‌ನಿಂದ ಸಾಧ್ಯ ಎಂಬುದು ಅನಾಹುತಕ್ಕೆ ಕಾರಣವಾಗುತ್ತದೆ. ಕನ್ನಡಿಗರನ್ನು ಬಡಿದೆಬ್ಬಿಸಿ ಕನ್ನಡತನ ತುಂಬದಿದ್ದರೆ ಕನ್ನಡ ಭಾಷೆ ಬದುಕಲು ಸಾಧ್ಯವಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಸರ್ಕಾರ ಕೂಡಲೇ ಗಮನ ಹರಿಸಿ ಕನ್ನಡ ಚಿತ್ರರಂಗಕ್ಕೆ ನ್ಯಾಯ ದೊರಕಿಸಿ ಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕರವೇ ಮುಖಂಡರಾದ ರಾಜೇಶ ಮಾಣಿಕ್, ನಾಗರಾಜ ತಿಪ್ಪಣ್ಣ, ಎಸ್. ಬಾಬು ನಾಯಕ, ಬಂಗಾರೆಪ್ಪ ಸಾಹುಕಾರ, ವಿನೋದಗೌಡ, ವೀರಭದ್ರಗೌಡ, ವಿಜಯಕುಮಾರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.