ಹಳ್ಳದ ನೀರು ತಡೆ ವಿರೋಧಿಸಿ ಧರಣಿ
ಸಿಂಧನೂರು: ತಾಲೂಕಿನ ನಿಡಿಗೋಳ ಗ್ರಾಮದ ಮುಂದೆ ಹರಿಯುತ್ತಿರುವ ಹಳ್ಳದ ನೀರಿಗೆ ತಡೆ ಹಾಕಿದ ಪರಿಣಾಮ ಜಮೀನಗಳಿಗೆ ತೊಂದರೆಯಾಗುತ್ತಿದ್ದು, ಇದನ್ನು ತಪ್ಪಿಸಬೇಕೆಂದು ಆಗ್ರಹಿಸಿ ನಿಡಿಗೋಳ ಗ್ರಾಮಸ್ಥರು ತಹಸೀಲ್ದಾರ್ ಕಚೇರಿ ಎದುರು ಧರಣಿ ನಡೆಸಿ, ನಂತರ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಹಳ್ಳದ ದಂಡೆಯ ಜಮೀನಿನ ಮಾಲೀಕರು ಹಳ್ಳವನ್ನು ಮುಚ್ಚಿರುವುದರಿಂದ ಹಳ್ಳದಲ್ಲಿ ಸಾಕಷ್ಟು ನೀರು ನಿಂತು ಹಳ್ಳದ ಉತ್ತರಕ್ಕೆ ಇರುವ ಜಮೀನುಗಳನ್ನು ಸಾಗುವಳಿ ಮಾಡಲು ತೊಂದರೆಯಾಗುತ್ತಿದೆ. ಈ ಕುರಿತು ಈಗಾಗಲೇ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗದ ಕಾರಣ ಅನಿವಾರ್ಯವಾಗಿ ಹೋರಾಟದ ಮಾರ್ಗ ಅನುಸರಿಸಬೇಕಾಗಿದೆ. ಶೀಘ್ರದಲ್ಲಿ ಸಮಸ್ಯೆಗೆ ಪರಿಹಾರ ಒದಗಿಸದಿದ್ದರೆ ರೈತ- ರೈತರ ಮಧ್ಯೆ ಸಂಘರ್ಷ ಆರಂಭವಾಗುತ್ತವೆ. ಆಗ ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆ ಎಂದು ಗ್ರಾಮಸ್ಥರಾದ ಅಮರೇಗೌಡ ಮಾಲೀಪಾಟೀಲ ಎಚ್ಚರಿಸಿದರು.
ಸೇತುವೆ ನಿರ್ಮಿಸಿ: ಶಾಲೆಗೆ ಬರುವ ಮಾರ್ಗ ಮಧ್ಯದಲ್ಲಿ ದೊಡ್ಡ ಹಳ್ಳವಿದ್ದು ಅದನ್ನು ದಾಟಲು ಸೇತುವೆಯಿಲ್ಲ. ಮಳೆಗಾಲದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೂ ಸಂಚರಿಸುವುದಕ್ಕೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಕೆಲ ವೇಳೆ ಅಧ್ಯಯನ ಹಾಗೂ ಪಾಠ ಪ್ರವಚನ ಸರಿಯಾಗಿ ನಡೆಯುವುದಿಲ್ಲ. ಇದರಿಂದ ಮಕ್ಕಳ ಶಿಕ್ಷಣದ ಗುಣಮಟ್ಟ ಕುಸಿಯುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಕಾರಣ ಕೂಡಲೇ ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕೆಂದು ನಿಡಿಗೋಳ ಕ್ಯಾಂಪ್ನ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಧ್ಯಾಯರು ಹಾಗೂ ಎಸ್ಡಿಎಂಸಿ ಅಧ್ಯಕ್ಷ ಬಾಲಸ್ವಾಮಿ ಮಕ್ಕಳ ಪರವಾಗಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. ಗ್ರಾಮದ ಮುಖಂಡರಾದ ಶರಣಪ್ಪ ನಿಡಿಗೋಳ, ಮಲ್ಲಪ್ಪ ಕಾರಲಕುಂಟಿ, ಈಶಪ್ಪ, ಶಿವಪುತ್ರಯ್ಯ ಸ್ವಾಮಿ, ವೆಂಕನಗೌಡ ಗದ್ರಟಗಿ, ಶಿವರಾಜ ಪಾಟೀಲ, ಹನಮೇಶ ಬಾಗೋಡಿ ಧರಣಿಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

